Important
Trending

ರಸ್ತೆಯಲ್ಲಿ ಕಾಣಿಸಿಕೊಂಡ ಬೃಹತ್ ಹುಲಿ: ಸುತ್ತಮುತ್ತಲಿನ ಜನತೆಯಲ್ಲಿ ಮನೆ ಮಾಡಿದ ಆತಂಕ

ಕಾರವಾರ: ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿದ್ದು , ಇವುಗಳನ್ನು ಕಂಡು ಜನರು ಭಯ ಬಿದ್ದುಕೊಂಡಿರುವ ಘಟನೆ ನಡೆಯುತ್ತಿದೆ. ಇದೀಗ ಇಳಕಲ್- ಕದ್ರಾ ರಾಜ್ಯ ಹೆದ್ದಾರಿಯಲ್ಲಿ ಯಲ್ಲಾಪುರ ತಾಲ್ಲೂಕಿನ ಬಾರೆಯ ಸಮೀಪ ಕದ್ರಾ ರಸ್ತೆಯಲ್ಲಿ ಹುಲಿಯೊಂದು ರಾತ್ರಿಯ ಸಮಯದಲ್ಲಿ ಕಂಡು ಬಂದಿದ್ದು, ಸುತ್ತಮುತ್ತಲಿನ ಸಾರ್ವಜನಿಕರು ಭಯಗೊಂಡಿದ್ದಾರೆ.

ಕದ್ರಾಕ್ಕೆ ಹೋಗುವ ರಾಜ್ಯ ಹೆದ್ದಾರಿಯ ಅಂಚಿನಲ್ಲಿ ಹುಲಿ ಮಲಗಿತ್ತು. ಬೈಕ್ ಸವಾರರೊಬ್ಬರು ಅದನ್ನು ನೋಡೊದ್ದಾರೆ. ಹೆದ್ದಾರಿಯಲ್ಲಿ ಸಂಚರಿಸಿದ ಹುಲಿಯು, ರಸ್ತೆಯ ಪಕ್ಕದಲ್ಲಿಳಿದು ಹೋಗಿದೆ. ಅದೇ ರೀತಿ, ಇಡಗುಂದಿ ವಲಯ ಅರಣ್ಯ ಕಚೇರಿಯ ಸಿಬ್ಬಂದಿ ಈ ಭಾಗಕ್ಕೆ ಗಸ್ತು ತಿರುಗಾಟಕ್ಕೆ ಹೋದಾಗಲೂ ಕಾಣಿಸಿಕೊಂಡಿದೆ.

ಈ ಕುರಿತು ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿಗಳು, ಈ ಪ್ರದೇಶವು ಕದ್ರಾ ವನ್ಯಜೀವಿ ವಲಯದಲ್ಲಿದ್ದು, ಹುಲಿ ವಾಸ ಸಾಮಾನ್ಯವಾಗಿದೆ. ದಟ್ಟ ಅರಣ್ಯದೊಳಗೆ ಇರುವ ಹುಲಿ ಅಪರೂಪಕ್ಕೆ ಹೆದ್ದಾರಿಗೆ ಬಂದಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಇದರ ಚಲನವಲನ ಗಮನಿಸುತ್ತಿದ್ದಾರೆ. ಇದರಿಂದ ಯಾವುದೇ ಅಪಾಯವಾಗಿಲ್ಲ. ಜನ ಭಯಭೀತರಾಗುವ ಅಗತ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button