ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ : ತಪ್ಪಿದ ಭಾರೀ ಅನಾಹುತ
ಹೆದ್ದಾರಿ ಹೊಂಡ - ಗುಂಡಿಗಳಿಂದಲೂ ಹೆಚ್ಚುತ್ತಿರುವ ರಸ್ತೆ ಅಪಘಾತ: ಅನಾಹುತಕ್ಕೆ ಹೊಣೆ ಯಾರು ?
ಅಂಕೋಲಾ : ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಗ್ಯಾಸ್ ಟ್ಯಾಂಕರ್ ಒಂದು (LPG) ಪಲ್ಟಿಯಾದ ಘಟನೆ ಮಂಗಳವಾರ ಸಂಭವಿಸಿದೆ. ಇದರಿಂದ ಸ್ಥಳೀಯರಲ್ಲಿ ಕೆಲಕಾಲ ಆತಂಕದ ವಾತಾವರಣ ಕಂಡು ಬಂದಿತ್ತು. ಅದೃಷ್ಟ ವಶಾತ್ ಯಾವುದೇ ಪ್ರಾಣಹಾನಿ ಇಲ್ಲವೇ ಗ್ಯಾಸ್ ಸೋರಿಕೆಯಾಗದೇ ಸಂಭವನೀಯ ಅನಾಹುತ ತಪ್ಪಿದಂತಾಗಿದೆ. ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ಈ ಟ್ಯಾಂಕರ್ ವಾಹನ ದಾರಿ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
Recruitment 2022: SSLC ಪಾಸಾದವರಿಗೆ ಉದ್ಯೋಗಾವಕಾಶ: 21 ರಿಂದ 69 ಸಾವಿರ ಆರಂಭಿಕ ವೇತನ
ಆದರೆ ರಸ್ತೆ ಅಂಚಿಗೆ ಹೊರಳಿ ಬಿದ್ದಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತರೆ ವಾಹನಗಳ ಸಂಚಾರಕ್ಕೆ ತೊಡಕಾಗದಿರುವುದರಿಂದ ಹೆದ್ದಾರಿಯಲ್ಲಿ ಸಂಚರಿಸುವ ಹಲವರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಘಟನೆ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.ಅಂಕೋಲಾ ಪಿ ಎ ಸೈ ಪ್ರೇಮನಗೌಡ ಪಾಟೀಲ್, ಸುಂಕಸಾಳ ಓ. ಪಿ. ಹಾಗೂ ಇತರೆ ಪೊಲೀಸ್ ಸಿಬ್ಬಂದಿಗಳು, ಅಗ್ನಿಶಾಮಕ ದಳ, 112 ವಾಹನ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಧಾವಿಸಿ ಕರ್ತವ್ಯ ನಿರ್ವಹಿಸಿದರು.
ಹೊಂಡ ತಗ್ಗುಗಳಿಂದ ಕೂಡಿರುವ ಹೆದ್ದಾರಿಯಿಂದಲೂ ಹತ್ತಾರು ವಾಹನ ಅಪಘಾತಗಳು ಸಂಭವಿಸುತ್ತಲೇ ಇದ್ದು , ಹೆದ್ದಾರಿ ದುರಸ್ಥಿ ಕಾರ್ಯ ಕೂಡಲೇ ಆರಂಭಿಸದಿದ್ದಲ್ಲಿ ರಸ್ತೆ ತಡೆ ಮತ್ತಿತರ ಹೋರಾಟ ಅನಿವಾರ್ಯ ಎನ್ನುತ್ತಾರೆ ಕೆಲ ಪ್ರಮುಖರು. ಸಂಬಂಧಿಸಿದವರು ಕೂಡಲೇ ಎಚ್ಚೆತ್ತು ಹೆದ್ದಾರಿ ದುರಸ್ಥಿಗೆ ಕ್ರಮ ಕೈಗೊಳ್ಳಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ