Focus News
Trending

ಹೊನ್ನಾವರದಲ್ಲಿ ಬೃಹತ್ ಹೊಟೆಲ್ & 12 ಅಂಗಡಿ ಸೀಜ್

ಹೊನ್ನಾವರ: ಪಟ್ಟಣದ ಬಸ್ ನಿಲ್ದಾಣದ ಬಳಿಯಲ್ಲಿ ಶನೈಶ್ವರ ದೇವಸ್ಥಾನದ ಎದುರುಗಡೆ ಇರುವ ಗುಡಲಕ್ ಹೊಟೇಲ್, ಲಾಡ್ಜ್ ಮತ್ತು ಅದಕ್ಕೆ ಸೇರಿದಂತೆ 12 ಅಂಗಡಿಗಳನ್ನು ಅನಧಿಕೃತವಾಗಿ ನಡೆಸುತ್ತಿರುವ ಹಿನ್ನಲೆಯಲ್ಲಿ ಮಂಗಳವಾರ ಬೆಳಿಗ್ಗೆ ಪೋಲಿಸ್ ಭದ್ರತೆಯಲ್ಲಿ ತಾಲೂಕಾಡಳಿತ ಸೀಜ್ ಮಾಡಿದೆ.


ಅನಧಿಕೃತವಾಗಿ ಅಂಗಡಿಗಳನ್ನು ನಡೆಸುತ್ತಿರುವ ಬಗ್ಗೆ ಗುಡಲಕ್ ಹೊಟೇಲ್ ಕುಟುಂಬದ ಕೆಲವರು ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದರು. ಈ ಬಗ್ಗೆ ಪ.ಪಂ. ಪರಿಶೀಲನೆ ನಡೆಸಿ ಕಾಗದ ಪತ್ರಗಳನ್ನು ಹಾಜರು ಪಡಿಸಲು ನೋಟಿಸ್ ನೀಡಿತ್ತು.


ಖಾತಾ ಬದಲಾವಣೆ, ಅರ್.ಟಿ.ಸಿ., ಟ್ರೇಡ್ ಲೈಸನ್ಸ್ ಅನ್ನು ಅಂಗಡಿ ನಡೆಸುತ್ತಿರುವವರು ಹಾಜರು ಪಡಿಸದ ಹಿನ್ನೆಲೆಯಲ್ಲಿ ಪ,ಪಂ. ವರದಿಯನ್ನಾಧರಿಸಿ ತಹಸೀಲ್ದಾರರು ಅಧಿಕಾರದ ಅನ್ವಯ ಸೀಜ್ ಮಾಡಲು ಆದೇಶ ನೀಡಿದ್ದರು.

ವಿಸ್ಮಯ ನ್ಯೂಸ್, ಹೊನ್ನಾವರ

Related Articles

Back to top button