Follow Us On

WhatsApp Group
Focus News
Trending

ಹಿರೇಗುತ್ತಿ ಹೈಸ್ಕೂಲಿನಲ್ಲಿ ವಿಶ್ವ ಯೋಗ ದಿನಾಚರಣೆ-2022

ಕುಮಟಾ: “ಯೋಗ ಎನ್ನುವುದು ಮನಸ್ಸನ್ನು ಶಾಂತಗೊಳಿಸಿ ವರ್ತಮಾನದಲ್ಲಿ ದೇಹ ಹಾಗೂ ಮನಸ್ಸನ್ನು ಏಕಾಗೃತೆಗೊಳಿಸುವ ಕ್ರಿಯೆಯಾಗಿದೆ” ಎಂದು ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘದ ಸದಸ್ಯರಾದ ನಿವೃತ್ತ ಶಿಕ್ಷಕರಾದ ನಾಗೇಶ ಟಿ ನಾಯಕ ನುಡಿದರು.
ಅವರು ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್ ಮತ್ತು ಗ್ರಾಮ ಪಂಚಾಯತ್ ಹಿರೇಗುತ್ತಿ ಇವರ ಸಂಯುಕ್ತಾಶ್ರಯದಲ್ಲಿ ಹೈಸ್ಕೂಲಿನಲ್ಲಿ ನಡೆದ ವಿಶ್ವ ಯೋಗದಿನಾಚರಣೆ 2022 ಉದ್ಘಾಟಿಸಿ ಮಾತನಾಡಿದರು. “ಮಾನಸಿಕ ಸ್ಥಿಮಿತವಿಲ್ಲದ ಮನುಷ್ಯ ಹಲವಾರು ಒತ್ತಡಗಳಿಗೆ ಸಿಲುಕಿ ವಿವಿಧ ರೀತಿಯ ರೋಗಗಳಿಗೆ ಬಲಿಯಾಗುತ್ತಿದ್ದಾನೆ, ಸರಿಯಿಲ್ಲದ ಜೀವನಶೈಲಿ, ಸ್ಥಿಮಿತವಿಲ್ಲದ ಮನಸ್ಸು ಇದಕ್ಕೆ ಕಾರಣ ಇಂತಹ ಸಮಸ್ಯೆಗಳನ್ನು ಯೋಗಾಭ್ಯಾಸದ ಮೂಲಕವಾಗಿ ಪರಿಹರಿಸಿಕೊಳ್ಳಬಹುದಾಗಿದೆ” ಎಂದರು.

ಹೈಸ್ಕೂಲ್ ಮುಖ್ಯಾಧ್ಯಾಪಕರಾದ ರೋಹಿದಾಸ ಎಸ್ ಗಾಂವಕರ ಮಾತನಾಡಿ ‘ಯೋಗಃ ಚಿತ್ತ ವೃತ್ತಿ ನಿರೋಧಃ’ ಮನಸ್ಸಿನಲ್ಲಿ ಏಳುವ ಅಲೆಗಳ ನಿರೋಧವೇ ಯೋಗ ಎಂದರು. ಯೋಗ ಮನಸ್ಸಿನ ಚಂಚಲತೆ ಹೋಗಲಾಡಿಸಿ ಮನೋನಿಗ್ರಹಕ್ಕೆ ಉತ್ತಮ ಆರೋಗ್ಯಕ್ಕೆ ಸಮುದಾಯದ ಉದ್ಧಾರಕ್ಕೆ ಯೋಗ ಬಳಕೆಯಾಗಲಿ” ಎಂದರು.

ದೈಹಿಕ ಶಿಕ್ಷಕರಾದ ನಾಗರಾಜ ನಾಯಕ ನಿರ್ದೇಶನದಂತೆ ಹೈಸ್ಕೂಲ್ ವಿದ್ಯಾರ್ಥಿಗಳು ಯೋಗಾಸನದ ವಿವಿಧ ಆಸನಗಳ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು. ನಂತರ ವಿದ್ಯಾರ್ಥಿಗಳಿಗೆ “ಪುರಾತನ ಕಾಲದಿಂದಲೂ ಯೋಗಾಭ್ಯಾಸವನ್ನು ಭಾರತದಲ್ಲಿ ಜೀವನದ ಒಂದು ಭಾಗವಾಗಿ ಪಾಲಿಸುತ್ತಾ ಬಂದಿದ್ದಾರೆ. ಉತ್ತಮ ಆರೋಗ್ಯವನ್ನು ಅಭಿವೃದ್ಧಿ ಪಡಿಸುವಲ್ಲಿ ಯೋಗವು ಮಹತ್ವದ ಸ್ಥಾನವನ್ನು ಹೊಂದಿದೆ” ಎಂದು ತಿಳಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ನಾಗರತ್ನ ಉಮೇಶ ಗಾಂವಕರ, ವೀಣಾ ಸಣ್ಣಪ್ಪ ನಾಯಕ, ರಮಾಕಾಂತ ಹರಿಕಂತ್ರ, ಗ್ರಾಮ ಪಂಚಾಯತ ಕಾರ್ಯದರ್ಶಿ ಸಂಧ್ಯಾ ಎಮ್ ಗಾಂವಕರ, ವಿಠ್ಠಲ್ ಎಸ್ ಪೆಡ್ನೇಕರ್, ಕಮಲಾಕರ ಹರಿಕಂತ್ರ, ಬಸ್ತೇಂವ್ ಫ್ರಾನ್ಸಿಸ್ ಫರ್ನಾಂಡೀಸ್, ಶಿಕ್ಷಕರಾದ ಬಾಲಚಂದ್ರ ಹೆಗಡೆಕರ್, ವಿಶ್ವನಾಥ ಬೇವಿನಕಟ್ಟಿ, ಬಾಲಚಂದ್ರ ಅಡಿಗೋಣ, ಇಂದಿರಾ ನಾಯಕ ಜಾನಕಿ ಗೊಂಡ, ಶಿಲ್ಪಾ ನಾಯಕ, ಕವಿತಾ ಅಂಬಿಗ, ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯ್ಕ ಉಪಸ್ಥಿತರಿದ್ದರು. ಕಾರ್ಯಕ್ರಮವು ಕಾಂಚಿಕಾ ಸಂಗಡಿಗರ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು. ಎನ್ ರಾಮು ಹಿರೇಗುತ್ತಿ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಹಾದೇವ ಗೌಡ ವಂದಿಸಿದರು.

Back to top button