ಭಟ್ಕಳ: ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಗಿನಗುoಡಿಯಲ್ಲಿ ವೀರಸಾವರ್ಕರ್ ನಾಮಫಲಕ ತೆರವುಗೊಳಿಸಲು ನಿರ್ದೇಶನ ನೀಡಿದವರು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದರೇ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ ಆರೋಪಿಸಿದರು.ಅವರು ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಉತ್ತರಕನ್ನಡ ಜಿಲ್ಲೆಯಲ್ಲಿ ಭಟ್ಕಳವು ಹಿಂದು ಜಾಗೃತಿಯ ಬಹುಮುಖ್ಯ ಪ್ರದೇಶವಾಗಿದೆ. ಇಲ್ಲಿಯ ತೆಂಗಿನಗುoಡಿಯ ಭಗವಾಧ್ವಜ ತೆರವಿನಲ್ಲಿ ಕಾಂಗ್ರೆಸ್‌ನ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ನೇರ ಹಸ್ತಕ್ಷೇಪ ಇದೆ . ಈ ಸಮಾಜ ಒಂದು ದಿನ ಮೈಕೊಡವಿ ಎದ್ದು ನಿಲ್ಲುತ್ತದೆ. ಆದರೆ ಇದು ಗೊತ್ತಿದ್ದು ಹಿಂದುಗಳ ಮಾನಸಿಕತೆಯನ್ನು ಛಿದ್ರಮಾಡಬೇಕು ಮತ್ತು ದುರ್ಬಲವನ್ನಾಗಿ ಮಾಡಲು ಈ ರೀತಿ ಸಂಚು ಮಾಡುತ್ತಿದೆ. ಇದರಲ್ಲಿ ನೇರವಾಗಿ ಕಾಂಗ್ರೆಸ್ ಸರ್ಕಾರದ ಕೈವಾಡವಿದೆ ಹಾಗೂ ಇಲ್ಲಿನ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ನಿರ್ದೇಶನ ಇದೆ ಎಂದರು.
ತೆoಗಿನಗುoಡಿ ವೀರ ಸಾವರ್ಕರ ಕಟ್ಟೆಯನ್ನು ಇನ್ನೊಮ್ಮೆ ತೆರವು ಮಾಡಲು ಬಿಡುವುದಿಲ್ಲ. ಒಂದೊಮ್ಮೆ ಮತ್ತೇ ಮುಟ್ಟುವ ದುಸ್ಸಹಸಕ್ಕೆ ಕೈ ಹಾಕಿದರೆ ಜಿಲ್ಲೆಯ ಎಲ್ಲಾ ತಾಲೂಕಿನ ಸರ್ಕಲ್ ಗಳಲ್ಲಿ ಸಾವರ್ಕರ್ ಕಟ್ಟೆಯನ್ನು ಕಟ್ಟುತ್ತೇವೆ. ನಿಮಗೆ ಭಟ್ಕಳದಲ್ಲಿ ಒಂದು ಸಾವರ್ಕರ್ ಕಟ್ಟೆ ಇರಬೇಕೋ ಅಥವಾ ಜಿಲ್ಲೆಯಾದ್ಯಂತ ನೂರಾರು ಸಾವರ್ಕರ್ ಕಟ್ಟೆ ನಿರ್ಮಾಣವಾಗ ಬೇಕೋ ಎಂದು ಪ್ರಶ್ನಿಸಿದರು.
ಆಡಳಿತ ವೈಫಲ್ಯದಿಂದ ಇಡೀ ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಬಿಜೆಪಿ ಸರ್ಕಾರ ದೇಶಭಕ್ತಿ ಮೂಡಿಸುವ ನಿಟ್ಟಿನಲ್ಲಿ ಅಳವಡಿಸಿದ್ದ ಪಠ್ಯವನ್ನು ಕಾಂಗ್ರೆಸ್ ಸರ್ಕಾರ ತೆಗೆದುಹಾಕಿದೆ. ಒಂದು ಸಮುದಾಯದ ತುಷ್ಟೀಕರಣ ನಿಟ್ಟಿನಲ್ಲಿ ಸಮಾಜದಲ್ಲಿ ದ್ವೇಷ ಬಿತ್ತುವ ಕೆಲಸವಾಗುತ್ತಿದೆ ಎಂದು ಕೋಣೆಮನೆ ಕಿಡಿಕಾರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ ‘ ನಾವು ಅನೇಕ ತಿಂಗಳಿoದ ನೋಡುತ್ತಾ ಬಂದಿದ್ದೇವೆ . ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಹಿಂದುಗಳ ಮೇಲೆ ಹಾಗೂ ಹಿಂದು ಕಾರ್ಯಕರ್ತರ ಮೇಲೆ ಅನಾವಶ್ಯಕ ಕೇಸುಗಳನ್ನು ಹಾಕಲಾಗುತ್ತಿದೆ. ಮತ್ತು ಹಿಂದೂ ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆ ತರುವಂತ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು. ಪಾಗುತ್ತದೆ ಎಂದು ಹೇಳುವುದು ಎಲ್ಲ ತಪ್ಪುಗಳನ್ನು ಬಿಜೆಪಿ ಪಕ್ಷದ ಮೇಲೆ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಹಾಕುವುದು ಮತ್ತು ಹೇಳಿಕೆ ಕೊಡುವುದನ್ನು ನಾವು ಕಂಡಿದ್ದೇವೆ.
ಸುದ್ದಿಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ, ಭಾಸ್ಕರ ದೈಮನೆ, ಮೋಹನ ನಾಯ್ಕ, ಮಾಜಿ ಶಾಸಕ ಸುನೀಲ್ ನಾಯ್ಕ, ಬಿಜೆಪಿ ಮುಖಂಡ ಗೋವಿಂದ ನಾಯ್ಕ, ರವಿ ನಾಯ್ಕ, ಸುರೇಶ ನಾಯ್ಕ, ಶ್ರೀಕಾಂತ ನಾಯ್ಕ ಮುಂತಾದವರು ಇದ್ದರು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ