ಕುಮಟಾ: ಕೆನರಾ ಕಾಲೇಜ್ ಸೊಸೈಟಿ(ರಿ)ಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏಪ್ರಿಲ್ 30, 2023ರಂದು ರಾಜ್ಯಮಟ್ಟದ ಶಿಕ್ಷಕ, ಶಿಕ್ಷಕಿಯರ ಉದ್ಯೋಗ ಮೇಳ ಆಯೋಜಿಸಲಾಗಿದೆ. ಕುಮಟಾ ಕೆನರಾ ಕಾಲೇಜು ಸೊಸೈಟಿಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ, ಉತ್ತರ ಕನ್ನಡ ಜಿಲ್ಲಾ ಶಿಕ್ಷಕ/ಕಿಯರ ನಿರಂತರ ಸಹಾಯವಾಣಿ ಶಿರಸಿ, ಶಾಲಾ ಶಿಕ್ಷಕರ ಹಾಗೂ ಶಿಕ್ಷಕೇತರ ಒಕ್ಕೂಟದ ಸಹಯೋಗದಲ್ಲಿ ಉದ್ಯೋಗ ಮೇಳ ಸಂಘಟಿಸಲಾಗಿದ್ದು, ಮೇಳದ ಜೊತೆಯಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆ ಹಾಗೂ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಅದರ ಅಂಗವಾಗಿ ಈ ದಿನ ಉದ್ಯೋಗ ಮೇಳದ ಆಮಂತ್ರಣ ಪತ್ರಿಕೆಯನ್ನು ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕೆನರಾ ಕಾಲೇಜು ಸೊಸೈಟಿಯ ಪ್ರಾಂಶುಪಾಲರಾದ ಡಾ|| ಪ್ರೀತಿ ಭಂಡಾರಕರ್ ,ಬಿಡುಗಡೆಗೊಳಿಸಿ ಮಾಹಿತಿಯನ್ನು ನೀಡಿದರು.
ಉದ್ಯೋಗ ಮೇಳದಲ್ಲಿ [PUC, NTC, D.Ed, C.P.Ed, B.A, B.Ed, B,com, B,Ed, B,com, BBA, MBA, MA, M.COM, M.SC,M.ED, M.PHIL/PH.D), ನೃತ್ಯ ಶಿಕ್ಷಕರು, ಚಿತ್ರಕಲಾ ಶಿಕ್ಷಕರು, ವಾಚ್ ಮನ್, ಡ್ರೆöÊವರ್, ಅಡುಗೆಯವರು, ವಿದ್ಯಾರ್ಥಿಗಳು ಭಾಗವಹಿಸಬಹುದು. ರಾಜ್ಯಾದ್ಯಂತ ಇರುವ ಹಲವಾರು ಶಿಕ್ಷಣ ಸಂಸ್ಥೆಗಳು ಈಗಾಗಲೇ ನೊಂದಣಿ ಮಾಡಿಕೊಂಡಿದ್ದು, ಇನ್ನೂ ಹಲವಾರು ಶಿಕ್ಷಣ ಸಂಸ್ಥೆಗಳು ನೊಂದಣಿ ಮಾಡುವ ಹಾಗೂ 300ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಹಾಗೂ ಉದ್ಯೋಗಮೇಳದಲ್ಲಿ ಭಾಗವಹಿಸಿದ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಎಲ್ಲರಿಗೂ ಊಟ-ಉಪಹಾರಗಳ ವ್ಯವಸ್ಥೆ ಮಾಡಲಾಗಿದೆ. ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.
ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಶಿಕ್ಷಕ/ಕಿಯರ ನಿರಂತರ ಸಹಾಯವಾಣಿ ಶಿರಸಿ ಅಧ್ಯಕ್ಷರಾದ ವಿಶ್ವನಾಥ ಗೌಡ ಹಾಗೂ ನೀಲಕಂಠ ಗೌಡ, ಕಮಲಾ ಬಾಳಿಗ ಕಾಲೇಜಿನ ಉಪನ್ಯಾಸಕರಾದ ಡಾ|| ವಿನಾಯಕ್ ಭಟ್, ಶ್ರೀ ಎಸ್.ಜೆ. ಉಮೇಶ ನಾಯ್ಕ, ಶ್ರೀಮತಿ ಯಾಸ್ಮಿನ್ ಶೇಖ, ಶ್ರೀ ಎಸ್. ಕೆ. ಭಟ್, ಇತರರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್, ಕುಮಟಾ