ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹ : ಕುಮಟಾದಿಂದ ಭಟ್ಕಳಕ್ಕೆ ಪಾದಯಾತ್ರೆ ಮಾಡುವುದಾಗಿ ಘೋಷಣೆ : ಪಾದಯಾತ್ರೆ ಮೂಲಕ ತೆರಳಿ ಸಚಿವ ಮಂಕಾಳ್ ವೈದ್ಯರಿಗೆ ಮನವಿ
ಕುಮಟಾ: ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಂಬoಧಿಸಿದoತೆ ಈ ಹಿಂದಿನ ಬಿ.ಜೆ.ಪಿ ಸರ್ಕಾರದ ಆಡಳಿತದ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ನಿಗದಿಪಡಿಸಲಾಗಿತ್ತು. ಆ ಸ್ಥಳದಲ್ಲಿಯೇ ಆಸ್ಪತ್ರೆ ನಿರ್ಮಾಣ ಮಾಡಲು ಹಣ ಬಿಡುಗಡೆ ಕಾರ್ಯ ಮುಂದುವರೆಸಬೇಕು ಎಂಬ ಆಗ್ರಹ ಹಾಗೂ ಇನ್ನೂ ಹಲವು ಬೇಡಿಕೆಯನ್ನಿಟ್ಟು ಸಾಮಾಜಿಕ ಹೋರಾಟಗಾರರು ಹಾಗೂ ಅನಂತ ಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಬ್ಯಾಗದ್ದೆ ಶಿರಸಿ ಇದರ ಸಂಸ್ಥಾಪಕರಾದ ಅನಂತಮೂರ್ತಿ ಹೆಗಡೆ ಅವರು ಕುಮಟಾದಿಂದ ಪಾದಾಯಾತ್ರೆಯ ಮೂಲಕ ಸಚಿವರಾದ ಮಂಕಾಳುವೈದ್ಯ ಅವರ ಕಚೇರಿಗೆ ತೆರಳಿ ಮನವಿ ಸಲ್ಲಿಸಲಿದ್ದು, ಈ ಕುರಿತಾಗಿ ಮಾಹಿತಿ ನೀಡಲು ಕುಮಟಾದ ಖಾಸಗಿ ಹೊಟೇಲ್ ಒಂದರಲ್ಲಿ ಸುದ್ಧಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅನಂತ ಮೂರ್ತಿ ಹೆಗಡೆ ಅವರು, ಉತ್ತರ ಕನ್ನಡ ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆಯಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಂಬoದಿಸಿದoತೆ ಇದೇ ಬರುವ ಫೆಬ್ರವರಿ 5 ರಿಂದ ಪಾದಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿಂದಿನ ಬಿ.ಜೆ.ಪಿ ಸರ್ಕಾರದ ಆಡಳಿತದ ಸಂದರ್ಭದಲ್ಲಿ ಕುಮಟಾದ ಬಾಳಿಗಾ ಕಾಲೇಜು ಸಮೀಪದ ಕೃಷಿ ಇಲಾಖೆಯ ಜಾಗವನ್ನು ಆಸ್ಪತ್ರೆ ನಿರ್ಮಾಣಕ್ಕಾಗಿ ಗುರುತಿಸಲಾಗಿತ್ತು. ಬಳಿಕ ಕಾಂಗ್ರೆಸ್ ಸರ್ಕಾರದ ಬಂದ ನಂತರ ಆ ಕಾರ್ಯ ಅಲ್ಲಿಗೆ ಸ್ಥಗಿತಗೊಂಡಿದೆ. ಉತ್ತರಕ ಕನ್ನಡ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆಯ ನಿರ್ಮಾಣ ತೀರಾ ಅಗತ್ಯವಿದೆ. ಈ ನಿಟ್ಟಿನಲ್ಲಿ ಪೆಬ್ರವರಿ 5 ರಂದು ಈ ಹಿಂದೆ ನಿಗದಿಪಡಿಸಿದ ಸ್ಥಳಕ್ಕೆ ತೆರಳಿ ಆ ಸ್ಥಳದಲ್ಲಿ ಪೂಜೆ ಸಲ್ಲಸಿ 3 ದಿನಗಳ ಪಾದಯಾತ್ರೆಯ ಬಳಿಕ ಪೆಬ್ರವರಿ 7 ರಂದು ಭಟ್ಕಳಕ್ಕೆ ತೆರಳಿ ಸಚಿವರಿಗೆ ಮನವಿ ಸಲ್ಲಿಸಲಿದ್ದೆವೆ ಎಂದು ಮಾಹಿತಿ ನೀಡಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಆಸ್ಪತ್ರೆಯ ನಿರ್ಮಾಣದ ಜೊತೆಗೆ ಉದ್ಯಮ ಸೃಷ್ಟಿಸುವುದು ಕೂಡ ಮುಖ್ಯವಾಗಿದೆ. ಕುಮಟಾದ ಹಿರೇಗುತ್ತಿಯ ಸಮೀಪ 1800 ಎಕರೆಯಷ್ಟು ಸರಕಾರದ ಜಾಗವಿದೆ. ಆ ಜಾಗದಲ್ಲಿ ಪರಿಸರ ಸ್ನೇಹಿಯಾದ ಇಂಡಸ್ಟಿçಗಳನ್ನು ಪ್ರಾರಂಬಿಸಿದರೆ ಜಿಲ್ಲೆಯಲ್ಲಿ ಉದ್ಯಮ ಸೃಷ್ಟಿಯಾಗುವ ಜೊತೆಗೆ ಜಿಲ್ಲೆಯು ಅಭಿವೃದ್ಧಿಯನ್ನು ಸಹ ಕಾಣಬಹುದು ಎಂದು ಅನಂಮೂರ್ತಿ ಹೆಗಡೆ ಅವರು ಇದೇ ವೇಳೆ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶಿವಾನಂದ ಹೆಗಡೆ ಕಡತೋಕಾ, ಕರ್ನಾಟಕ ರಕ್ಷಣಾ ವೇದಿಕೆ ಜನ ಧ್ವನಿ ಜಿಲ್ಲಾ ಅಧ್ಯಕ್ಷರಾದ ಉಮೇಶ್ ಹರಿಕಾಂತ, ಸಾಮಾಜಿಕ ಹೋರಾಟಗಾರರಾದ ಮಂಜುನಾಥ್ ಗುನಗ, ಅನಂತ ಮೂರ್ತಿ ಹೆಗಡೆ ಚಾರಿಟೇಬಲ್‌ನ ಟ್ರಸ್ಟಿಗಳಾದ ಸಂತೋಷ ನಾಯಕ ಹಾಜರಿದ್ದರು.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ