Important
Trending

ಸ್ನಾನ ಮಾಡುತ್ತಿರುವ ವಿಡಿಯೋವನ್ನು ವೈರಲ್ ಮಾಡಿದ್ದಾನೆ ಎಂದ ದೂರಿದ ಮಹಿಳೆ: ಪ್ರಮುಖ ರಾಜಕೀಯ ಪಕ್ಷದ ನಗರ ಘಟಕದ ಅಧ್ಯಕ್ಷನ ವಿರುದ್ಧ ಕೇಳಿಬಂದಿದೆ ಗಂಭೀರ ಆರೋಪ?

ಹೊನ್ನಾವರ: ಪ್ರಮುಖ ರಾಜಕೀಯ ಪಕ್ಷದ ನಗರ ಘಟಕದ ಅಧ್ಯಕ್ಷನೊಬ್ಬ ಪಟ್ಟಣದ ಮಹಿಳೆಯೊಬ್ಬಳು ಸ್ನಾನ ಮಾಡುತ್ತಿರುವ ವಿಡಿಯೋವನ್ನು ವೈರಲ್ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದೆ. ಈ ಕುರಿತು ಸಂತ್ರಸ್ತ ಮಹಿಳೆ ಹೊನ್ನಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಮಹಿಳೆಯ ಗಂಡನ ಮೊಬೈಲ್ ಸಹಿತ ತಾಲೂಕಿನಾಧ್ಯಂತ ನೂರಾರು ಮಂದಿಯ ಮೊಬೈಲ್ ಗೆ ಈ ವಿಡಿಯೋ ಹರಿದಾಡಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಈ ರಾಜಕೀಯ ವ್ಯಕ್ತಿಯ ಅಸಲಿ ಮುಖ ಬಯಲಾಗಿದೆ ಎನ್ನಲಾಗಿದೆ. ಈ ಘಟನೆಯಿಂದ ಇವರ ಪಕ್ಷಕ್ಕೆ ಮುಜುಗರ ಉಂಟಾಗಿದೆ.

ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಈತ ಒಮ್ಮೆ ತನ್ನ ಆಟೋ ಹತ್ತಿದ್ದ ಮಹಿಳೆಯ ಪೋನ್ ನಂಬರ್ ಪಡೆದುಕೊಂಡು ಸಲುಗೆಯಿಂದ ನಡೆದುಕೊಳ್ಳುತ್ತಿದ್ದ. ಇಬ್ಬರ ನಡುವಿನ ಸಲುಗೆಯನ್ನು ಬಳಸಿಕೊಂಡು ಮಹಿಳೆಯ ಬಳಿ ವಿಡಿಯೋ ತೆಗೆದುಕೊಂಡಿದ್ದ ಎನ್ನಲಾಗಿದೆ. ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆ ದೂರಿನಲ್ಲಿ ಆಗ್ರಹಿಸಿದ್ದಾಳೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ, ಹೊನ್ನಾವರ

Back to top button