Join Our

WhatsApp Group
Important
Trending

ಟ್ಯೂಶನ್ ಮತ್ತು ಕಾನ್ವೆಂಟ್ ಗೂ ಹೋಗದೇ ಕಾಣೆಯಾದ SSLC ವಿದ್ಯಾರ್ಥಿ: ಕಿಡ್ನಾಪ್ ಆಗಿರುವ ಸಂಶಯವೂ ಇದೆಯಂತೆ

ಪೊಲೀಸ್ ಪ್ರಕಟಣೆಯಲ್ಲಿ ಇರುವುದೇನು ?

ಅಂಕೋಲಾ : ಎಂದಿನಂತೆ ಮನೆಯಿದ ಟ್ಯೂಶನ್ ಮತ್ತು ಆ ಬಳಿಕ ಶಾಲೆಗೆ ಹೋಗಿ ಮತ್ತೆ ಪುನಃ ಮನೆಗೆ ಮರಳುತ್ತಿದ್ದ ಎಸ್. ಎಸ್.ಎಲ್. ಸಿ ವಿದ್ಯಾರ್ಥಿಯೋರ್ವ ಬಹು ಹೊತ್ತಾದರೂ ಮನೆಗೆ ಮರಳಿರುವುದರಿಂದ ಆತಂಕಗೊಂಡ ಪಾಲಕರು, ತಮ್ಮ ಮನೆ ಮಗ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾನೆ ಇಲ್ಲವೇ ಯಾರೋ ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿ, ತನ್ನ ಮಗನನ್ನು ಹುಡುಕಿಕೊಡುವಂತೆ ಪೋಲೀಸ್ ದೂರಿನಲ್ಲಿ ವಿನಂತಿಸಿದ್ದಾರೆ.

WhatsApp Group Join Now

ಭಾರ್ಗವ ರಮೇಶ ನಾಯಕ (15 ) , ಪಟ್ಟಣದ ನಿರ್ಮಲ ಹೃದಯ ಕಾನ್ವೆಂಟ್ ಹೈಸ್ಕೂಲ್ ನಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದವನು, ದಿನಾಂಕ 30-10 – 2023 ರಂದು ಬೆಳಿಗ್ಗೆ 8 ಗಂಟೆಗೆ, ಅಂಕೋಲಾ ತಾಲೂಕಿನ ಶೆಟಗೇರಿಯ ತನ್ನ ಮನೆಯಿಂದ ಹೋದವನು, ಟ್ಯೂಶನ್ ಗೂ ಹೋಗದೇ, ಶಾಲೆಗೂ ಹೋಗದೇ, ಇದುವರೆಗೂ ಮನೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಅಥವಾ ಆತನಿಗೆ ಯಾರಾದರೂ ಅಪಹರಿಸಿಕೊಂಡು ಹೋಗಿರುವ ಸಂಶಯ ಇರುತ್ತದೆ , ಕಾಣೆಯಾದ ತನ್ನ ಮಗನನ್ನು ಪತ್ತೆ ಮಾಡಿಕೊಡಿ ಎಂದು, ನೊಂದ ತಂದೆ ಶೆಟಗೇರಿಯ ರಮೇಶ ನಾರಾಯಣ ನಾಯಕ ಪೊಲೀಸ್ ದೂರು ನೀಡಿದ್ದಾರೆ.

ಪ್ರಕರಣವನ್ನು ದಾಖಲಿಸಿಕೊಂಡ ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಂದಾಜು 5 ಪೂಟ್ 6 ಇಂಚು ಎತ್ತರ,ಕಪ್ಪು ಮೈ ಬಣ್ಣ,ಗೋಲು ಮುಖ,ಸದೃಢ ಮೈಕಟ್ಟು,ತಲೆಯಲ್ಲಿ ಸುಮಾರು ಮೂರು ಇಂಚು ಉದ್ದ ಕಪ್ಪು ಕೂದಲಿದ್ದು,ಕನ್ನಡ ಇಂಗ್ಲಿಷ್ ಹಿಂದಿ ಭಾಷೆ ಅರಿತಿರುವ, ಈತ ಮನೆಯಿಂದ ಹೋಗುವಾಗ ಮೆಹಂದಿ ಬಣ್ಣದ ಪೂರ್ತಿ ತೋಳಿನ ಚೆಕ್ಸ್ ಶರ್ಟ್,ಕಪ್ಪು ಬಣ್ಣದ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಸ್ಯಾಂಡಲ್ ಧರಿಸಿದ್ದು,ಈ ಮೇಲಿನ ಚಹರೆಯುಳ್ಳ ವ್ಯಕ್ತಿ ಕಂಡು ಬಂದಲ್ಲಿ,ಅಥವಾ ಈ ಕುರಿತು ಏನಾದರೂ ಮಾಹಿತಿ ಇದ್ದಲ್ಲಿ ಅಂಕೋಲಾ ಪೊಲೀಸ್ ಠಾಣೆ (9480805250/9480805268) ಇಲ್ಲವೇ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಲು ಪೋಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಸ್ ನಿಲ್ದಾಣದ ಹತ್ತಿರ ಆತನ ಸೈಕಲ್ ಇತ್ತು ಎನ್ನಲಾಗಿದ್ದು, ಆತನೇ ಯಾವುದೋ ಕಾರಣದಿಂದ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದನೇ ? ಎಂಬ ಮಾತು ಕೇಳಿ ಬಂದಂತಿದ್ದು, ಪೋಲೀಸ್ ತನಿಖೆಯಿಂದ ಸತ್ಯಾಂಶ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button