Important
Trending

ಮೀನುಗಾರಿಕೆ ತೆರಳಿದ ಬೋಟ್ ಬಂದರ್ ಸಮೀಪ ಮುಳುಗಡೆ: ಮೀನುಗಾರರ ರಕ್ಷಣೆ

ಭಟ್ಕಳ: ಮಲ್ಪೆಯಿಂದ ಮೀನುಗಾರಿಕೆ ತೆರಳಿದ ಬೋಟ್ ವೊಂದು ಭಟ್ಕಳ ಬಂದರ್ ಸಮೀಪದ ಕೋಟೆಗುಡ್ಡೆ ಸಮೀಪ ಮುಳುಗಡೆಯಾಗಿದ್ದು, ಬೋಟ್ ನಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಮಲ್ಪೆಯ ತೊಟ್ಟಂ ನಿವಾಸಿ ದೀಕ್ಷಿತ್ ಸುಂದರ ಕೊಟ್ಯಾನ್ ಎನ್ನುವವರಿಗೆ ಸೇರಿದ ಸಿಹಾನ್ ಫಿಶರೀಸ್ ಬೋಟ್ ಮುಳುಗಡೆಯಾಗಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿರುವ ಕುರಿತು ವರದಿಯಾಗಿದೆ.

ರಾತ್ರಿ ಮಲ್ಪೆ ಬಂದರಿನಿoದ ಮೀನುಗಾರಿಕೆಗೆ ಹೋಗಿದ್ದ ಬೋಟು ಭಟ್ಕಳ ತಾಲೂಕಿನ ಕೋಟೆಗುಡ್ಡೆ ಬಳಿಯಲ್ಲಿ ಮೀನುಗಾರಿಕೆಯನ್ನು ಮಾಡುತ್ತಿರುವಾಗ ಬೋಟಿನ ಅಡಿ ಭಾಗಕ್ಕೆ ಯಾವುದೋ ಒಂದು ಬಲವಾದ ವಸ್ತು ಡಿಕ್ಕಿ ಹೊಡೆದಿದ್ದರಿಂದ ಬೋಟಿನ ಅಡಿಭಾಗದಲ್ಲಿ ಒಟ್ಟೆಯಾಗಿ ನೀರು ಬರಲು ಪ್ರಾರಂಭವಾಗಿದೆ. ತಕ್ಷಣ ಬೋಟಿನ ಚಾಲಕ ಅಳ್ವೇಕೋಡಿಯ ರವಿ ನಾಗಪ್ಪ ಮೊಗೇರ ಇವರು ಬೇರೆ ಬೋಟುಗಳನ್ನು ಕರೆದು ಅದಕ್ಕೆ ತಮ್ಮ ಬೋಟ್‌ನ್ನು ಕಟ್ಟಿ ಎಳೆದುಕೊಂಡು ಬರಲು ಪ್ರಯತ್ನಿಸಿದರು. ಆದರೆ, ಬೋಟಿನೊಳಗಡೆ ಜೋರಾಗಿ ನೀರು ಬರಲು ಆರಂಭವಾಗಿದ್ದರಿoದ ಬೋಟು ಮುಳುಗಡೆಯಾಗಿದೆ.

ಬೋಟಿನಲ್ಲಿದ್ದ ಮೀನುಗಾರರಾದ ಮೋಹನ, ಮಂಜುನಾಥ, ದೇವೇಂದ್ರ, ರಮೇಶ, ವೆಂಕಟೇಶ ಕಲ್ಲೇಶಿ ಇವರುಗಳನ್ನು ಬೇರೆ ಬೋಟಿನವರು ರಕ್ಷಣೆ ಮಾಡಿದ್ದು ಬೋಟಿನಲ್ಲಿದ್ದ ಕೆಲವು ವಸ್ತುಗಳನ್ನು ಕೂಡಾ ರಕ್ಷಣೆ ಮಾಡಲಾಗಿದೆ ಎನ್ನಲಾಗಿದೆ. ಬೋಟು ಮುಳುಗಡೆಯಿಂದ ತಮಗೆ ಲಕ್ಷಾಂತರ ರೂಪಾಯಿ ಹಾನಿಯಾಗಿದೆ ಎಂದು ಮಾಲಕರು ತಿಳಿಸಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button