Important
Trending

ಕುರಿ ಸಾಗಿಸುತ್ತಿದ್ದ ವಾಹನ ಲೈಟ್ ಕಂಬಕ್ಕೆ ಡಿಕ್ಕಿ: ವ್ಯಕ್ತಿಯ ಕಾಲು ಮುರಿತ: ಏಳು ಕುರಿಗಳ ದುರ್ಮರಣ

ಕುಮಟಾ: ಕುರಿಗಳನ್ನ ಸಾಗಿಸುತ್ತಿದ್ದ ಪಿಕಪ್ ವಾಹನವೊಂದು ಲೈಟ್ ಕಂಬಕ್ಕೆ ಡಿಕ್ಕಿಯಾಗಿ, ವಾಹನದ ಹಿಂಬದಿ ಕುಳಿತಿದ್ದ ಕುರಿಗಾಹಿಯ ಕಾಲು ಮುರಿತವಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕುಮಟಾ ಸರ್ಕಾರಿ ಆಸ್ಪತ್ರೆ ಬಳಿ ನಡೆದಿದೆ. ಅಲ್ಲದೆ, ಈ ವೇಳೆ ಸ್ಥಳದಲ್ಲೇ ಏಳು ಕುರಿಗಳು ದುರ್ಮರಣ ಹೊಂದಿದೆ. 30ಕ್ಕೂ ಅಧಿಕ ಕುರಿಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನ ತಡರಾತ್ರಿ 2 ಗಂಟೆ ವೇಳೆಗೆ ಅಪಘಾತಕ್ಕೀಡಾಗಿದೆ.

ಸಾಲು ಸಾಲು ರಜೆ: ವಿಶ್ವಪ್ರಸಿದ್ಧ ಮುರುಡೇಶ್ವರಕ್ಕೆ ಹರಿದುಬರುತ್ತಿರುವ ಪ್ರವಾಸಿಗರು

ಕಂಬಕ್ಕೆ ಅತಿವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದರಿಂದ ವಾಹನದ ಮುಂಭಾಗ ನಜ್ಜುಗುಜ್ಜಾಗಿದೆ. ಗಾಯಾಳುವನ್ನ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಕುಮಟಾ

Back to top button