ಕಾರವಾರ: ಜಗತ್ತಿನ ಜೀವವೈವಿಧ್ಯದ ತಾಣ ಎಂದು ಗುರುತಿಸಿಕೊಂಡು ಭಾರತದ ಪಶ್ಚಿಮ ಘಟ್ಟಗಳಲ್ಲಿ ಹೊಸದೊಂದು ಪ್ರಭೇದದ ಏಡಿಯೊಂದು ಪತ್ತೆಯಾಗಿದೆ. ಹೌದು, ನೋಡಲು ವಿಭಿನ್ನವಾಗಿರುವ ಘಟಿಯಾನ ಪ್ರಭೇದದ ಹೊಸ ಜಾತಿಯ ಸಿಹಿನೀರಿನ ಏಡಿಯನ್ನು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ನಿಸರ್ಗ ತಜ್ಞರು ಪತ್ತೆಹಚ್ಚಿದ್ದಾರೆ. ಅರಣ್ಯ ಇಲಾಖೆ ನಿಸರ್ಗ ತಜ್ಞರಾದ ಗೋಪಾಲಕೃಷ್ಣ ಹೆಗಡೆ, ಸಮೀರಕುಮಾರ ಪಾಟಿ., ಪರಶುರಾಮ ಭಜಂತ್ರಿ, ಮತ್ತು ತೇಜಸ್ ಥಾಕರೆ ತಂಡದವರು ಭಾರತದ ಮಧ್ಯ ಪಶ್ವಿಮ ಘಟ್ಟದಲ್ಲಿ ಘಟಿಯಾನ ಪ್ರಭೇದದ ಹೊಸ ಜಾತಿಯ ಸಿಹಿನೀರಿನ ಏಡಿಯನ್ನು ಗುರುತಿಸಿ ಗಮನಸೆಳೆದಿದ್ದಾರೆ.
ಅಪ್ರಾಪ್ರೆಯನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಆರೋಪ: ದೂರು ದಾಖಲು
ಹೇಗಿದೆ ಈ ಘಟಿಯಾನ ಪ್ರಭೇದದ ಏಡಿ?
ಸಾಮಾನ್ಯವಾಗಿ ಘಟಿಯಾನ ಪ್ರಭೇದ ಏಡಿಗಳು ವಿಭಿನ್ನ ಬಣ್ಣಗಳಿಂದ ಕೂಡಿದ್ದು, ಇತರೆ ಏಡಿಗಳಿಗಿಂತ ನೋಡಲು ಆಕರ್ಷಣೀಯವಾಗಿರುತ್ತವೆ. ಘಟಿಯಾನ ಪ್ರಭೇದದಲ್ಲಿ ಇಲ್ಲಿಯವರೆಗೆ 13 ವಿವಿಧ ಜಾತಿಯ ಸಿಹಿ ನೀರಿನ ಏಡಿಗಳನ್ನು ಗುರುತಿಸಲಾಗಿದ್ದು , ಇದೀಗ ಯಲ್ಲಾಪುರದ ಬಾರೆಯಯಲ್ಲಿ ಪತ್ತೆಯಾದ ‘ಘಟಿಯಾನ ದ್ವಿವರ್ಣ’ 14ನೇ ಸಿಹಿನೀರಿನ ಏಡಿಯಾಗಿದೆ.
ವಿಸ್ಮಯ ನ್ಯೂಸ್, ಕಾರವಾರ