ಸಿದ್ದಾಪುರ: ತಾಲೂಕಿನಲ್ಲಿ ಮಳೆ ಆರಂಭವಾಗುವುದರೊoದಿಗೆ ಕೃಷಿ ಚಟುವಟಿಕೆಗಳು ರೈತ ವಲಯದಲ್ಲಿ ಚುರುಕು ಗೊಂಡಿವೆ . ಅಡಿಕೆ ಬೆಳೆಗಾರರ ಸಂಖ್ಯೆ ತಾಲೂಕಿನಲ್ಲಿ ಹೆಚ್ಚಿದ್ದು ಎಲ್ಲೆಲ್ಲೂ ತೋಟಗಳಲ್ಲಿ ಅಡಿಕೆ ಗೆ ಮದ್ದು ಸಿಂಪಡಣೆ ಮಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ. ಅಡಿಕೆಗೆ ಬರುವ ಕೊಳೆ ರೋಗ ತಡೆಯಲು ಮದ್ದು ಸಿಂಪಡಣೆ ಮಾಡಲಾಗುತ್ತದೆ. ಕೊಳೆ ರೋಗ ತಡೆಯಲು ಮೈಲು ತುತ್ತ ಸುಣ್ಣದ ದ್ರಾವಣವನ್ನು ಅಡಿಕೆ ಕೊನೆಗೆ ಸಿಂಪಡಣೆ ಮಾಡುತ್ತಿದ್ದಾರೆ. ಮೊದಲೆಲ್ಲ ಕೊನೆ ಗೌಡರು ಮರವನ್ನ ಏರಿ ಅಡಿಕೆಗೆ ಮದ್ದು ಸಿಂಪಡಣೆಯನ್ನು ಮಾಡುತ್ತಿದ್ದರು . ಕಾಲ ಬದಲಾದಂತೆ ಕೊನೆ ಗೌಡರ ಲಭ್ಯತೆ ಪ್ರಮಾಣ ಕಡಿಮೆ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ಮದ್ದು ಸಿಂಪಡಣೆಗೆ ದೋಟಿ ಬಳಕೆ ಮಾಡುತ್ತಿರುವುದು ಕಂಡುಬರುತ್ತದೆ.
ಇದು ಕೆಲಸವು ಸುಲಭ ವೇಗ ಹಾಗೂ ರೈತರಿಗೆ ಅನುಕೂಲವಾಗುವುದರಿಂದ ದೋಟಿ ಸಿಂಪಡಣೆಗೆ ಬಹು ಬೇಡಿಕೆ ಇದೆ. ಒಟ್ನಿಲ್ಲಿ ಅಡಿಕೆಗೆ ಕೊಳೆ ಬಾರದಂತೆ ತಡೆಯುವ ನಿಟ್ಟಿನಲ್ಲಿ ಮದ್ದು ಸಿಂಪಡಣೆ ಜೋರಾಗಿದ್ದು, ಕೃಷಿ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿರುವ ದೃಶ್ಯವೂ ಕಂಡು ಬಂದಿದೆ.
ವಿಸ್ಮಯ ನ್ಯೂಸ್ ದಿವಾಕರ್ ಸಂಪಖoಡ ಸಿದ್ದಾಪುರ