Focus News
Trending

ಹಿರೇಗುತ್ತಿಯಲ್ಲಿ ಅರುಣ ಗಾಂವಕರರವರಿಗೆ ಸನ್ಮಾನಕಾರ್ಯಕ್ರಮ

ಗೋಕರ್ಣ: ಸಮೀಪದ ಹಿರೇಗುತ್ತಿ ಲಲಿತ ಮಂಟಪದಲ್ಲಿ ಕಳೆದ 32 ವರ್ಷಗಳಿಂದ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಅರುಣ ಗೌರೀಶ
ಗಾಂವಕರವರಿಗೆ ಸನ್ಮಾನ ಸಮಾರಂಭ ಜರುಗಿತು. ಅರುಣ ಗೌರೀಶ ಗಾಂವಕರವರಿಗೆ ಉಪನ್ಯಾಸಕ ವೃಂದದವರು, ಗೆಳೆಯ ಬಳಗ ಹಿರೇಗುತ್ತಿ, ಹಾಗೂ ಊರಿನ ನಾಗರಿಕರು ಸನ್ಮಾನಿಸಿದರು.

ಸನ್ಮಾನಿತರಾಗಿ ಮಾತನಾಡಿದ ಅರುಣ ಗಾಂವಕರವರು ಕಾಲೇಜಿನಲ್ಲಿ ಕಾರ್ಯನಿರ್ವಹಿಸಲು ಸಹಾಯ ಸಹಕಾರ ನೀಡಿದ ತಮ್ಮ ತಂದೆತಾಯಿರವರಿಗೆ, ಶಾಲಾ ಆಡಳಿತ ಮಂಡಳಿರವರಿಗೆ, ಉಪನ್ಯಾಸಕ ವೃಂದದವರಿಗೆ, ಸಿಬ್ಬಂದಿಗಳಿಗೆ, ಹಿರೇಗುತ್ತಿಯ ಗೆಳೆಯ ಬಳಗದವರಿಗೆ, ಊರ ನಾಗರಿಕರಿಗೆ ಧನ್ಯವಾದ ಸಮರ್ಪಿಸಿ ನಿಮ್ಮ ಪ್ರೀತಿ ಅಭಿಮಾನಕ್ಕೆ ಯಾವತ್ತೂ ಚಿರಋಣಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ರಾಂತ ಎಸ್.ಪಿ. ಎನ್.ಟಿ. ಪ್ರಮೋದ್‌ರಾವ್ “ಅರುಣ ಗೌರೀಶ ಗಾಂವಕರವರು ತಮ್ಮ ಸೇವಾ ಅವಧಿಯಲ್ಲಿ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಪ್ರಗತಿಯ ಜೊತೆಗೆ ಕಾಲೇಜಿನ ಶ್ರೇಯೋಭಿವೃಧ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಇವರ ನಿವೃತ್ತಿ ಜೀವನ ಇನ್ನಷ್ಟು ಕ್ರೀಯಾಶೀಲವಾಗಿರಲೆಂದು ಶುಭ ಹಾರೈಸಿದರು.”

ಎ.ವಿ.ಬಾಳಿಗಾ ಕಾಲೇಜಿನ ಪ್ರಿನ್ಸಿಪಾಲ್ ಸೋಮಶೇಖರ ಗಾಂವಕರ ಮಾತನಾಡಿ “ಪಾಠ ಹೇಳುವ ಶಿಕ್ಷಕರು ತೆರೆಯ ಮುಂದೆ ಕಾರ್ಯನಿರ್ವಹಿಸುತ್ತಾರೆ ತೆರೆಯ ಹಿಂದೆ ಕಾಯಕ ಯೋಗಿಯಂತೆ ದುಡಿಯುತ್ತಾ ಸೇವೆಗೈದವರನ್ನು ಕೆಲವೂಮ್ಮೆ ನಾವು ಗಮನಿಸಿರುವುದೇ ಇಲ್ಲ. ಅಂತವರಲ್ಲೊಬ್ಬರು ಅರುಣ ರವರು ಎಂದು ಅವರ ಕ್ರಿಕೆಟ್ ಆಟದ ದಿನಗಳನ್ನು ನೆನಪಿಸಿದರು.”

ರಾಜೀವ ನಾಯಕ ವಾಸರೆ ಮಾತನಾಡಿ “ಕಾಲೇಜಿನಲ್ಲಿ ಕಲಿತ ಎಲ್ಲಾ ವಿದ್ಯಾರ್ಥಿಗಳ ಇಂದೂ – ಎಂದೂ ಅರುಣ ಗಾಂವಕರವರ ಸಹಕಾರ
ಗುಣವನ್ನು ಪ್ರಾಣಿ-ಪ್ರೀತಿಯನ್ನು ನೆನಪಿಸುತ್ತಾರೆ” ಎಂದರು. ಸರಕಾರಿ ಕಾಲೇಜ್ ಕಾರವಾರ ಪ್ರಿನ್ಸಿಪಾಲ್ ಆರ್.ಎಸ್.ಪತ್ರೇಕರ್ ಮಾತನಾಡಿ
“ಸ್ವಭಾವದಿಂದ ಗಂಭೀರವಾಗಿ ಕಂಡರೂ ಎಲ್ಲರೊಡನೆ ಆತ್ಮೀಯವಾಗಿ ಬೆರೆಯುತ್ತಾ ಕಾಲೇಜಿನ ಎಲ್ಲಾ ಚಟುವಟಿಕೆಗಳಲ್ಲಿ ಕ್ರೀಯಾಶೀಲರಾಗಿ ತೊಡಗಿಕೊಂಡು ಉಪನ್ಯಾಸಕರ ಹಾಗೂ ವಿದ್ಯಾರ್ಥಿಗಳ ಪ್ರೀತಿ ಗೌರವಗಳಿಗೆ ಭಾಜನರಾಗಿ ನಿವೃತ್ತರಾಗಿರುವ
ಅರುಣ ಗಾಂವಕರವರ ವಿಶ್ರಾಂತ ಬದುಕು ನೆಮ್ಮದಿಗಳಿಂದ ತುAಬಿರಲಿ” ಎಂದರು.

ವಿನಾಯಕ ನಾಯಕ ಪ್ರಿನ್ಸಿಪಾಲ್ ಕೆರವಾಡಿ ಕಾಲೇಜ್ ಕಾರವಾರ ಮಾತನಾಡಿ “ಅರುಣ ಗಾಂವಕರವರ ಬದುಕು ಹಾಗೂ ಅನುಭವಗಳು ನಮ್ಮೆಲ್ಲರಿಗೂ ಮಾರ್ಗದರ್ಶಕವಾಗಿರಲಿ ಎಂದು ಹೃದಯ ಪೂರ್ವಕವಾಗಿ ಹಾರೈಸಿದರು”. ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ಹಾಗೂ ಉತ್ತಮ ಕ್ರಿಕೆಟ್ಆ ಟಗಾರರಾದ ಅರುಣ ಪಂಡಿತ್ ಬರ್ಗಿ ಮಾತನಾಡಿ “ಹಿರೇಗುತ್ತಿ ನೆಲ ಕ್ರಿಕೆಟ್ಆ ಟಕ್ಕೆ ಗಂಡುಮೆಟ್ಟಿನ ನೆಲೆಯಾಗಿದೆ ಅನೇಕ ಕ್ರಿಕೆಟ್ ಆಟಗಾರರಿಗೆ ಅರುಣ ಗಾಂವಕರವರು ಸ್ಪೂರ್ತಿಯಾಗಿದ್ದಾರೆ ಅಲ್ಲದೇ ಶಿಕ್ಷಣ ಇಲಾಖೆಯೊಂದಿಗೆ ವಿದ್ಯಾರ್ಥಿಗಳೊಂದಿಗೆ ಅವರ ಸೌಹಾರ್ದತೆ ಕಾರ್ಯ ಒಡನಾಟಗಳು ಜನಮನ್ನಣೆ ಗಳಿಸಿದ್ದವು. ಹಾಗೆಯೇ ಕುಟುಂಬದಲ್ಲಿಯೂ ಇವರು ಓರ್ವ ಆದರ್ಶ ವ್ಯಕ್ತಿ” ಎಂದರು.


ಸನ್ಮಾನ ಕಾರ್ಯಕ್ರಮದಲ್ಲಿ ಕುಮಟಾ ಅಂಕೋಲಾ ಕಾರವಾರ ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ಉಪನ್ಯಾಸಕ ವೃಂದದವರು ಹಾಗೂ ಹಿರೇಗುತ್ತಿಯ ಗೆಳೆಯರ ಬಳಗದ ರಾಜೀವ ಗಾಂವಕರ, ರಾಮು ಗಾಂವಕರ, ಚಂದ್ರಹಾಸ ನಾಯಕ, ಕಮಲಾಕ್ಷ ಗಾಂವಕರ, ಕಾAತಾ ಗಾಂವಕರ, ದೇವದಾಸ ನಾಯಕ, ಕೃಷ್ಣಮೂರ್ತಿ ನಾಯಕ, ಗಜಾನನ ನಾಯಕ, ರಾಮು ಕೆಂಚನ್, ಉಮೇಶ ಗಾಂವಕರ, ಆನಂದು ನಾಯಕ, ಮಹೇಶ ಬರ್ಗಿ, ತಿಮ್ಮಪ್ಪ ನಾಯಕ, ಹರೀಶ ನಾಯಕ, ಸಂತೋಷ ಗಾಂವಕರ, ಸುರೇಂದ್ರ ನಾಯಕ, ವೆಂಕಟ್ರಾಯ ನಾಯಕ, ಸಂತು ನಾಯಕ, ಸಂದೀಪ ಗಾAವಕರ, ಭಾರ್ಗವ ಗಾಂವಕರ, ಅರವಿಂದ ನಾಯಕ, ವೆಂಟು ಕವರಿ, ಕಿಟ್ಟು ನಾಯಕ, ಮನಿಷ್ ನಾಯಕ, ಸೌರಭ ನಾಯಕ,
ಪಮ್ಮು ನಾಯಕ, ಬಿ.ಜಿ.ನಾಯಕ ಹಾಗೂ ಹಿರೇಗುತ್ತಿ ಊರ ನಾಗರಿಕರು, ಗೆಳೆಯರ ಬಳಗದವರು ಉಪಸ್ಥಿತರಿದ್ದರು. ಉದ್ದಂಡ ಗಾಂವಕರ ಸ್ವಾಗತಿಸಿದರು, ಎನ್.ರಾಮು ಹಿರೇಗುತ್ತಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಪ್ರಶಾಂತ ನಾಯಕ
ವಂದಿಸಿದರು.

ಎನ್. ರಾಮು. ಹಿರೇಗುತ್ತಿ.

Back to top button