ಆಸ್ಪತ್ರೆಗೆ ದಾಖಲಾಗಿ ಅರ್ಧಗಂಟೆಯಲ್ಲೇ ಸಾವು
ತಾಲೂಕಿನಲ್ಲಿ ಇಂದು ಏಳು ಪಾಸಿಟಿವ್
ಹೊನ್ನಾವರ: ಹೊನ್ನಾವರ ತಾಲೂಕಿನಲ್ಲಿ ಇಂದು ಒಟ್ಟು ಏಳು ಕರೊನಾ ಕೇಸ್ ದೃಢಪಟ್ಟಿದೆ. ಪಟ್ಟಣ ವ್ಯಾಪ್ತಿಯಲ್ಲಿ 3, ಮುಗ್ವಾದಲ್ಲಿ 3, ಚಿತ್ತಾರ 1 ಪ್ರಕರಣ ದಾಖಲಾಗಿದೆ. ಹೊನ್ನಾವರ ಪಟ್ಟಣದ ತುಳಸಿ ನಗರದ 28 ವರ್ಷದ ಯುವತಿ, ಪಟ್ಟಣದ 27 ವರ್ಷದ ಯುವಕ, ಚಿತ್ತಾರದ 65 ವರ್ಷದ ಪುರುಷ., ಮುಗ್ವಾದ ಒಂದೆ ಮನೆಯ ಮೂವರಲ್ಲಿ ಕರೊನಾ ದೃಢಪಟ್ಟಿದೆ. 59 ಪುರುಷ, ಅವರ ಮಗಳು ಹಾಗು 29 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಆಸ್ಪತ್ರೆಗೆ ದಾಖಲಾಗಿ ಅರ್ಧಗಂಟೆಯಲ್ಲೇ ಸಾವು:
ಹೊನ್ನಾವರದಲ್ಲಿ ಕರೊನಾದಿಂದ ಮತ್ತೊಂದು ಸಾವಾಗಿದೆ. ಪಟ್ಟಣದ ಬಂದರ್ ರಸ್ತೆಯ ಅಸುರಖಾನ ಗಲ್ಲಿಯ ನಿವಾಸಿ 72 ವರ್ಷದ ಪುರುಷ ಉಸಿರಾಟದ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ನಿನ್ನೆ ತಾಲೂಕಾ ಆಸ್ಪತ್ರೆಗೆ ದಾಖಲಾಗಿದ್ದು, ಅರ್ಧ ಗಂಟೆಯಲ್ಲಿ ಸಾವನ್ನಪಿರುವ ಮಾಹಿತಿ ಲಭ್ಯವಾಗಿದೆ.
ಇಂದು ಏಳು ಪ್ರಕರಣ ದೃಢಪಟ್ಟ ಬೆನ್ನಲ್ಲೆ ತಾಲೂಕಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ 386ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಿಂದ ಇಂದು ತಾಲೂಕಾ ಆಸ್ಪತ್ರೆಯಿಂದ ಓರ್ವ ಡಿಸ್ಚಾರ್ಜ್ ಆಗಿದ್ದಾರೆ. 27 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 93 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ
ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 7848833568