Big News

ಆರೋಗ್ಯ ಇಲಾಖೆ ಸೂಚನೆ ಪಾಲಿಸಿ: ಶಿವರಾಮ್ ಹೆಬ್ಬಾರ್

ಮಕ್ಕಳ ಸುರಕ್ಷತೆಗೆ ಆದ್ಯತೆ
ಶಾಲೆಗಳನ್ನು ತೆರೆಯುವಂತೆ ಒತ್ತಡ ಇಲ್ಲ

[sliders_pack id=”1487″]

ಹೊನ್ನಾವರ: ಪಟ್ಟಣ ಪಂಚಾಯತ ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯಡಿಯಲ್ಲಿ ನಿರ್ಮಿಸಿದ ಜಿ+ಟು ಮನೆಗಳನ್ನು ಸಚಿವ ಶಿವರಾಮ ಹೆಬ್ಬಾರ ಉದ್ಘಾಟಿಸಿ ಫಲಾನುಭವಿಗಳಿಗೆ ಪಟ್ಟಾ ವಿತರಿಸಿರು. ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು, ಹವ್ಯಕ ಸಭಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಫಲಾನುಭವಿಗಳಿಗೆ ಪಟ್ಟಾ ವಿತರಿಸಿ ನಂತರ ಮಾತನಾಡಿದ ರಾಜ್ಯ ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರು ಆದ ಶಿವರಾಮ ಹೆಬ್ಬಾರ ಇನ್ನು ಮುಂದೆ ಜಿಲ್ಲೆಯಲ್ಲಿ ಲಾಕ್‍ಡೌನ್ ಇಲ್ಲ. ಕೋವಿಡ್-19 ಜೊತೆಗೆ ಬದುಕಬೇಕಾಗಿದೆ, ಎಲ್ಲ ಅಭಿವೃದ್ದಿ ಕಾರ್ಯಕ್ರಮಗಳನ್ನು ನಡೆಸಬೇಕಾಗಿದೆ ಆರೋಗ್ಯ ಇಲಾಖೆ ನೀಡಿದ ಸೂಚನೆಗಳನ್ನು ಪಾಲಿಸಿ, ಕೋವಿಡ್ ಹರಡಂತೆ ಎಚ್ಚರಿಕೆ ವಹಿಸುವುದು ಪ್ರತಿಯೊಬ್ಬನ ಸಾಮಾಜಿಕ ಜವಾಬ್ದಾರಿ ಎಂದರು.

ಸರಕಾರ ಮಕ್ಕಳ ಸುರಕ್ಷತೆ ಮುಖ್ಯ. ಶಾಲೆಗಳನ್ನು ತೆರೆಯಲು ಆತುರವಾಗಿ ಒತ್ತಡ ಹೇರುವುದಿಲ್ಲ. ಪಾಲಕರಿಗೆ ಮಕ್ಕಳನ್ನು ಶಾಲೆಗೆ ಕಳಿಸಬಹುದೆಂಬ ವಿಶ್ವಾಸ ಮೂಡಿದ ಮೇಲೆ ಶಾಲೆಗಳನ್ನು ತರೆಯಲು ಕ್ರಮ ಕೈಗೊಳ್ಳಲಿದೆ, ಉತ್ತರ ಕನ್ನಡ ಜಿಲ್ಲೆ ರಾಷ್ಟ್ರ, ರಾಜ್ಯದ ಹಲವಾರು ಯೋಜನೆಗಳಿಗೆ ಆಸ್ತಿ, ಜಾಗ ಕಳೆದುಕೊಂಡಿದೆ. ಅಂಕೋಲಾದ ಬೇಲೆಕೇರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಮಾನ ನಿಲ್ದಾಣಕ್ಕೆ ಪಕ್ಷಾತೀತವಾಗಿ ಸ್ವಾಗತ ವ್ಯಕ್ತವಾಗಿದೆ. ಈ ಯೋಜನೆಗೆ ಮನೆ ಕಳೆದುಕೊಳ್ಳುವವರ ಪುನರ್ವಸತಿಗೆ ಪ್ರಥಮ ಆದ್ಯತೆ ಕೊಡಲಾಗುವುದು. ಈಗಾಗಲೇ ಆ ಪ್ರದೇಶದ ಜನರನ್ನು ಭೇಟಿ ಮಾಡಿದ್ದು ಮತ್ತೊಮ್ಮೆ ಭೇಟಿ ಮಾಡುವುದಾಗಿ ಹೇಳಿದರು

ಅಧ್ಯಕ್ಷತೆವಹಿಸಿ ಮಾತನಾಡಿದ ಕುಮಟಾ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಕೋವಿಡ್ ಕಾರಣದಿಂದ ಪೌರ ಕಾರ್ಮಿಕರ ಗೃಹಭಾಗ್ಯ ಮನೆಗಳ ಉದ್ಘಾಟನೆ ವಿಳಂಬವಾಗಿದ್ದು ಈಗ ಉದ್ಘಾಟನೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಕುಳಿತವರಿಗೆ ಕರಾವಳಿ ಅಂದರೆ ದಕ್ಷಿಣ ಕನ್ನಡ, ಉಡುಪಿ ಮಾತ್ರ ಎಂದು ತಿಳಿದಿರುವಂತಿದೆ. ಉತ್ತರ ಕನ್ನಡ ಜಿಲ್ಲೆಯೂ ಕರಾವಳಿ ಎಂಬುದನ್ನು ಮರೆಯುತ್ತಾರೆ. ಕರಾವಳಿಗೆ ಬರುವ ಅಭಿವೃದ್ದಿ ಕಾರ್ಯಗಳು ನಮ್ಮ ಜಿಲ್ಲೆಗೂ ಸಮಪಾಲು ಬರಬೇಕು. ಉತ್ತರ ಕನ್ನಡ ಜಿಲ್ಲೆಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಚಿವ ಶಿವರಾಮ ಹೆಬ್ಬಾರ ಪ್ರಯತ್ನ ಮಾಡುತ್ತಿದ್ದಾರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ವಯಸ್ಸಿನಲ್ಲಿಯೂ ರಾಜ್ಯದ ಜನರ ಕಳಕಳಿಯಿಚಿದ ಕೆಲಸ ಮಾಡುತ್ತಿದ್ದಾರೆ. ನೆರೆ ಬಂದಾಗಲೂ ಸಮರ್ಪವಾಗಿ ನಿಭಾಯಿಸಿದ್ದರು. ಕೋವಿಡ್ ಪರಿಸ್ಥಿತಿಯನ್ನೂ ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ ಎಂದರು.

ವೇದಿಕೆಯಲ್ಲಿ ಉಪ ವಿಭಾಗಾಧಿಕಾರಿ ಭರತ ಎಸ್, ಡಿವೈ ಎಸ್‍ಪಿ ನೀಕಿಲ್ ಬುಳ್ಳಾವರ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಪಟ್ಟಣ ಪಂಚಾಯತ ಸದಸ್ಯರಾದ ಶಿವರಾಜ ಮೇಸ್ತ, ವಿಜಯ್ ಕಾಮತ, ಸ್ಮಜಾತಾ ಮೇಸ್ತ, ಸುಭಾಷ ಹರಿಜನ, ವಿನೋದ ಮೇಸ್ತ, ಶ್ರೀಪಾದ ನಾಯ್ಕ, ಮಹೇಶ ಮೇಸ್ತ, ಸುರೇಶ ಹೊನ್ನಾವರ ಮತ್ತಿತರರು ಉಪಸ್ಥಿತರಿದ್ದರು.


ಬಿಜೆಪಿ ಹೊನ್ನಾವರ ಮಂಡಲ ಅದ್ಯಕ್ಷ ರಾಜು ಭಂಡಾರಿ, ಮುಖಂಡರಾದ ಸುಬ್ರಹ್ಮಣ್ಯ ಶಾಸ್ತ್ರಿ, ಸುಬ್ರಾಯ ನಾಯ್ಕ, ವಿನೋದ ಪ್ರಭು, ದತ್ತಾತ್ರೆಯ ಮೇಸ್ತ, ಉಲ್ಲಾಸ ನಾಯ್ಕ, ಎಂ. ಎಸ್. ಹೆಗಡೆ, ಬಿ.ಟಿ. ಗಣಪತಿ ನಾಯ್ಕ, ಶಿವಾನಿ ಶಾಂತಾರಾಮ, ಶ್ರೀಧರ ನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button