Info
Trending

ಅಂಕೋಲಾದಲ್ಲಿಂದು 2 ಕೊವಿಡ್ ಕೇಸ್ : ಗುಣಮುಖ 1 : ಸಕ್ರಿಯ 12

ದಿನವೊಂದರಲ್ಲಿಯೇ 500ಕ್ಕೂ ಹೆಚ್ಚು ಗಂಟಲು ದ್ರವ ಪರೀಕ್ಷೆ
ಈವರೆಗಿನ ಗರಿಷ್ಠ ದಾಖಲೆ

ಅಂಕೋಲಾ : ತಾಲೂಕಿನಲ್ಲಿ ಮಂಗಳವಾರ 2 ಹೊಸ ಕೊವಿಡ್ ಕೇಸ್‍ಗಳು ಪತ್ತೆಯಾಗಿದೆ. ಕೋಟೆವಾಡದ 45ರ ಮಹಿಳೆ ಮತ್ತು 20ರ ಯುವಕನಲ್ಲಿ ಸೋಂಕು ಲಕ್ಷಣಗಳು ದೃಢಪಟ್ಟಿವೆ. ಗುಣಮುಖರಾದ ಓರ್ವರನ್ನು ಬಿಡುಗಡೆಗೊಳಿಸಿಲಾಗಿದ್ದು, ಹೋಂ ಐಸೋಲೇಶನ್‍ನಲ್ಲಿರುವ 9 ಮಂದಿ ಸಹಿತ ಒಟ್ಟೂ 12 ಪ್ರಕರಣಗಳು ಸಕ್ರಿಯವಾಗಿದೆ.

52 ರ್ಯಾಟ್ ಮತ್ತು 454 ಆರ್‍ಟಿಪಿಸಿಆರ್ ಸೇರಿದಂತೆ ಒಟ್ಟೂ 506 ಸ್ಬ್ಯಾಬ್ ಟೆಸ್ಟ್ ನಡೆಸಲಾಗಿದ್ದು ಈ ಮೂಲಕ ದಿನವೊಂದರಲ್ಲಿಯೇ 500ಕ್ಕೂ ಹೆಚ್ಚು ಗಂಟಲುದ್ರವ ಮಾದರಿ ಸಂಗ್ರಹಿಸಲಾಗಿದೆ.

ಈ ಹಿಂದೆ ದಿನವೊಂದರಲ್ಲೇ 398 ಗಂಟಲುದ್ರವ ಮಾದರಿ ಪರೀಕ್ಷೆ ನಡೆಸಿರುವುದು ಗರಿಷ್ಠ ದಾಖಲೆಯಾಗಿತ್ತು. ಪದವಿ ತರಗತಿಗಳು ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಕೊವಿಡ್ ಟೆಸ್ಟ ನಡೆಸುತ್ತಿರುವುದು, ಸಂಖ್ಯಾ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Related Articles

Back to top button