Tiranga Rally: ಗಮನಸೆಳೆದ ಬೃಹತ್ ತಿರಂಗ ರ‍್ಯಾಲಿ : ಬೃಹತ್ ತ್ರಿವರ್ಣಧ್ವಜ ಹೊತ್ತು ಮೆರವಣಿಗೆ
ಕುಮಟಾ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಮಟಾ ಇವರ ವತಿಯಿಂದ ಬೃಹತ್ ತಿರಂಗ ರ‍್ಯಾಲಿಯನ್ನು ಇಂದು ಹಮ್ಮಿಕೊಳ್ಳಲಾಗಿತ್ತು. 76 ನೇ ವರ್ಷದ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಈ ಒಂದು ಬೃಹತ್ ತಿರಂಗ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ವಿವಿದ ಕಾಲೇಜುಗಳ ಸುಮಾರು 700 ಕ್ಕೂ ಅಧಿಕ ವಿದ್ಯಾರ್ಥಿಗಳು ಒಗ್ಗೂಡಿ ತಿರಂಗ ರ‍್ಯಾಲಿ ನಡೆಸಿದರು. ಕುಮಟಾದ ಡಾ. ಎವಿ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಿಂದ ಪ್ರಾರಂಭಗೊOಡ ತಿರಂಗ ರ‍್ಯಾಲಿಯು ಹೆಗಡೆ ಕ್ರಾಸ್, , ಮಾಸ್ತಿಕಟ್ಟೆ, ಭಸ್ತಿಪೇಟೆ ಮುಂತಾದ ಮಾರ್ಗದ ಮೂಲಕ ಸಂಚರಿಸಿ ಬಳಿಕ ಗಿಬ್ ಹೈಸ್ಕೂಲ್‌ನ ಮೈದಾನದಲ್ಲಿ ಮುಕ್ತಾಯಗೊಳಿಸಿದರು. ನೂರಾರು ವಿದ್ಯಾರ್ಥಿಗಳು ಘೋಷಣೆ ಕೂಗುತ್ತಾ, ಬೃಹತ್ ತಿರಂಗವನ್ನು ಹೊತ್ತು ನಡೆದ ದೃಷ್ಯ ಎಲ್ಲರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿರಸಿ ವಿಭಾಗದ ಸಂಚಾಲಕ ವೀರೇಂದ್ರ ಗುನಗ ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿ, 76 ನೇ ವರ್ಷದ ಸ್ವಾತಂತ್ರö್ಯ ದಿನಾಚರಣೆಯ ಅಂಗವಾಗಿ ಈ ಒಂದು ವಿಶೇಷ ರ‍್ಯಾಲಿಯನ್ನು ಹಮ್ಮಿಕೊಂಡಿದ್ದೆವೆ ಎಂದು ಮಾಹಿತಿ ನೀಡುತ್ತಾ ರ‍್ಯಾಲಿಯು ಯಶಸ್ವಿಯಾಗಿ ಸಂಪನ್ನಗೊಳ್ಳಲು ಸಹಕರಿಸಿದ ಸರ್ವರಿಗೂ ಅಭಿನಂದಿಸಿದರು. ಈ ವೇಳೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಪ್ರಮುಖರಾದ ನಂದೀಶ ನಾಯ್ಕ ಮಾತನಾಡಿ, ಬೃಹತ್ ತಿರಂಗ ರ‍್ಯಾಲಿಯ ಮುಖ್ಯ ಉದ್ದೇಶದ ಕುರಿತಾಗಿ ಮಾಹಿತಿ ನೀಡಿದರು.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ.