
ಶಿರಸಿ: ಅತಿವೇಗವಾಗಿ ಬಂದ ಸಾರಿಗೆ ಸಂಸ್ಥೆಯ ಬಸ್ಸೊಂದು ಎದುರಿನಿಂದ ಬರುತ್ತಿದ್ದ, ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ಶಿರಸಿ-ಹುಬ್ಬಳ್ಳಿ ರಸ್ತೆಯ ಸಣ್ಣಕೇರಿ ಸಮೀಪ ಸಂಭವಿಸಿದೆ. ಅಪಘಾತದ ಹಿನ್ನಲೆಯಲ್ಲಿ ಬೊಲೆರೊ ವಾಹನದಲ್ಲಿದ್ದ ಇಬ್ಬರಿಗೆ ತೀವ್ರವಾದ ಗಾಯವಾಗಿದೆ. ಬೊಲೆರೊ ವಾಹನದಲ್ಲಿದ್ದ ರವೀಶ ಭಟ್ಟ ಯಲ್ಲಾಪುರ ಹಾಗೂ ಕೇಶವ ನಾಯ್ಕ ಸಾಗರ್ ತೀವ್ರವಾಗಿ ಗಾಯಗೊಂಡವರಾಗಿದ್ದಾರೆ.
- ಹೆಂಡತಿಗೆ ಊಟ ತಯಾರಿ ಮಾಡಲು ಹೇಳಿ ಕುಳಿತಲ್ಲಿಯೇ ಮೃತಪಟ್ಟ ಪಶು ಚಿಕಿತ್ಸಾಲಯದ ನೌಕರ
- ಬೃಹತ್ ಶೋರೂಮ್ ಬ್ರೌನ್ವುಡ್ ನಲ್ಲಿ 12 ಉದ್ಯೋಗಾವಕಾಶಗಳು: ಇಂದೇ ಸಂಪರ್ಕಿಸಿ
ಹುಬ್ಬಳ್ಳಿ ಕಡೆಗೆ ಬೊಲೆರೊ ಹೋಗುತ್ತಿದ್ದು, ಇದೇ ಸಮಯದಲ್ಲಿ ಹುಬ್ಬಳ್ಳಿಯಿಂದ ಶಿರಸಿಗೆ ಬರುತ್ತಿದ್ದ ರಸ್ತೆ ಸಾರಿಗೆ ಸಂಸ್ಥೆಯ ವೇಗವಾಗಿ ಬಂದು, ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ವಿಸ್ಮಯ ನ್ಯೂಸ್ ಶಿರಸಿ