Important
Trending

ಅಡ್ಡಲಾಗಿ ಬಂದ ಕಾರು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ: ನಾಲ್ವರಿಗೆ ಗಂಭೀರ ಗಾಯ

ಹೊನ್ನಾವರ: ಅಡ್ಡಲಾಗಿ ಬಂದ ದನವನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿಯಾದ ಘಟನೆ ಕಾಸರಕೋಡ್ ಸಮೀಪ ರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಟ್ಕಳ ಕಡೆಯಿಂದ ಹೊನ್ನಾವರ ಅತಿವೇಗವಾಗಿ ಅಜಾಗರೂಕತೆಯಿಂದ ಕಾರ್ ಚಲಾಯಿಸಿಕೊಂಡು ಬಂದವನು ಕಾಸರಕೋಡ ಇಕೋ ಬೀಚ್ ಕ್ರಾಸ್ ಹತ್ತಿರ ರಸ್ತೆಗೆ ಅಡ್ಡಲಾಗಿ ಬಂದ ದನವೊಂದನ್ನು ತಪ್ಪಿಸಲು ಹೋಗಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದಾನೆ.

ಆರೋಪಿ ಚಾಲಕ ಚಿತ್ರದುರ್ಗ ಜಿಲ್ಲೆಯ ನೆಹರು ನಗರದ ಶಶಿಕುಮಾರ ಎಂದು ಗುರುತಿಸಲಾಗಿದ್ದು, ಈತನಿಗೂ ಪೆಟ್ಟಾಗಿದೆ. ಕಾರಿನಲ್ಲಿದ್ದ ಮಂಡ್ಯ ಜಿಲ್ಲೆಯ ಧೀರಜ್‌ಕುಮಾರ, ಚಿತ್ರದುರ್ಗ ಜಿಲ್ಲೆಯ ನೆಹರು ನಗರದ ರಾಘವೇದ್ರ, ಶ್ರೀನಿವಾಸ ಎನ್ನುವವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸುಗಮ ಸಂಚಾರಕ್ಕೆ ಮಾಡಿಕೊಟ್ಟಿದ್ದಾರೆ.

ವಿಸ್ಮಯ ನ್ಯೂಸ್, ಹೊನ್ನಾವರ

ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗು ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ… ನೆಲದಿಂದಲೇ 80 ರಿಂದ ನೂರು ಅಡಿಯವರೆಗೆ ಮದ್ದು ಹೊಡೆಯಲು, ಕೊನೆ ಕೊಯ್ಯಲು ಇದೀಗ ದೋಟಿ ಬಂದಿದೆ. ಈ ದೋಟಿ ತುಂಬಾ ಹಗುರವಾಗಿದ್ದು, ಕಾರ್ಮಿಕರು, ಮನೆ ಮಾಲೀಕ ಸೇರಿ ಯಾರು ಬೇಕಾದರು ಸುಲಭವಾಗಿ ಬಳಸಬಹುದಾಗಿದೆ. ಇದರಲ್ಲಿ ದಿನಕ್ಕೆ ಒಂದು ಸಾವಿರದಿಂದ 2 ಸಾವಿರ ಅಡಿಕೆಕೊನೆ ಕೊಯ್ಯಬಹುದು. ಕತ್ತು ನೋವು, ಬೆನ್ನುನೋವಿನ ಸಮಸ್ಯೆ ಇಲ್ಲದೆ, ದಿನಕ್ಕೆ ಎರಡು ರಿಂದ ನಾಲ್ಕು ಎಕರೆ ತನಕ ಮದ್ದು ಹೊಡೆಯಬಹುದು. ಬಹುಪಯೋಗಿ ಈ ದೋಟಿ ರೈತರ ಹಣ ಉಳಿತಾಯ ಮಾಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ. 7259350487, 8217319091

Back to top button