Important
Trending
ಎಕ್ಸ್ ಪ್ರೆಸ್ ರೈಲಿನಲ್ಲಿ ಯುವತಿ ಬಳಿ ತೆರಳಿ ಅಸಭ್ಯವಾಗಿ ವರ್ತಿಸಿದ ಮಧ್ಯವಯಸ್ಕ: ಅವಳು ಮಲಗಿರುವಾಗ ಮಾಡಿದ್ದೇನು?
ಅಂಕೋಲಾ: ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೋರ್ವಳ ಬಳಿ ತೆರಳಿ ಮಧ್ಯ ವಯಸ್ಕ ಪ್ರಯಾಣಿಕನೋರ್ವ ಅಸಭ್ಯವಾಗಿ ನಡೆದು ಕೊಂಡ ಘಟನೆ ಮಾದನಗೇರಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ. ರೈಲು ಸಂಖ್ಯೆ 11098 ಪೂನಾ ಎಕ್ಸಪ್ರೆಸ್ ರೈಲಿನಲ್ಲಿ ಜನವರಿ 2 ರಂದು ಬೆಳಿಗ್ಗೆ 7.20 ಕ್ಕೆ ಈ ಘಟನೆ ನಡೆದಿದೆ.
ಕನ್ಯಾಕುಮಾರಿಯ 22 ರ ಹರೆಯದ ಯುವತಿಯೊಂದಿಗೆ ಕೇರಳ ಕಣ್ಣೂರಿನ ಹಾಲಿ ಮಹಾರಾಷ್ಟ್ರದ ಸಾಂಗ್ಲಿ ಅರೋಡೆಯಲ್ಲಿ ವಾಸವಾಗಿರುವ ಅಂದಾಜು 47 ವಯಸ್ಸಿನ ( ಮಧ್ಯ ವಯಸ್ಕ ) ದತ್ತಾತ್ರೇಯ ಸುಬ್ಬರಾವ್ ಚವಾಣ್ ಎಂಬಾತ ಯುವತಿ, ಮಲಗಿರುವ ವೇಳೆ ಅವಳ ಮುಖದ ಹತ್ತಿರ ತನ್ನ ಗು-ಪ್ತಾಂಗ ಹಿಡಿದು, ಅಸಭ್ಯವಾಗಿ ವರ್ತನೆ ಮಾಡಿದ್ದು ಯುವತಿ ಮಂಡಗಾವ್ ಗೆ ಹೋಗಿ ಮರಳಿ ಬಂದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರೈಲ್ವೆ ಪೊಲೀಸರು ಮತ್ತು ಗೋವಾ ಪೊಲೀಸರ ಸಹಕಾರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ