Focus News
Trending

“ನನ್ನ ಮಣ್ಣು ನನ್ನ ದೇಶ” ಅಭಿಯಾನ: ಹಲವೆಡೆ ಸಂಚರಿಸಿದ ಜಾಗೃತಿ ಜಾಥಾ

ಹೊನ್ನಾವರ: ಜಿಲ್ಲಾಡಳಿತ, ತಾಲೂಕ ಆಡಳಿತ ಹೊನ್ನಾವರ, ತಾಲೂಕ ಪಂಚಾಯತಿ ಹೊನ್ನಾವರ, ನೆಹರು ಯುವ ಕೇಂದ್ರ ಹೊನ್ನಾವರ, ಪಟ್ಟಣ ಪಂಚಾಯತಿ ಹೊನ್ನಾವರ ಇವರ ಸಂಯುಕ್ತ ಅಶ್ರಯದಲ್ಲಿ “ನನ್ನ ಮಣ್ಣು ನನ್ನ ದೇಶ ” ಅಭಿಯಾನದಡಿ ಅಮೃತ ಕಲಶ ಯಾತ್ರೆ ಅಭಿಯಾನ ಕಾರ್ಯಕ್ರಮ ಹೊನ್ನಾವರದಲ್ಲಿ ನಡೆಯಿತು,

ಹೊನ್ನಾವರ ತಾಲೂಕಾ ಪಂಚಾಯತ ಆವರ್ಣದಲ್ಲಿ ನೂರಾರು ಸಂಖ್ಯೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ನೇತ್ರತ್ವದಲ್ಲಿ ಜಾಗೃತಿ ಜಾಥಾಕ್ಕೆ ಹೊನ್ನಾವರ ತಹಶೀಲ್ದಾರ ರವಿರಾಜ್ ದಿಕ್ಷೀತ್ ಹಸಿರು ನಿಸಾನೆ ತೋರಿಸುವುದರ ಮೂಲಕ ಜಾಥಾಕೆ ಚಾಲನೆ ನೀಡಿದರು, ನಂತರ ಚಂಡೆ-ನೃತ್ಯದ ಮೂಲಕ ಪಟ್ಟಣದ ಪ್ರಮುಕ ಬೀದಿಗಳಲ್ಲಿ ಸಂಚರಿಸಿ ಶರಾವತಿ ಸರ್ಕಲ್ ಮೂಲಕ ಪಟ್ಟಣ ಪಂಚಾಯತನಲ್ಲಿ ಮುಕ್ತಾಯಗೋಂಡಿತ್ತು.

ಪಟ್ಟಣ ಪಂಚಾಯತ ಸಭಾಭವನದಲ್ಲಿ ಜಾಥಾ ಸಭಾ ಕಾರ್ಯಕ್ರದ ಉದ್ಘಾಟನೆಯನ್ನು ಪಟ್ಟಣ ಪಂಚಾಯತ ನಿಕಟಪೂರ್ವ ಅಧ್ಯಕ್ಷೆ ಭಾಗ್ಯ ಮೇಸ್ತ ಉದ್ಘಾಟಿಸಿ ಶುಭ ಹಾರೈಸಿದರು. ತಾಲೂಕಿನ ವಿವಿಧಡೆ ಸಂಗ್ರಹಿಸಿದ ಮಣ್ಣನ್ನು ಇದೇ ವೇಳೆ, ಜಿಲ್ಲಾ ನೆಹರು ಯುವಕೇಂದ್ರ ಸಂಯೋಜಕರಾದ ಯಶವಂತ ಯಾದವ್ ಅವರಿಗೆ ಹಸ್ತಾಂತರಿಸಲಾಯಿತು.

ಜಿಲ್ಲಾ ನೆಹರು ಯುವಕೇಂದ್ರ ಸಂಯೋಜಕರಾದ ಯಶವಂತ ಯಾದವ್ ಮಾತನಾಡಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಈ ಕಾರ್ಯಕ್ರಮ ಯಶ್ವಸಿಯಾಗುತ್ತಿದ್ದು, ಇಂದು ಹೊನ್ನಾವರದಲ್ಲಿಯೂ ಯಶ್ವಸಿಯಾಗಿದೆ. ಸರ್ಕಾರದ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರು, ಇಲಾಖೆಯ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿ ಯಶ್ವಸಿಯಾಗಿಸುವಲ್ಲಿ ಸಹಕರಿಸಿದ್ದೀರಿ. ದೇಶ ನಮಗೇನು ನೀಡಿದೆ ಹೇಳುದರ ಮೊದಲು ದೇಶಕ್ಕೆ ನಾವು ಏನು ನೀಡಿದ್ದೇವೆ ಎನ್ನುವುದನ್ನು ಯೋಚಿಸಿ ನಮ್ಮ ಕರ್ತವ್ಯವನ್ನು ಪಾಲಿಸಬೇಕು. ಇಂದು ಇಸ್ರೇಲ್ ಯುದ್ದದಲ್ಲಿ ಅಲ್ಲಿಯ ಜನರ ದೇಶಭಕ್ತಿಯು ಜಗತ್ತಿನ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿಗಳು ಜಿಲ್ಲಾ ಕಸಾಪ ಸಂಘದ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ ದೇಶದ ಪ್ರಧಾನ ಮಂತ್ರಿಯವರು ಮನ್ ಕಿ ಬಾತನಲ್ಲಿ ಕರೆ ನೀಡಿದಂತೆ ದೇಶದೆಲ್ಲಡೆಯ ಮಣ್ಣು ಸಂಗ್ರಹಿಸಲಾಗುತ್ತಿದೆ. ಏಕ ಭಾರತ ಶೇಷ್ಠ ಭಾರತ ಧೈಯ ಇದರಲ್ಲಿದೆ. ಮಣ್ಣನ್ನು ನಾವು ಪೂಜಿಸಿ ಗೌರವಿಸುತ್ತೇವೆ. ವೀರ ಯೋಧರ ಸ್ಮರಣೆಯಲ್ಲಿ ನಿರ್ಮಾಣವಾಗುವ ಸ್ಥಳದಲ್ಲಿ ದೇಶದೆಲ್ಲಡೆ ಪವಿತ್ರ ಮಣ್ಣು ಒಂದಡೆ ಸೇರಿಸುವ ಉದ್ದೇಶದಿಂದ ಈ ಅಭಿಯಾನ ನಡೆಯುತ್ತಿದೆ, ಅಮೃತ ಕಲಶ ಯಾತ್ರೆ ದೇಶದೆಲ್ಲಡೆ ದೇಶಭಕ್ತಿಯ ಮೂಲಕ ಹೊಸ ಸಂಚಲನ ಮೂಡಿಸಿದೆ ಎಂದು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ

Back to top button