Important
Trending

ಶಿಕ್ಷಣದಲ್ಲಿ ಕಲೆ ಮತ್ತು ನಾಟಕದ ಅನ್ವಯಗಳು: ಒಂದು ವಾರದ ಕಾರ್ಯಾಗಾರ

ಕುಮಟಾ: ಕಲೆಗೆ ಪ್ರೋತ್ಸಾಹದ ಅಗತ್ಯವಿದೆ, ಶಿಕ್ಷಕ ಮತ್ತು ಕಲಾವಿದ ಬೇರೆಬೇರೆ ಅಲ್ಲ. ಶಿಕ್ಷಕನಾದವನಿಗೆ ಕೈಯಲ್ಲಿ ಪಠ್ಯವಿದ್ದರೆ, ಕಲಾವಿದನ ಕೈಯಲ್ಲಿ ಸ್ಕಿçಪ್ಟ ಇರುತ್ತದೆ. ಶಿಕ್ಷಕನು ಪಠ್ಯವನ್ನು ಮಕ್ಕಳ ಮನಮುಟ್ಟುವಂತೆ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಬೇಕಾಗುತ್ತದೆ. ಹಾಗೆಯೇ ಕಲಾವಿದನು ಪ್ರೇಕ್ಷಕರೆದುರು ತನ್ನಲ್ಲಿರುವ ಸ್ಕಿçಪ್ಟನ್ನು ಜಾಗರೂಕತೆಯಿಂದ ಅರ್ಥೆಸಬೇಕಾಗುತ್ತದೆ. ಆದ್ದರಿಂದ ಶಿಕ್ಷಕನಿಗೆ ಮತ್ತು ಕಲಾವಿದನಿಗೆ ಸಂಬoಧವಿದೆ ಎಂದು ನಿನಾಸಂ ರಂಗ ನಿರ್ದೇಶಕರಾದ ಶ್ರೀ ಆರ್.ಕೆ. ಶಿವಕುಮಾರ ಹೇಳಿದರು. ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ “ಶಿಕ್ಷಣದಲ್ಲಿ ಕಲೆ ಮತ್ತು ನಾಟಕದ ಅನ್ವಯಗಳು’’ ಒಂದು ವಾರದ ಕಾರ್ಯಾಗಾರದ ಸಮಾರೋಪ ಸಮಾರಂಭವು ಜರುಗಿತು.

ಪ್ರಾಚಾರ್ಯ ಮತ್ತು ರಂಗನಿರ್ದೇಶಕ ಶ್ರೀನಿವಾಸರವರು ವಿದ್ಯಾರ್ಥಿಗಳಲ್ಲಿ ಭಾವನಾತ್ಮಕ, ಬೌದ್ಧಿಕ ಮತ್ತು ಸಾಮಾಜಿಕ ವಿಕಾಸಕ್ಕೆ ಕಲೆ ಮತ್ತು ರಂಗಶಿಕ್ಷಣ ಪೂರಕ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಪ್ರೀತಿ ಭಂಡಾರಕರ್ ಮಾತನಾಡಿ ನಾಟಕ ಮತ್ತು ಕಲೆ ಮನರಂಜನೆಯ ಜೊತೆ ಮಾನವನ ವ್ಯಕ್ತಿತ್ವ ವಿಕಸನಕ್ಕೆ ಕಾರಣ ಎಂದು ಹೇಳಿದರು.

ಸಹಪ್ರಾಧ್ಯಾಪಕರಾದ ಡಾ. ವಿ.ಕೆ.ಭಟ್ಟ ಸ್ವಾಗತಿಸಿದರು. ರಂಗ ತರಬೇತಿ ಪಡೆದ ಶಿಕ್ಷಕ ವಿದ್ಯಾರ್ಥಿನಿಯರಾದ ಬಿಂದು ಜೋಗಳೆಕರ್ ಮತ್ತು ಬಿ.ಎಚ್. ಪ್ರಥ್ವಿ ರಂಗ ತರಬೇತಿಯಲ್ಲಿನ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಉಪನ್ಯಾಸಕ ಸುಬ್ರಹ್ಮಣ್ಯ ಭಟ್ಟ ವಂದಿಸಿದರು. ಬಿಂದು ಅವಧಾನಿ ಮತ್ತು ನಂದಿತಾ ನಿರೂಪಿಸಿದರು. ಪ್ರಜಾನಿಷ್ಟೆ, ಒಂದು ಶೂಕತೆ, ಊರು ಭಂಗ ಮತ್ತು ಜಿ.ಕೆ.ಮಾಸ್ತರರ ಪ್ರಣಯ ಪ್ರಸಂಗ ನಾಟಕವನ್ನು ರಂಗ ತರಬೇತಿ ಪಡೆದ ಶಿಕ್ಷಕ ವಿದ್ಯಾರ್ಥಿಗಳು ಪ್ರದರ್ಶಿಸಿದರು.

Back to top button