Important

ಮೀನು ಖರೀದಿಸುವ ನಾಟಕ: ಮೀನುಗಾರ ಮಹಿಳೆಯ ಕೊರಳಿನಲ್ಲಿದ್ದ ಬಂಗಾರ ಸರ ಹರಿದುಕೊಂಡು ಹೋದ ಬೈಕ್ ಸವಾರರು

ಭಟ್ಕಳ: ಬೈಕ್ ಮೇಲೆ  ಬಂದ ಇಬ್ಬರು ವ್ಯಕ್ತಿಗಳು ಮನೆ ಮನೆಗೆ ತೆರಳಿ ಮೀನು ಮಾರಾಟ ಮಾಡುವ ಮಹಿಳೆಯೋರ್ವಳ ಸರಗಳ್ಳತನ ಮಾಡಿ ಪರಾರಿಯಾದ ಘಟನೆ ಶಿರಾಲಿಯ ಸೋನಾರಾಕೇರಿ ಕ್ರಾಸ್ ಸಮೀಪ ನಡೆದಿದೆ. ಸರಗಳ್ಳತನವಾದ ಮೀನುಗಾರ ಮಹಿಳೆ, ನಾಗಮ್ಮ ಮಹಾದೇವ ಮೊಗೇರ ಎಂದು ತಿಳಿದು ಬಂದಿದೆ.

ಈಕೆ ಎಂದಿನಂತೆ ಶಿರಾಲಿಯ ಅಕ್ಕ ಪಕ್ಕದ  ಗ್ರಾಮದ ಮನೆ ಮನೆಗಳಿಗೆ ಮೀನು ವ್ಯಾಪಾರ ಮಾಡಿಕೊಂಡು  ಸೋನಾರಕೇರಿ ಕ್ರಾಸ್‌ ನಿಂದ ರಾಷ್ಟ್ರೀಯ ಹೆದ್ದಾರಿ ಕಡೆಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ . ಮುಂದಿನಿಂದ ಬಂದ ಇಬ್ಬರು ಬೈಕ್ ಸವಾರರು, ಸಮೀಪ ಬಂದು ಏನು ಮೀನು ಇದೆ ಎಂದು ವಿಚಾರಿಸಿದಾಗ , ಮೀನು ಮಾರಾಟ ಮಹಿಳೆ ಬಂಗಡೆ ಮೀನು  ಎಂದು ಹೇಳಿದ್ದಾಳೆ. ಈ ವೇಳೆ ಬೈಕ್ ಸವಾರರು ಹೆಲ್ಮೆಟ್ ಧರಿಸಿದ್ದು., ಹಿಂಬಾಗದಲ್ಲಿ ಕುಳಿತಿದ್ದ ಕಪ್ಪು ಬಣ್ಣದ ಚಹರೆಯುಳ್ಳ ವ್ಯಕ್ತಿ ಒಮ್ಮೆಗೆ ಕೊರಳಿಗೆ ಕೈ ಹಾಕಿ ಕೊರಳಿನಲ್ಲಿದ್ದ ಸುಮಾರು 27 ಗ್ರಾಂ ತೂಕದ 87,000 ಮೌಲ್ಯದ ಬೆಳೆ ಬಾಳುವ ಬಂಗಾರದ ಚೈನ್ ಹರಿದುಕೊಂಡು ನಾಪತ್ತೆಯಾಗಿದ್ದಾನೆ.. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button