Follow Us On

WhatsApp Group
Big NewsImportant
Trending

ಬಸ್ ನಿಲ್ದಾಣದಿಂದ ಓಡಿ ಹೋಗಲೆತ್ನಿಸಿದ ಮೊಬೈಲ್ ಕಳ್ಳರು: ಹಿಡಿದು ಹೆಡೆಮುರಿ ಕಟ್ಟಿದ ಪೋಲೀಸರು

ಮೊಬೈಲ್ ಅಂಗಡಿಯಲ್ಲಿಯೂ ಮಾಸ್ಕ ಧರಿಸಿ ಮೊಬೈಲ್ ಕದ್ದಿದ್ದ ಕತರ್ನಾಕ ಕಳ್ಳರಾರು ?

ಅಂಕೋಲಾ: ತಾಲೂಕಿನ ಬಸ್ ನಿಲ್ದಾಣ ಮತ್ತು ಇತರ ಸ್ಥಳಗಳಲ್ಲಿ ಮೊಬೈಲ್ ಪೋನ್ ಕಳ್ಳತನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು  ಅಂಕೋಲಾ ಪೊಲೀಸರು ಬಂಧಿಸಿ ಕಳ್ಳತನ ಮಾಡಿದ 7 ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.  ಗುಜರಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ಹುಬ್ಬಳ್ಳಿಯ ಗದಗ ರಸ್ತೆ ನಿವಾಸಿ ಮಹಮ್ಮದ್ ಅಲಿ ಮೆಹಬೂಬ್ ಸಾಬ ಕುಂದಗೋಳ(38) ಮತ್ತು ಕೇರಳ ಕಾಸರಗೋಡು ಟೋನಿ ಜಾನ್ ಜೇಮ್ಸ್ (34) ಬಂಧಿತ ಆರೋಪಿಗಳು.

ಬೈಕಿಗೆ ಡಿಕ್ಕಿಹೊಡೆದ ಅಪರಿಚಿತ ವಾಹನ: ಪೂಜಾಕಾರ್ಯ ಮುಗಿಸಿ ಬರುತ್ತಿದ್ದ ವ್ಯಕ್ತಿ ಸಾವು

ಮಹಮ್ಮದ್ ಅಲಿ ಎಂಬಾತನಿಂದ ಅಂದಾಜು ಜಿಯೋ ಲೈಫ್ ಕೀ ಪ್ಯಾಡ್ ಮೊಬೈಲ್ ಪೋನ್, ಐಟೆಲ್ ಕಂಪನಿಯ ಕೀ ಪ್ಯಾಡ್ ಮೊಬೈಲ್ ಪೋನ್,  ಓಪ್ಪೋ ಕಂಪನಿಯ ಎ 15 ಎಸ್ ಹ್ಯಾಂಡ್ ಸೆಟ್ ಮತ್ತು 1260 ರೂಪಾಯಿ ನಗದು ಹಣ ವಶ ಪಡಿಸಿಕೊಳ್ಳಲಾಗಿದ್ಲು ಇನ್ನೊರ್ವ ಆರೋಪಿ ಟೋನಿ ಜೇಮ್ಸ್ ಎಂಬಾತನಿಂದ ರಿಯಲ್ ಮಿ ಸಿ 15 ಹ್ಯಾಂಡ್ ಸೆಟ್, ರೆಡ್ ಮಿ 10 ಹ್ಯಾಂಡ್ ಸೆಟ್ ಮತ್ತು ಸ್ಯಾಮಸಂಗ ಕೀ ಪ್ಯಾಡ್ ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ.

ಅಂಕೋಲಾ ಪಿ.ಎಸ್. ಐ ಮಹಾಂತೇಶ ವಾಲ್ಮೀಕಿ ಗಸ್ತು ಕರ್ತವ್ಯದ ನಿಮಿತ್ತ ಅಂಕೋಲಾ ಬಸ್ ನಿಲ್ದಾಣದ ಒಳಗೆ ಹೋಗಿದ್ದ ಸಂದರ್ಭದಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಆರೋಪಿಗಳು ಪೊಲೀಸ್ ಜೀಪ್ ಕಂಡೊಡನೆ ಬಸ್ ನಿಲ್ದಾಣದದಿಂದ ಓಡಿ ಹೋಗುವ ಪ್ರಯತ್ನ ನಡೆಸಿದ್ದು, ಎದ್ದೆನೋ  ಬಿದ್ದೆನೋ ಎಂದು ಓಡಿ ಹೋಗಲು ಯತ್ನಿಸಿದಾಗ, ಬೆಂಬತ್ತಿದ ಪೊಲೀಸರು ಅವರನ್ನು ಹಿಡಿದು ವಿಚಾರಣೆ ನಡೆಸಿದ  ವೇಳೆ, ಇವರು ಸಾರ್ವಜನಿಕರ ಮೊಬೈಲ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. 

ಸಿ.ಸಿ ಕ್ಯಾಮರಾದಲ್ಲಿ ಕಳ್ಳತನದ ಕೃತ್ಯ ಸೆರೆ

ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಸರ್ಕಾರದ ಪರವಾಗಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.  ಬಂಡಿಬಜಾರ್ ಹತ್ತಿರದ ಮೊಬೈಲ್ ಅಂಗಡಿ ಒಂದಕ್ಕೆ ತೆರಳಿದ್ದ ಆರೋಪಿತರು , ಅಂಗಡಿಯಾತನ ಲಕ್ಷ್ಯವನ್ನು ಬೇರೆಡೆ ಸೆಳೆದು ಆತನ ಅಂಗಡಿಯಲ್ಲಿದ್ದ ಹೊಸ ಮಾಡೆಲ್ ಮೊಬೈಲ್ ಸೆಟ್ ನ್ನು ಕದ್ದು ನಂತರ ಸ್ಥಳದಿಂದ ಕಾಲ್ಕಿತ್ತಿದ್ದರಾದರೂ ಈ ವೇಳೆ ಅವರು ಮುಖಕ್ಕೆ ಮಾಸ್ಕ ಧರಿಸಿದ್ದರಿಂದ ಆರೋಪಿಗಳ ಮುಖ ಚಹರೆ ಸರಿಯಾಗಿ ಕಾಣದಿದ್ದರೂ, ಸಿ.ಸಿ ಕ್ಯಾಮರಾದಲ್ಲಿ ಅವರ ಕಳ್ಳತನದ ಕೃತ್ಯ ಸೆರೆಯಾಗಿದೆ ಎನ್ನಲಾಗಿದೆ.

ಬೇರೊಂದು ಪ್ರಕರಣದಲ್ಲಿ  ಇತ್ತೀಚೆಗಷ್ಟೆ ರಾತ್ರಿ ವೇಳೆ ಅವರ್ಸಾದ ಮೊಬೈಲ್ ಅಂಗಡಿ ಕಳ್ಳ ಪ್ರವೇಶ ಮಾಡಿ ಮೊಬೈಲ್ ಎಗರಿಸಿದ್ದ ಇಬ್ಬರು ಸ್ಥಳೀಯ ಆರೋಪಿತರನ್ನು  ಪೊಲೀಸರು ಕ್ಷೀಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದನ್ನು ಸ್ಮರಿಸಬಹುದಾಗಿದ್ದು, ಈಗ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಕಳ್ಳರನ್ನು ಬಂಧಿಸುವ ಮೂಲಕ ನಾಗರಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ . ಹಬ್ಬದ ದಿನಗಳಲ್ಲಿ ಪೇಟೆ ಮತ್ತಿತರ ಪ್ರದೇಶಗಳು ಜನ ನಿಬಿಡಲಾಗಿದ್ದು ಪೋಲೀಸ್ ಇಲಾಖೆ ಮತ್ತಷ್ಟು ನಿಗಾ ವಹಿಸ ಬೇಕಿದೆಯಲ್ಲದೇ, ಸಾರ್ವಜನಿಕರು ಸಹ ತಮ್ಮ ಸ್ವತ್ತುಗಳ ಬಗ್ಗೆ ಜಾಗೃತಿ ವಹಿಸಬೇಕಿದೆ. 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button