Important
Trending

ಹೊನ್ನಾವರದಲ್ಲೂ ಲಾಕ್ ಡೌನ್ ಗೆ ನಿರ್ಧಾರ

[sliders_pack id=”1487″]

ಹೊನ್ನಾವರ: ಕುಮಟಾ, ಅಂಕೋಲಾ, ಭಟ್ಕಳದಲ್ಲಿ ಹಾಫ್ ಡೇ ಲಾಕ್ ಡೌನ್ ಗೆ ಈಗಾಗಲೇ ಉತ್ತಮ‌ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೀಗ ಹೊನ್ನಾವರದಲ್ಲೂ ಅರ್ಧದಿನ ಲಾಕ್ ಡೌನ್ ಮಾಡಲು ತೀರ್ಮಾನಿಸಲಾಗಿದೆ.
ತಾಲೂಕಿನಾದ್ಯಂತ ಕರೋನಾ ಹರಡುವ ಆತಂಕ ನಿರ್ಮಾಣವಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಮಧ್ಯಾಹ್ನ 2 ಗಂಟೆ ನಂತರ ಸ್ವಯಂ ಪ್ರೇರಿತ ಲಾಕ್ ಡೌನ್ ಗೆ ತೀರ್ಮಾನಿಸಲಾಗಿದೆ. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ವಿನಂತಿಸಲಾಗಿದೆ. ಇಂದು ನಡೆದ‌ ಸಾರ್ವಜನಿಕರ,‌ ಜನಪ್ರತಿನಿಧಿಗಳು,‌ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ‌ ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಶಾಸಕರುಗಳಾದ ದಿನಕರ ಶೆಟ್ಟಿ, ಸುನೀಲ್ ನಾಯ್ಕ, ಜಿ ಜಿ ಶಂಕರ್, ಬಾಲಕೃಷ್ಣ ಬಾಳೆರಿ, ಎಮ್. ಜಿ. ನಾಯ್ಕ, ಪಿ ಎಸ್ ಐ ಶಶಿಕುಮಾರ, ವಿಶ್ವನಾಥ ನಾಯಕ, ಸೇರಿದಂತೆ ಸಾರ್ವಜನಿಕರು ಇದ್ದರು,

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ, ಹೊನ್ನಾವರ

Back to top button