ಮಾಹಿತಿ
Trending

ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ದೇವರಾಜ್ ಅರಸ್ ಅವರ ಜನ್ಮ ದಿನಾಚರಣೆ

[sliders_pack id=”3491″]

ಅಂಕೋಲಾ : ತಾಲೂಕಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರವಾರ ಮಾಜಿ ಪಧಾನಿ ದಿ. ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ತದನಂತರ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ತಹಸೀಲ್ದಾರ ಕಾರ್ಯಲಯದ ಎದುರು ‘ಜನಧ್ವನಿ’ ಹೆಸರಿನ ಸಾಂಕೇತಿಕ ಧರಣಿ ಸತ್ಯಾಗ್ರಹ ಮತ್ತು ಪ್ರತಿಭಟನೆ ನಡೆಸಿ, ತಹಸೀಲ್ದಾರ ಉದಯ ಕುಂಬಾರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಪುರಸಭೆ ಮುಖ್ಯಾಧೀಕಾರಿ ಬಿ. ಪ್ರಹ್ಲಾದ ಉಪಸ್ಥಿತರಿದ್ದರು.

ಅಂಕೋಲಾ ತಾಲೂಕಾ ಬ್ಲಾಕ್ ಕಾಂಗ್ರೇಸ್ ವತಿಯಿಂದ ‘ಜನಧ್ವನಿ’ ಪ್ರತಿಭಟನೆ : ಮನವಿ

ಮನವಿಯ ವಿಷಯ : ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ, ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ವಿರೋಧಿ ಕಾರ್ಮಿಕ ಕಾಯಿದೆ ತಿದ್ದುಪಡಿಗಳನ್ನು ತಕ್ಷಣ ವಾಪಸ್ಸ ತೆಗೆದುಕೊಳ್ಳುವುದು, ಅತಿವೃಷ್ಠಿಯಿಂದ ರಾಜ್ಯದಲ್ಲಿ ಆಗಿರುವ ತೀವ್ರ ಹಾನಿಗೆ ಪರಿಹಾರ ಒದಗಿಸಲು ವಿಫಲರಾಗಿರುವ ಸರ್ಕಾರದ ನಿಲುವನ್ನು ಪ್ರತಿಭಟಿಸಿ ಖಂಡಿಸುವುದಾಗಿದೆ. ಕರೊನಾ ನಿಯಂತ್ರಣ ಕಾರ್ಯಕ್ರಮದಲ್ಲಿ ನಡೆದ ವ್ಯಾಪಕ ಭ್ರಷ್ಟಾಚಾರದ ವಿಷಯದಲ್ಲಿ ಉಚ್ಛ ನ್ಯಾಯಾಲಯವ ಹಾಲಿ ನ್ಯಾಯಾಧೀಸರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕರ್ನಾಟಕ ಕಾಂಗ್ರೆಸ್ ಸಮಿತಿ ಪರವಾಗಿ ಒತ್ತಾಯಿಸಲಾಗಿದೆ.


ಪ್ರಮುಖರ ಮಾತು : ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಪಾಂಡುರoಗ ಗೌಡ ಮಾತನಾಡಿ, ಕಾಂಗ್ರೆಸ ಸರ್ಕಾರ ಜಾರಿಗೆ ತಂದ ‘ಉಳುವವನೇ ಒಡೆಯ’ ಎಂಬ ಕಾನೂನಿನಿಂದ ಬಡವರಿಗೆ ಭೂಮಿ ದೊರೆತ್ತಿತ್ತು. ಬಿಜೆಪಿ ಸರ್ಕಾರ ಅದನ್ನು ಬದಲಿಸಿ ‘ಉಳ್ಳವನೇ ಒಡೆಯ’ ಎಂದು ಮಾಡಹೊರಟಿದೆ. ಸರ್ಕಾರದ ಇಂತಹ ಜನ ವಿರೋಧಿ ಹಲವು ಕಾರ್ಯಗಳನ್ನು ಖಂಡಿಸುತ್ತಿದ್ದೇವೆ ಎಂದರು. ಜಿ.ಪಂ ಮಾಜಿ ಅಧ್ಯಕ್ಷ ರಮಾನಂದ ನಾಯಕ ಮಾತನಾಡಿ, ಸರ್ಕಾರದ ಜನವಿರೋಧಿ ನೀತಿಗಳ ಪರಿಣಾಮ ಮುಂದಿನ ವರ್ಷಗಳಲ್ಲಿ ಕಾಣಿಸಿಕೊಳ್ಳಲಿದ್ದು, ಕೃಷಿ ಭೂಮಿಯಲ್ಲಿ ಬಿತ್ತನೆ ಕಾರ್ಯಗಳು ಕಡಿಮೆಯಾಗಿ ಕಾರ್ಪೋರೇಟ್ ಲಾಭಿಗೆ ಒಳಗಾಗುವ ಆತಂಕ ವ್ಯಕ್ತಪಡಿದರು. ಜಿ.ಪಂ ಮಾಜಿ ಉಪಾಧ್ಯಕ್ಷ ಉದಯ ನಾಯ್ಕ ಮಾತನಾಡಿ ‘ಜನಧ್ವನಿಯಾಗಿ’ ಕಾಂಗ್ರೆಸ ಪಕ್ಷವು ಈ ಪ್ರತಿಭಟನೆ ಹಮ್ಮಿಕೊಂಡು ಮನವಿ ಸಲ್ಲಿಸುತ್ತಿದೆ ಎಂದರು. ಜಿಲ್ಲಾ ಕಾಂಗ್ರೆಸ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಗಾಂವಕರ ಸರ್ಕಾರದ ಜನ ವಿರೋಧಿ ನಿಲುವನ್ನು ಖಂಡಿಸುವುದಾಗಿ ತಿಳಿಸಿದರು. ಜಿ.ಪಂ ಮಾಜಿ ಸದಸ್ಯ ಜಿ.ಎಂ. ಶೆಟ್ಟಿ ಮಾತನಾಡಿ ಅರಣ್ಯ ಅತಿಕ್ರಮಿತ, ಜಿ.ಪಿ.ಎಸ್ ಕಾರ್ಯ ಪೂರ್ಣಗೊಂಡ ಸುಮಾರು 19 ಕುಟುಂಬಗಳಿಗೆ ಸೂರು ಒದಗಿಸುವ ಕಾರ್ಯ ಮಾಡಬೇಕಿದೆ ಎಂದರು.


ಪಾಲ್ಗೊoಡವರು : ಪಕ್ಷದ ಪ್ರಮುಖರಾದ ಕೆ.ಎಚ್ ಗೌಡ, ಮಂಜುನಾಥ ಡಿ.ನಾಯ್ಕ, ಪ್ರಕಾಶ ಗೌಡ, ಜೈಪ್ರಕಾಶ ನಾಯ್ಕ, ಬಿ.ಡಿ ನಾಯ್ಕ, ಪ್ರದೀಪ ವಾಸರೆ, ಪುಟ್ಟು ಬೊಮ್ಮಿ ಗುಡಿ, ಶಾಂತಿ ಆಗೇರ, ಧoನವಂತಿ ರೇವಣಕರ, ಮಂಜುಳಾ ವೆರ್ಣೇಕರ, ದೀಪಾಲಿ ನಾಯ್ಕ, ಮೋನಪ್ಪ ನಾಯ್ಕ, ವಿನೋದ ನಾಯಕ ಬಾಸಗೋಡ, ದಿಕ್ಷೀತ್ ನಾಯಕ, ಮಂಜುನಾಥ ವಿ. ನಾಯ್ಕ, ಸುರೇಶ ನಾಯ್ಕ ಅಸ್ಲಗದ್ದೆ, ನಾಗೇಂದ್ರ ನಾಯ್ಕ ಬೇಳಾ, ಗಜಾನನ ನಾಯ್ಕ, ಸುದೀಪ್ ಬಂಟ್, ಸುರೇಶ ನಾಯ್ಕ ಬಾಳೇಗುಳಿ,ವಿಜು ಪಿಳ್ಳೆ, ದತ್ತಾ ನಾಯ್ಕ ಮಹೇಶ ಗೌಡ ಸೇರಿದಂತೆ ಪಕ್ಷದ ಹಿರಿ-ಕಿರಿಯ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ.

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬಂಧ ತೋರಿಸಲಾಗುವುದು
ಎರಡನೇಯ ಸಂಬಂಧವನ್ನು ತೋರಿಸಲಾಗುವುದು
ಮೊಬೈಲ್: 7848833568

Back to top button