
ಅಂಕೋಲಾ : ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ,ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ತೆಂಕಣಕೇರಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಗೌತಮ ಪ್ರಭಾಕರ ನಾಯ್ಕ(24) ಮೃತ ದುರ್ದೈವಿಯಾಗಿದ್ದು, ಮನೆಯಲ್ಲಿ ಯಾರು ಇರದ ವೇಳೆ ಅದಾವುದೋ ಕಾರಣದಿಂದ ಮಾನಸಿಕವಾಗಿ ನೊಂದು ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಕೋವಿಡ್ ಲಾಕ್ಡೌನ್ ಕಾರಣ ಮನೆಯಿಂದಲೇ ಕಂಪನಿ ಕೆಲಸ ( ವರ್ಕ್ ಪ್ರಾಂ ಹೋಂ) ಮಾಡುತ್ತಿದ್ದು, ಸಾವಿಗೆ ಶರಣಾಗುವ ಪೂರ್ವವೂ ಕೆಲ ಹೊತ್ತು ಕಾರ್ಯ ನಿರ್ವಹಿಸಿದಂತಿದೆ ಎನ್ನುವುದು ಕೆಲ ಸ್ಥಳೀಯರ ಅಭಿಪ್ರಾಯವಾಗಿದೆ. ಮೃತ ಗೌತಮ ಶಾಂತ ಸ್ವಭಾವದ ಯುವಕ ನಾಗಿದ್ದು, ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ ಇರುತ್ತಿದ್ದು, ಆತನ ಆಕಸ್ಮಿಕ ನಿಧನದ ಸುದ್ದಿಗೆ ಊರಲ್ಲಿ ನೀರವ ಮೌನ ಆವರಿಸಿದಂತಿದೆ.
ಮೃತನ ತಾಯಿ ಶಿಕ್ಷಣ ಇಲಾಖೆಯಲ್ಲಿ ಸಿ. ಆರ್. ಪಿ.ಯಾಗಿ ಸೇವೆ ಸಲ್ಲಿಸುತ್ತಿದ್ದು,ಈ ಹಿಂದಿನ ಕಹಿ ಘಟನೆ ಮರೆತು, ಪತಿಯ ಸಾವಿನ ದುಃಖ ಮರೆಯುವ ಮುನ್ನವೇ,ಮುದ್ದಿನ ಮಗನನ್ನು ಕಳೆದುಕೊಂಡು ರೋದಿಸುವಂತಾಗಿರುವುದು ವಿಪರ್ಯಾಸವೇ ಸರಿ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಕಲಿಕಾ ಸಾಮಗ್ರಿ ವಿತರಣೆ ನೆಪದಲ್ಲಿ ನೆರವು ನೀಡುವುದು ಬೇಡವೇ ಬೇಡ : JSW ಕಂಪನಿ ವಿರುದ್ಧ ಮತ್ತೆ ಸ್ಥಳೀಯ ಮೀನುಗಾರರ ಆಕ್ರೋಶ
- ವಿವೇಕನಗರ ವಿಕಾಸ ಸಂಘದಿಂದ ‘ಮಾಸದ ಕಾರ್ಯಕ್ರಮ
- ಅಂಕೋಲಾ ರೂರಲ್ ರೋಟರಿ ಕ್ಲಬ್ ಅಧ್ಯಕ್ಷರಾಗಿ ಪುಷ್ಪಲತಾ ನಾಯಕ, ಕಾರ್ಯದಶಿಯಾಗಿಸದಾನಂದ ಆಯ್ಕೆ
- ಕುಮಟಾದ ತಾಲೂಕಾಡಳಿತ ಸೌಧಕ್ಕೆ ಮುತ್ತಿಗೆ: ಏನಾಯ್ತು ನೋಡಿ?
- ಅಂಗಡಿ ಕೆಲಸಕ್ಕೆ ಹೋದ ಯುವತಿ ನಾಪತ್ತೆ