ಬೊಲೆರೋ ಮತ್ತು ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ: ಮದುವೆ ಹೋಗುತ್ತಿದ್ದವರೂ ಸೇರಿ 14 ಮಂದಿ ಗಾಯ
ದಾಂಡೇಲಿ: ಕ್ರೂಸರ್ ಮತ್ತು ಬೊಲೆರೋ ಮುಖಾಮುಖಿ ಡಿಕ್ಕಿಯಾಗಿ ಎರಡೂ ವಾಹನದಲ್ಲಿದ್ದ ಒಟ್ಟು 15 ಪ್ರಯಾಣಿಕರು ಗಾಯಗೊಂಡ ಘಟನೆ ದಾಂಡೇಲಿ ಸಮೀಪ್ ಅಂಬಿಕಾನಗರ-ಕುಳಗಿ ರಸ್ತೆಯಲ್ಲಿ ನಡೆದಿದೆ. ದಾಂಡೇಲಿಯಿoದ ಅಂಕೋಲಾ ಕಡೆಗೆ ಮದುವೆಗೆಂದು ಹೋಗುತ್ತಿದ್ದ ಕ್ರೂಸರ್ ಹಾಗು ಹಾಗೂ ಅಂಬಿಕಾನಗರದಿoದ ದಾಂಡೇಲಿ ಕಡೆಗೆ ಬರುತ್ತಿದ್ದ ಬೊಲೆರೋ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಕ್ರೂಸರ್ ಮೂರು ಪಲ್ಟಿಯಾಗಿ ಕೆಳಗೆ ಬಿದ್ದಿದೆ. ಬೊಲೆರೋದಲ್ಲಿದ್ದ ಅಂಬಿಕಾನಗರದ 4 ವರ್ಷದ ಬಾಲಕ ಸುಮೀತ್ ಪಾವಣೆಗೆ ಕಣ್ಣಿನ ಮೇಲೆ ಮತ್ತು ಕ್ರೂಸರಿನಲ್ಲಿದ್ದ ನಗರದ ಅಂಬೇವಾಡಿ ನಿವಾಸಿ ಸಂದೀಪ ನಾಯ್ಕ ಅವರ ಕಾಲಿಗೆ ಗಂಭೀರ ಗಾಯವಾಗಿದೆ. ಉಳಿದವರಿಗೂ ಸಣ್ಣಪುಟ್ಟ ಗಾಯವಾಗಿದೆ.ಅಪಘಾತಕ್ಕೀಡಾದ ಎರಡು ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿದೆ.
ಘಟನೆಗೆ ಅತಿಯಾದ ವೇಗದ ಚಾಲನೆಯೆ ಕಾರಣವೆಂದು ತಿಳಿದು ಬಂದಿದ್ದು, ಪೊಲೀಸ್ ತನಿಖೆಯಿಂದ ಸತ್ಯ ಹೊರ ಬರಬೇಕಾಗಿದೆ. ಗ್ರಾಮೀಣ ಮತ್ತು ನಗರ ಠಾಣೆಯ ಪೊಲೀಸರು ಹಾಗೂ 112 ತುರ್ತು ವಾಹನದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಗಾಯಾಳುಗಳಿಗೆ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ಕಳುಹಿಸಿಕೊಡಲಾಗಿದೆ.
ವಿಸ್ಮಯ ನ್ಯೂಸ್, ಕಾರವಾರ