Important
Trending

ಜಗನ್ಮಾತೆ ಶ್ರೀ ಮಾರಿಕಾಂಬಾದೇವಾಲಯದ ಸಭಾಮಂಟಪದಲ್ಲಿ ಶ್ರಾವಣ ಮಾಸದ ನಿಮಿತ್ತ ಕಾರ್ಯಕ್ರಮ: ಮಾತೆಯರಿಂದ ಲಲಿತಾ ಸಹಸ್ರನಾಮ ಮತ್ತು ಭಜನೆ

ಶಿರಸಿ : ಮಂಗಳವಾರದoದು ಸಂಜೆ ಜಗನ್ಮಾತೆ ಶ್ರೀ ಮಾರಿಕಾಂಬಾದೇವಾಲಯದ ಸಭಾ ಮಂಟಪದಲ್ಲಿ ಶ್ರಾವಣ ಮಾಸ”ದ ನಿಮಿತ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ5 ನೇ ದಿನದ ಮೊದಲನೇ ಕಾರ್ಯಕ್ರಮದಲ್ಲಿ ಹಿಂದೂ ಸೇವಾ ಪ್ರತಿಷ್ಠಾನ ಬಳಗದ ಮಾತೆಯರಿಂದ ಲಲಿತಾ ಸಹಸ್ರನಾಮ ಮತ್ತು ಭಜನೆಯನ್ನು ಪ್ರಸ್ತುತಪಡಿಸಿದರು. 2ನೇ ಕಾರ್ಯಕ್ರಮದಲ್ಲಿಸಂಹಿತಾ ಮ್ಯೂಜಿಕ್ ಫೋರಮ್ ಶಿರಸಿಯ ವಿದ್ಯಾರ್ಥಿಗಳು ಗಾಯನ ಮತ್ತು ಭಕ್ತಿಗೀತೆಯನ್ನು ಪ್ರಸ್ತುತ ಪಡಿಸಿದರು.

3ನೇ ಕಾರ್ಯಕ್ರಮದಲ್ಲಿ ಇಂಚರ ಕರೋಕೆ ಸ್ಟುಡಿಯೋ, ಶಿರಸಿ ತಂಡದವರು ವೈವಿಧ್ಯಮಯವಾದ ಭಕ್ತಿಗೀತೆ, ಜಾನಪದಗೀತೆಯನ್ನು ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಮಂಡಳಿಯ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಶಿರಸಿ

Back to top button