Follow Us On

WhatsApp Group
Important
Trending

ಭೀಕರ ಅಪಘಾತ: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಬಡಿದ ಲಾರಿ: ಹಗ್ಗ ಕಟ್ಟಾಗಿ ಟ್ರಾಲಿಯಿಂದ ಉರುಳಿದ ಕಾಂಕ್ರೀಟ್ ಪೈಪ್ : ಛಿದ್ರ ಛಿದ್ರ ಗೊಂಡ ದೇಹ

ಅಂಕೋಲಾ: ಹೆದ್ದಾರಿ ಬದಿಯಿಂದ ಮನೆಗೆ ತೆರಳುತ್ತಿದ್ದ ವ್ಯಕ್ತಿಗೆ ಟ್ರಾಲಿ ಲಾರಿ ಬಡಿದದ್ದಲ್ಲದೇ,ಲಾರಿಯಲ್ಲಿ ತುಂಬಿ ಸಾಗಿಸುತ್ತಿದ್ದ ಭಾರೀ ಗಾತ್ರದ ಸಿಮೆಂಟ್ ಪೈಪ್ ಉರುಳಿ, ವ್ಯಕ್ತಿ ಸ್ಥಳದಲ್ಲಿಯೇ ದಾರುಣವಾಗಿ ಮೃತ ಪಟ್ಟ ಘಟನೆ ತಾಲೂಕಿನ ಅಗಸೂರು ಸರಳೇಬೈಲ್ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ನಡೆದಿದೆ.

ಅಗಸೂರು ಸರಳೇಬೈಲ್ ನಿವಾಸಿ ಕೂಲಿ ಕಾರ್ಮಿಕ ಸಣತಮ್ಮ ಯಂಕು ಗೌಡ (35) ಮೃತ ದುರ್ದೈವಿಯಾಗಿದ್ದಾನೆ.ಈತ ಕೂಲಿ ಕೆಲಸ ಮಾಡಿ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಮನೆ ಇನ್ನೇನು ಸಮೀಪಿಸುತ್ತಿದೆ ಎನ್ನುವಾಗಲೇ ಅನತಿ ದೂರದಲ್ಲೇ ಜವರಾಯನಂತೆ ಲಾರಿ ಬಂದೆರಗಿದೆ.

ಲಾರಿ ಅಪಘಾತ ಪಡಿಸಿದ್ದಷ್ಟೇ ಅಲ್ಲದೇ ಲಾರಿಯಿಂದ ಉರುಳಿ ಬಿದ್ದ ದೊಡ್ಡ ಗಾತ್ರದ ಕಾಂಕ್ರೀಟ್ ಪೈಪ್ ನಡಿ ಸಿಲುಕಿ ಕಾಲು, ದೇಹ ಬೇರ್ಪಟ್ಟು ಮಾಂಸದ ಮುದ್ದೆ ರೂಪದಲ್ಲಿ ವಿಕರಾಳವಾಗಿ ಛಿದ್ರ ಛಿದ್ರವಾಗಿ ಭಯ ಬೀಳಿಸುವಂತಿದೆ.

112 ತುರ್ತು ವಾಹನ ಸಿಬ್ಬಂದಿಗಳು, ಸಾಮಾಜಿಕ ಕಾರ್ಯಕರ್ತ ವಿಜಯ್ ಕುಮಾರ್ ನಾಯ್ಕ, ಸಹಾಯಕ ಬೊಮ್ಮಯ್ಯ ನಾಯ್ಕ , ಸ್ಥಳೀಯರ ಸಹಕಾರದಲ್ಲಿ ಛಿದ್ರ ಛಿದ್ರಗೊಂಡ ದೇಹದ ಭಾಗಗಳನ್ನು ಒಟ್ಟುಗೂಡಿಸಿ,ತಾಲೂಕ ಆಸ್ಪತ್ರೆ ಶವಾಗಾರಕ್ಕೆ ತಲುಪಿಸಲು ಸಹಕರಿಸಿದರು.

ಹುಬ್ಬಳ್ಳಿ ಕಡೆಯಿಂದ ಕಾರವಾರ ಕಡೆಗೆ ಯಾವುದೋ ಕಾಮಗಾರಿಗೆ ಪೈಪ್ ಗಳನ್ನು ತುಂಬಿ ಸಾಗುತ್ತಿದ್ದ ಟ್ರಾಲಿ
ಲಾರಿ ಚಾಲಕನ ಅತಿವೇಗ ಹಾಗೂ ಅಜಾಗೂರಕತೆಯಿಂದ ಚಾಲಕನ ನಿಯಂತ್ರಣ ತಪ್ಪಿ, ಹೆದ್ದಾರಿ ಅಂಚಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಸಣತಮ್ಮ ಗೌಡನಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಲ್ಲದೇ, ಅಪಘಾತದ ರಭಸಕ್ಕೆ ಲಾರಿಯಲ್ಲಿ ತುಂಬಿದ ಸಿಮೆಂಟ್ ಕಾಂಕ್ರೀಟ್ ಪೈಪಿನ ಹಗ್ಗ ತುಂಡಾಗಿ ಪೈಪ್ ಅಪಘಾತಗೊಂಡ ವ್ಯಕ್ತಿಯ ಮೇಲೆ
ಬಿದ್ದಿದೆ.

ಆತ ಸ್ಥಳದಲ್ಲಿಯೇ ಮೃತ ಪಟ್ಟ ಬಗ್ಗೆ ದೂರು ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು, ಲಾರಿ ಚಾಲಕ ಧಾರವಾಡ ನವಲೂರು ನಿವಾಸಿ ಸಣ್ಣಮತಿ ಬಸಪ್ಪ ಶಿವಣ್ಣನವರ್ ಎಂಬಾತನ
ಮೇಲೆ ಪ್ರಕರಣ ದಾಖಲಿಸಿಕೊಂಡು, ತನಿಖೆ ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button