Big News
Trending

ಜಿಲ್ಲೆಯಲ್ಲಿಂದು 108 ಕರೊನಾ ಕೇಸ್: ಮೂವರ ಸಾವು

115 ಮಂದಿ ಗುಣಮುಖರಾಗಿ ಬಿಡುಗಡೆ
ಸೋಂಕಿತರ ಸಂಖ್ಯೆ 3,687ಕ್ಕೆ ಏರಿಕೆ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 108 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ, ಭಟ್ಕಳದಲ್ಲಿ 9, ಕಾರವಾರ 18, ಅಂಕೋಲಾ 1, ಕುಮಟಾ 15, ಹೊನ್ನಾವರ 16, ಶಿರಸಿ 7, ಹಳಿಯಾಳ 26, ಜೋಯ್ಡಾ 4, ಯಲ್ಲಾಪುರ 6, ಮುಂಡಗೋಡಿನಲ್ಲಿ 6 ಪ್ರಕರಣ ದೃಢಪಟ್ಟಿದೆ. ಇದೇ ವೇಳೆ, ಇಂದು ವಿವಿಧ ಆಸ್ಪತ್ರೆಯಿಂದ 115 ಮಂದಿ ಬಿಡುಗಡೆಯಾಗಿದ್ದಾರೆ. ಕಾರವಾರ 12, ಅಂಕೋಲಾ 26, ಹೊನ್ನಾವರ 12 ಭಟ್ಕಳ 11, ಶಿರಸಿ 19, ಸಿದ್ದಾಪುರ 2, ಹಳಿಯಾಳ 27, ಜೋಯ್ಡಾದಲ್ಲಿ ಆರು ಮಂದಿ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿಂದು ಮೂವರ ಸಾವು:

ಇಂದು 108 ಕರೊನಾ ಕೇಸ್ ದಾಖಲಾದ ಬೆನ್ನಲ್ಲೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3687 ಕ್ಕೆ ಏರಿಕೆಯಾಗಿದೆ. ಹೊನ್ನಾವರದಲ್ಲಿ 2 ಮತ್ತು ಶಿರಸಿಯಲ್ಲಿ ಒಂದು ಸಾವಾಗಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. 868 ಮಂದಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಮಟಾದಲ್ಲಿ ಇಂದು 15 ಪ್ರಕರಣ:

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಕೂಡ ಒಟ್ಟು 15 ಕರೋನಾ ಪಾಸಿಟಿವ್ ಪ್ರಕರಣ ಕಂಡು ಬಂದಿದೆ. ಇಂದು ಅತಿ ಹೆಚ್ಚು ಅಂದರೆ ಕುಮಟಾ ತಾಲೂಕಿನ ವನ್ನಳ್ಳಿಯಲ್ಲಿಯೇ 10 ಸೋಂಕಿತ ಪ್ರಕರಣ ಕಂಡುಬoದಿದೆ. ಇನ್ನುಳಿದಂತೆ ಭಸ್ತಿಪೇಟೆ, ಗುಡೆಅಂಗಡಿ ಮುಂತಾದ ಪ್ರದೇಶಗಳಲ್ಲಿ ಒಂದೊ0ದು ಪ್ರಕರಣ ದಾಖಲಾಗಿದೆ.

ಭಸ್ತಿಪೇಟೆಯ 45 ವರ್ಷದ ಪುರುಷ, ವನ್ನಳ್ಳಿಯ 57 ವರ್ಷದ ಮಹಿಳೆ, ವನ್ನಳ್ಳಿಯ 32 ವರ್ಷದ ಪುರುಷ, ವನ್ನಳ್ಳಿಯ 9 ವರ್ಷದ ಬಾಲಕಿ, ವನ್ನಳ್ಳಿಯ 9 ವರ್ಷದ ಬಾಲಕಿ, ವನ್ನಳ್ಳಿಯ 1 ವರ್ಷದ ಮಗು, ವನ್ನಳ್ಳಿಯ 44 ವರ್ಷದ ಪುರುಷ, ವನ್ನಳ್ಳಿಯ 33 ವರ್ಷದ ಮಹಿಳೆ, ವನ್ನಳ್ಳಿಯ 6 ವರ್ಷದ ಬಾಲಕ, ವನ್ನಳ್ಳಿಯ 3 ವರ್ಷದ ಮಗು, ವನ್ನಳ್ಳಿಯ 4 ವರ್ಷದ ಬಾಲಕ, ಕುಮಟಾದ 34 ವರ್ಷದ ಪುರುಷ, ಕುಮಟಾದ 44 ವರ್ಷದ ಪುರುಷ, ಕುಮಟಾದ 29 ವರ್ಷದ ಪುರುಷ, ಗುಡೆಅಂಗಡಿಯ 71 ವರ್ಷದ ವೃದ್ಧನಲ್ಲಿ ಸೋಂಕು ದೃಡಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಈ 15 ಜನರು ಕೂಡ ಹಿಂದೆ ಸೋಂಕು ಕಾಣಿಸಿಕೊಂಡವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಕಾರಣ ಇವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆ ಮಾಡಲಾಗಿತ್ತು. ಇದೀಗ ಇವರ ವರದಿಯೂ ಕೂಡ ಪಾಸಿಟಿವ್ ಬಂದಿದೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬಂಧ ತೋರಿಸಲಾಗುವುದು
ಎರಡನೇಯ ಸಂಬಂಧವನ್ನು ತೋರಿಸಲಾಗುವುದು
ಮೊಬೈಲ್: 7848833568

Back to top button