ನೂತನ ಕಟ್ಟಡದಲ್ಲಿ ವಿನಾಯಕ ರೆಕ್ಸಿನ್ ಹೌಸ್ ಅಧಿಕೃವಾಗಿ ಶುಭಾರಂಭ: ರಾಘವೇಶ್ವರ ಶ್ರೀಗಳ ಅಮೃತ ಹಸ್ತದಿಂದ ಅನಾವರಣ
ಕುಮಟಾ: ಅನೇಕ ವರ್ಷಗಳಿಂದ ಗೃಹಬಳಿಕೆ ಸಾಮಗ್ರಿ ಸೇರಿದಂತೆ ಫರ್ನಿಚರ್ ವಸ್ತುಗಳ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆಸಲ್ಲಿಸುತ್ತಾ ಬಂದಿರುವ ವಿನಾಯಕ ರೆಕ್ಸಿನ್ ಹೌಸ್ ಇದೀಗ ಕುಮಟಾ ಪಟ್ಟಣದ ವರದಾ ಇಂಟರ್ ನ್ಯಾಷನಲ್ ಸಮೀಪವೇ ನೂತನ ಕಟ್ಟಡವನ್ನು ನಿರ್ಮಿಸಿದ್ದು, ಈ ಒಂದು ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಇಂದು ಹಮ್ಮಿಕೊಳ್ಳಲಾಗಿತ್ತು. ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅಮೃತ ಹಸ್ತದಿಂದ ನೂತನ ಮಳಿಗೆ ಶುಭರಂಭಗೊoಡಿತು. ಈ ವೇಳೆ ಆಗಮಿಸಿದ ಗಣ್ಯರು, ವಿನಾಯಕ ರೆಕ್ಸಿನ್ ಹೌಸ್ ಇದರ ಮಾಲೀಕರಾದ ವಿನಾಯಕ ಹೆಗಡೆ ಕಟ್ಟೆ ಅವರ ಕುಟುಂಬಸ್ಥರು ಎಲ್ಲರೂ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಆಶಿರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ವಿನಾಯಕ ಹೆಗಡೆ ಕಟ್ಟೆ ಅವರು, ಕಳೆದ ಸುಮಾರು 27 ವರ್ಷಗಳಿಂದ ವಿನಾಯಕ ರೆಕ್ಸಿನ್ ಹೌಸ್ ಕುಮಟಾದಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ. ಇದೀಗ ಕುಮಟಾದ ರೈಲ್ವೆ ನಿಲ್ಧಾಣದ ಸಮೀಪ ವರದಾ ಇಂಟರ್‌ನ್ಯಾಷಲ್ ಪಟ್ಟಕದಲ್ಲಿ ನಮ್ಮದೇ ಸ್ವಂತ ಕಟ್ಟಡವನ್ನು ನಿರ್ಮಿಸಲಾಗಿದ್ದು, ಇದರ ಉದ್ಘಾಟನೆಯನ್ನು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನೆರವೇರಿಸಿದ್ದಾರೆ. ಈ ಹಿಂದಿನoತೆ ಗ್ರಾಹಕರಿಗೆ ಸೇವೆ ಸಲ್ಲಿಸಲು ನಾವು ಸದಾ ಸಿದ್ದರಿದ್ದೆವೆ ಎನ್ನುತ್ತಾ ಎಲ್ಲರ ಸಹಕಾರ ಕೋರಿದರು. ಈ ಸಂದರ್ಭದಲ್ಲಿ ವಿನಾಯಕ ಹೆಗಡೆ ಕಟ್ಟೆ ಅವರ ಕುಟುಂಬಸ್ಥರು, ಹಿತೈಷಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಅತಿಥಿಗಳು ಹಾಕರಿದ್ದರು, ನೂತನ ಮಳಿಗೆಗೆ ಶುಭ ಹಾರೈಸಿದರು.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ