Focus News
Trending
ಕೊಂಕಣಿ ಸಮುದ್ರ ಪುಸ್ತಕದ ಬಿಡುಗಡೆ: ಪರ್ತಗಾಳಿ ಮಠಾಧೀಶ ಶ್ರೀ ಶ್ರೀ ಶ್ರೀ ವಿದ್ಯಾಧೀಶ ಸ್ವಾಮೀಜಿಯವರ ಅಮೃತ ಹಸ್ತದಿಂದ ಬಿಡುಗಡೆ
ಕುಮಟಾ: ಅಳ್ವೆಕೋಡಿಯ ರಾಮ ಶ್ರೀನಿವಾಸ ಕಾಮತ ಅವರು ಬರೆದ ಕೊಂಕಣಿ ಪುಸ್ತಕವನ್ನು ಶ್ರೀ ಪರ್ತಗಾಳಿ ಮಠಾಧೀಶ ಶ್ರೀ ಶ್ರೀ ಶ್ರೀ ವಿದ್ಯಾಧೀಶ ಸ್ವಾಮೀಜಿಯವರು ತಮ್ಮ ಅಮೃತ ಹಸ್ತದಿಂದ ಬಿಡುಗಡೆಗೊಳಿಸಿದರು. ನಂತರ ಆಶೀರ್ವಚನ ನೀಡಿದ ಅವರು, ಕೊಂಕಣಿ ನಮ್ಮ ತಾಯಿ ಭಾಷೆ. ಹೀಗಾಗಿ ಕೊಂಕಣಿ ಭಾಷಿಕರು ತಾಯಿ ಭಾಷೆಯ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದರು.
ಕಮಲಾ ಬಾಳಿಗಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಪ್ರೀತಿ ಭಂಡಾರ್‌ಕರ್, ಡಾ.ಬಾಳಿಗಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಶಿವರಾಮ ಕಾಮತ, ಚಾತುರ್ಮಾಸ ಕಮಿಟಿಯ ಅಧ್ಯಕ್ಷ ಗೋಪಾಲ ವಿ ಕಿಣಿ, ಶ್ರೀ ಶಾಂತೇರಿ ಕಾಮಾಕ್ಷಿ ದೇವಸ್ಥಾನದ ಅಧ್ಯಕ್ಷ ಶೇಷಗಿರಿ ಶಾನಭಾಗ, ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಕೃಷ್ಣ ಬಾಬಾ ಪೈ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಶ್ರೀ ವೆಂಕಟ್ರಮಣ ದೇವಸ್ಥಾನದ ಅಧ್ಯಕ್ಷ ವಾಸುದೇವ ಪ್ರಭು, ಮಾರುತಿ ಪತ್ತಿನ ಸಂಸ್ಥೆಯ ನಿರ್ದೇಶಕಿ ದ್ರೌಪತಿ ಉದಯ ಪ್ರಭು ಹಾಗೂ ಇತರರು ಅನಿಸಿಕೆ ವ್ಯಕ್ತಪಡಿಸಿದರು.
ವಿಸ್ಮಯ ನ್ಯೂಸ್, ಕುಮಟಾ