ಸಿದ್ದಾಪುರ: ತಾಲೂಕಿನ ಶ್ರೀ ಸಂಸ್ಥಾನ ತರಳೀಮಠದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ 35ನೇ ವರ್ಷದ 1008 ಶ್ರೀ ಸತ್ಯನಾರಾಯಣ ವ್ರತ ಕಲಶ ಪೂಜೆ ಹಾಗೂ ಧರ್ಮ ಸಭೆ ನಡೆಯಿತು. ಧರ್ಮಸಭೆಯ ದಿವ್ಯ ಸಾನಿಧ್ಯವಹಿಸಿದ್ದ ಸಾರಂಗನಜಡ್ಡು ಶ್ರೀ ಕ್ಷೇತ್ರ ಕಾರ್ತಿಕೇಯ ಪೀಠದ ಯೋಗೇಂದ್ರ ಶ್ರೀ ಗಳು ಆಶೀರ್ವಚನ ನೀಡಿ ಮಠವನ್ನು ಯಾಕೆ ಕಟ್ಟಬೇಕು, ಅವಶ್ಯಕತೆ ಇದೆಯಾ? ಉಳಿಸಿಕೊಳ್ಳಲು ಆಗುತ್ತದೆಯೇ,?, ನಮ್ಮಲ್ಲಿ ನಂಬಿಕೆ ಇಲ್ಲ. ನಂಬಿಕೆ ಹೆಚ್ಚಿಸಲು ಮಠಗಳುಬೇಕು, ದೇವರಲ್ಲಿ ನಂಬಿಕೆ ಇಡಬೇಕು. ಮಠ ಕಟ್ಟೋಣ, ಬೆಳಸೋಣ, ಹೆಣ್ಣು ಮಕ್ಕಳ ನ್ನು ಗೌರವಿಸೋಣ, ಒಟ್ಟಾಗಿ ಕೆಲಸ ಮಾಡೋಣ ಎಂದರು.
ಶ್ರೀ ಕ್ಷೇತ್ರ ಸಿಗಂಧೂರು ಧರ್ಮ ದರ್ಶಿಯಾದ ಡಾ. ರಾಮಪ್ಪ ಮಾತನಾಡಿ ಅನ್ನ ಧಾನ ಪ್ರಮುಖವಾದುದು, ಸಮಾಜ ಕ್ಕೆ ಮಠಬೇಕು, ಸಮಾಜದ ಪ್ರತಿಯೆuಟಿಜeಜಿiಟಿeಜಬ್ಬರಿಗೂ ಜವಾಬ್ದಾರಿ ಇದೆ. ಆ ಮೂಲಕ ಸಮಾಜದ ಅಭಿವೃದ್ಧಿ ಗೆ ಮುಂದಾಗಬೇಕು ಎಂದರು. ಸಾಮಾಜಿಕ ಕಾರ್ಯಕರ್ತ ಕಲಗೋಡ ರತ್ನಾಕರ ಇಲ್ಲಿಯ ಅಭಿವೃದ್ಧಿ ಗೆ ನನ್ನ ಸಹಕಾರವಿದೆ. ಎಲ್ಲರೂ ಕೈಜೋಡಿಸಿ ಕೆಲಸ ಮಾಡೋಣ ಎಂದರು.
ಮುಖ್ಯ ಅತಿಥಿಗಳಾಗಿ ಹೈಕೋರ್ಟ್ ನ್ಯಾಯವಾದಿ ಎ ಕೆ ವಸಂತ, ಮಾತನಾಡಿ ನಾವು ಹಿಂದುಳಿದ ವರಾಗಿ ಹಿಂದೆ ಉಳಿಯಬಾರದು, ಮುಂದೆ ಬರುವ ಪ್ರಯತ್ನ ಮಾಡಬೇಕು, ನಮ್ಮ ನಮ್ಮ ಮಕ್ಕಳಿಗೆ ವಿದ್ಯೆ ಜೊತೆಗೆ ಸಂಸ್ಕಾರ ನೀಡಬೇಕು ಎಂದರು.
ವಿಸ್ಮಯ ನ್ಯೂಸ್ ದಿವಾಕರ್ ಸಂಪಖoಡ ಸಿದ್ದಾಪುರ