Join Our

WhatsApp Group
Important
Trending

ಕ್ಷುಲ್ಲಕ ಕಾರಣಕ್ಕೆ ಜಗಳ: ಜಗಲಿ ಕಟ್ಟೆ ಮೇಲೆ ಹೂವು ಕಟ್ಟುತ್ತಾ ಕುಳಿತಿದ್ದ ಹೆಂಡತಿ ಮೇಲೆ ಗಂಡನಿಂದ ಮಾರಣಾಂತಿಕ‌ ಹಲ್ಲೆ : ಹೆಂಡತಿ ಸಾವು

ಸಿದ್ದಾಪುರ: ಕ್ಷುಲ್ಲಕ ಕಾರಣಕ್ಕೆ ಹೆಂಡತಿ ಮೇಲೆ ಗಂಡ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಹೆಂಡತಿಯನ್ನು ಕೊಂದು ಹಾಕಿದ ಘಟನೆ ತಾಲೂಕಿನ ಹೆಗ್ಗೋಡ್ ಮನೆ ಯಲ್ಲಿ ನಡೆದಿದೆ.

ನಾಗರತ್ನ ಮಂಜುನಾಥ್ ಚನ್ನಯ್ಯ 38 ಮೃತ ಮಹಿಳೆ.
ಮಂಜುನಾಥ್ ಕೇರಿಯ ಚೆನ್ನಯ್ಯ ಎನ್ನುವವರ ವಿರುದ್ಧ ಈ ಕುರಿತು ಠಾಣೆಯಲ್ಲಿ ದೂರು ದಾಖಲಾಗಿದೆ . ಆರೋಪಿ ವಿಪರೀತ ಸಾರಾಯಿ ಕುಡಿಯುವ ಹವ್ಯಾಸ ರೂಡಿಸಿಕೊಂಡಿದ್ದು, ಆಗಾಗ ಹೆಂಡತಿಯ ಜೊತೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ.

ಬೆಳಿಗ್ಗೆ ಎಂದಿನಂತೆ ಗಂಡ ಹೆಂಡತಿಯ ನಡುವೆ ಕ್ಷುಲ್ಲಕ ಕಾರಣ ಕ್ಕೆ ಗಲಾಟೆ ನಡೆದು ಮನೆಯ ಜಗಲಿ ಕಟ್ಟೆ ಮೇಲೆ ಹೂವು ಕಟ್ಟುತ್ತಾ ಕುಳಿತಿದ್ದ ಹೆಂಡತಿಗೆ ಕತ್ತಿಯಿಂದ ಕುತ್ತಿಗೆಗೆ, ತಲೆಗೆ ಮಾರಣಾoತಿಕ ಹಲ್ಲೆ ನಡೆಸಿದ್ದು , ಮೃತಪಟ್ಟಿದ್ದಾಳೆ. ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸ ರು ತನಿಖೆ ಮುಂದುವರೆಸಿದ್ದಾರೆ.

ವಿಸ್ಮಯ ನ್ಯೂಸ್ ದಿವಾಕರ ಸಂಪಖಂಡ

Back to top button