12 ವರ್ಷದ ಹಿಂದಿನ ಕಳ್ಳತನ ಪ್ರಕರಣ ಬಯಲು: ಕೊನೆಗೂ ಸಿಕ್ಕಿಬಿದ್ದ ಚಾಲಾಕಿ ಆರೋಪಿ
ಕಾರವಾರದಿಂದ ದೆಹಲಿಗೆ ಹೋಗಲು ಪ್ರಯತ್ನಿಸುತ್ತಿದ್ದಾಗ ಅರೆಸ್ಟ್
ಹೊನ್ನಾವರ: ಪಟ್ಟಣದ ಕೋರ್ಟ್ ರಸ್ತೆಯ ಮುನ್ಸಿಪಾಲ್ಟಿ ಕಾಂಪ್ಲೆಕ್ಸ್ನಲ್ಲಿರುವ ಶ್ರೀಕುಮಾರ ರೋಡ್ ಲೈನ್ಸ್ ಕಛೇರಿಯ ಶೆಟರ್ಸ್ ಅಳವಡಿಸಿದ ಬೀಗ ಮುರಿದು ಲ್ಯಾಪಟಾಪ್ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿತನು ನೇಪಾಳ ಮೂಲದವನಾಗಿದ್ದು, ಜನಕ ಬಹಾದ್ದೂರ್ ಎಂದು ತಿಳಿದುಬಂದಿದೆ. ತಾಂತ್ರಿಕ ಸಾಕ್ಷ್ಯಾಧಾರ ಮೇಲೆ ಆರೋಪಿಯನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.
ಮೀನುಗಾರಿಕೆ ತೆರಳಿದ ದೋಣಿಯೊಂದು ಅಲೆಯ ಹೊಡೆತಕ್ಕೆ ಮುಳುಗಡೆ: ಓರ್ವ ನಾಪತ್ತೆ
ಶ್ರೀಕುಮಾರ ರೋಡ್ ಲೈನ್ಸ್ ಕಛೇರಿಯ ಪಕ್ಕದಲ್ಲಿರುವ ವಿ.ಎಮ್. ಭಂಡಾರಿ ವಕೀಲರ ಕಛೇರಿ ಮತ್ತು ಡಾ. ಮನೋಜ ನಾಯ್ಕ ಇವರ ಕ್ಲಿನಿಕ್‌ನ ಶೆಟರ್ಸ್ ಬಾಗಿಲಿನ ಬೀಗ ಮುರಿದು ಒಳ ಹೊಕ್ಕಿ ಕಳವು ಮಾಡಲು ಯತ್ನಿಸಿದ ಬಗ್ಗೆ ಸದಾನಂದ ಮಹಾಬಲೇಶ್ವರ ನಾಯ್ಕ ಪೊಲೀಸರ್ ಠಾಣೆಯಲ್ಲಿ ದೂರು ನೀಡಿದ್ದರು. ಬಂಧಿತ ನೇಪಾಳ ನಿವಾಸಿಯಾಗಿದ್ದು, ಈತನ ಸಂಬಧಿಕರು ಉಡುಪಿಯಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದಾರೆ. ಆಗಾಗ ಉಡುಪಿಗೆ ಬರುತ್ತಿದ್ದ ಈತ ಜಿಲ್ಲೆಯ ಬೇರೆ ಬೇರೆ ಕಡೆ ಕಳ್ಳತನ ಮಾಡುವ ಕಸುಬು ರೂಢಿ ಮಾಡಿಕೊಂಡಿದ್ದ.
ಇತ್ತೀಚಿಗೆ ಮುರುಡೇಶ್ವರದಲ್ಲಿಯೂ ಕಳ್ಳತನ ಮಾಡಿದ್ದ ಎಂದು ತಿಳಿದುಬಂದಿದೆ. ಈತ ಕಾರವಾರದಿಂದ ದೆಹಲಿಗೆ ಹೋಗಲು ಸಂಬoಧಿಕರೊoದಿಗೆ ಕಾರವಾರ ರೈಲ್ವೆ ನಿಲ್ದಾಣದಲ್ಲಿ ರೈಲಿನ ಬರುವಿಕೆಗೆ ಕಾಯುತ್ತಿದ್ದಾಗ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ