ಕುಮಟ: ಅರಣ್ಯವಾಸಿಗಳಿಂದ ಅರಣ್ಯ ರಕ್ಷಣೆ, ಪರಿಸರ ಜಾಗೃತೆ ಮತ್ತು ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ನಿರ್ಧಾರದಂತೆ ಕುಮಟ ತಾಲೂಕಿನಾದ್ಯಂತ 1 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಯಶಸ್ವಿ ಲಕ್ಷ ವೃಕ್ಷ ಗಿಡ ನೆಡುವ ಕಾರ್ಯಕ್ರಮ ಜರುಗಿದವು.
ಮಿರ್ಜಾನ, ಬರ್ಗಿ, ಗೋಕರ್ಣ, ಹಿರೇಗುತ್ತಿ, ದಿವಗಿ, ಕೋಡ್ಕಣಿ, ಕತಗಾಲ, ಬಂಗಣೆ, ಕಲವೆ, ಸಂತೆಗುಳಿ, ಹೆಗಡೆ ಗ್ರಾಮ ಪಂಚಾಯತಗಳಲ್ಲಿ ಅರಣ್ಯವಾಸಿಗಳು ಆಸಕ್ತಿಯಿಂದ ಅರಣ್ಯ ಭೂಮಿ ಸಾಗುವಳಿ ಕ್ಷೇತ್ರದಲ್ಲಿ ವಿವಿಧ ರೀತಿಯ ಗಿಡ ನೆಟ್ಟಿರುವ ವರದಿಯಾಗಿದೆ. ತಾಲೂಕದ್ಯಂತ ಸುಮಾರು 39 ಹಳ್ಳಿಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಜರುಗಿದ್ದು ಇರುತ್ತದೆ. ಅಗಸ್ಟ 14 ರವರೆಗೆ ತಾಲೂಕಾದ್ಯಂತ ಸುಮಾರು 15 ಸಾವಿರ ಗಿಡ ನೆಡಲು ತೀರ್ಮಾನಿಸಿದ್ದೇವೆ ಎಂದು ತಾಲೂಕ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಮಂಜುನಾಥ ಮರಾಠಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕಾದ್ಯಂತ ಜರುಗಿದ ಲಕ್ಷ ವೃಕ್ಷ ಗಿಡ ನೆಡುವ ಕಾರ್ಯಕ್ರಮದ ನೇತ್ರತ್ವವನ್ನ ಸಾರಬಿ ಬೆಟ್ಕುಳಿ, ಯಾಕೂಬ ಸಾಬ್, ರಾಮಾ ಎಸ್ ಮಡಿವಾಳ, ನಾಗಪ್ಪ ಜಟ್ಟು ಗಾವಡಿಗ, ಸಂತೋಷ ಹನುಮಂತ ಭಟ್ಟ, ಮಂಗಲ ಜಿ, ಜ್ಯೋತಿ ಜಿ ಗಾವಡಾ, ಗುಲಾಬಿ ಗಣೇಶ ನಾಯ್ಕ, ಶಾರದಾ ಸೀತಾರಾಮ ನಾಯ್ಕ, ಸುರೇಶ ಪಟಗಾರ, ರಾಮಚಂದ್ರ ಸೋಮ ಮರಾಠಿ, ಶ್ರೀರಾಮ, ಗೋಪಾಲ, ರಾಧಾ, ಹುಲಿಯಪ್ಪ ಶಂಕರ ಗೌಡ, ಮಹಮ್ಮದ್ ಅಲಿ, ಮರಿಯಂಬಿ ಮುಂತಾದವರು ನೇತ್ರತ್ವವಹಿಸಿದ್ದರು.
ವಿಸ್ಮಯ ನ್ಯೂಸ್, ಕುಮಟಾ