Join Our

WhatsApp Group
Important
Trending

ಬಸ್ಸಿನಿಂದ ಕಾಡಿನಲ್ಲಿ ಯುವತಿಯನ್ನು ಇಳಿಸಿ ಹೋದರೇ ನಿರ್ವಾಹಕ? ದಾಖಲಾಯ್ತು ದೂರು-ಪ್ರತಿದೂರು

ಹೊನ್ನಾವರ: ಬಸ್ ನಿಲ್ಲಿಸುವಂತೆ ನಿರ್ವಾಹಕ ಹಾಗೂ ಯುವತಿ ನಡುವೆ ಉಂಟಾದವಾದ ಪ್ರತಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ಹಾಗೂ ಪ್ರತಿದೂರು ದಾಖಲಾದ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ಹಿರೆಕೆರೂರು ಡಿಪೋ ಸೇರಿದ ಹಿರೆಕೆರೂರು- ಭಟ್ಕಳ ಸಾರಿಗೆ ಸಂಸ್ಥೆಯ ಬಸನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊರ್ವರು ಸಿದ್ದಾಪುರದಿಂದ ಪುತ್ತೂರಿಗೆ ಪ್ರಯಾಣಿಸಲು ಹೊನ್ನಾವರಕ್ಕೆ ಟಿಕೇಟ್ ಪಡೆದಿದ್ದಳು. ಮಾವಿನಗುಂಡಿ ಸಮೀಪ ಬಸ್ ಆಗಮಿಸುವಾಗ ಬಸನಲ್ಲಿ ಸೀಟ್ ಇರದ ಕಾರಣ ಹಿಂಬದಿ ಬರುತ್ತಿದ್ದ ಧರ್ಮಸ್ಥಳ ಬಸ್ ಗಮನಿಸಿ ನಿರ್ವಾಕರ ಬಳಿ ನಾನು ಬಸ್ ನಿಂದ ಇಳಿಯುತ್ತೇನೆ ಎಂದು ಹೇಳಿದ್ದಾಳೆ.

ಇಲ್ಲಿದೆ ಉದ್ಯೋಗಾವಕಾಶ: ಇದನ್ನೂ ಓದಿ: RPF Recruitment 2024: 4208 ಹುದ್ದೆಗಳಿಗೆ ನೇಮಕಾತಿ: SSLC ಆದವರು Apply ಮಾಡಿ

ಈ ವೇಳೆ ನಿರ್ವಾಹಕ ಹೊನ್ನಾವರ ಟಿಕೇಟ್ ಪಡೆದಿದ್ದೀರಿ ಇಲ್ಲಿ ಇಳಿಯಲು ಸಾಧ್ಯವಿಲ್ಲ ಎಂದು ಹೇಳಿ ಟಿಕೇಟ್ ಹಾಗೂ ಆಧಾರ ಕಾರ್ಡ್ ಪಡೆದಿದ್ದಾರೆ. ಈ ವೇಳೆ ನನಗೆ ನಿಂದಿಸಿದ್ದಾರೆ. ಮುಂದಿನ ನಿರ್ಜನ ಪ್ರದೇಶದ ನೆಟವರ್ಕ್ ಇಲ್ಲದ ಸ್ಥಳದಲ್ಲಿ ಇಳಿಸಿ ಹೋಗಿದ್ದಾರೆ ಎಂದು ಯುವತಿ ದೂರು ದಾಖಲಿಸಿದ್ದಾಳೆ. ಈ ಕುರಿತು ನಿರ್ವಾಹಕ ಪ್ರತಿದೂರು ನೀಡಿದ್ದು, ಯುವತಿ ಬಸ್ ಇಳಿಯುತ್ತೇನೆ ಎಂದು ಹೇಳಿದಾಗ ಶಕ್ತಿ ಯೋಜನೆ ನಿಯಮ ಹೇಳಿದರೂ ಕೇಳದೆ ಮುಂದಿನ ನಿಲುಗಡೆಯಲ್ಲಿ ಇಳಿದಿದ್ದಾರೆ. ನಂತರ ಯುವತಿ ತಂದೆಯೊoದಿಗೆ ಕಾರಿನಲ್ಲಿ ಆಗಮಿಸಿ ಬಸ್ ಅಡ್ಡಗಟ್ಟಿ ನಿಂದಿಸಿ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಎರಡು ಪ್ರಕರಣ ದಾಖಲಿಸಿಕೊಂಡ ಹೊನ್ನಾವರ ಪೊಲಿಸರು ತನಿಖೆ ಮುಂದುವರೆಸಿದ್ದಾರೆ.

ಈ ಕುರಿತು ಕರವೇ ಹೊನ್ನಾವರ ತಾಲೂಕ ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿ ಮಾವಿನಗುಂಡಿ ಕಾಡಿನಲ್ಲಿ ಯುವತಿಯನ್ನು ಇಳಿಸಿರುವುದು ಅಮಾನವೀಯ ಘಟನೆಯಾಗಿದೆ. ಸರ್ಕಾರದ ಶಕ್ತಿಯೋಜನೆಯಿಂದ ಮಹಿಳೆಯರು ತೊಂದರೆ ಅನುಭವಿಸುದು ಖಂಡನೀಯವಾದದು ಎಂದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button