Focus News
Trending

ಬಿಜಿಎಸ್ ಸೆಂಟ್ರಲ್ ಸ್ಕೂಲಿನಲ್ಲಿ 10ನೇ ಯೋಗ ದಿನಾಚರಣೆ

ಕುಮಟಾ ತಾಲೂಕಿನ ಮಿರ್ಜಾನಿನ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಸೆಂಟ್ರಲ್ ಸ್ಕೂಲ್ ಮತ್ತು ಆದಿಚುಂಚನಗಿರಿ ಇಂಡಿಪೆoಡೆoಟ್ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ 10ನೇ ಅಂತರರಾಷ್ಷ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

10ನೇ ಅಂತರರಾಷ್ಷ್ರೀಯ ಯೋಗ ದಿನಾಚರಣೆಯನ್ನು ಜ್ಯೋತಿ ಬೆಳಗಿಸಿ, ಉದ್ಗಾಟಿಸಿದ ಬಿಜಿಎಸ್ ಸಂಸ್ಥೆಯ ಆಡಳಿತ ಅಧಿಕಾರಿ ಜಿ. ಮಂಜುನಾಥರವರು ಓಂಕಾರದ ಮಹತ್ವ, ಧ್ಯಾನ, ಯೋಗಾಸನ ಮತ್ತು ಪ್ರಾಣಾಯಾಮ ಇಂದು ಜಗತ್ತಿನಲ್ಲಿ ಎಷ್ಟು ಪ್ರಾಮುಖ್ಯತೆ ಪಡೆದಿದೆ, ಪ್ರಪಂಚದ ಬಹಳಷ್ಟು ದೇಶಗಳು ಇಂದು ತಮ್ಮ ದೈನಂದಿನ ಜೀವನದಲ್ಲಿ ಯೋಗಾಸನವನ್ನು ಹೇಗೆ ಅಳವಡಿಸಿಕೊಂಡಿದೆ, ದಿನನಿತ್ಯ ಯೋಗಾಸಾನ ಮಾಡುವುದರ ಮೂಲಕ ನಮ್ಮ ದೇಹ ಮತ್ತು ಮನಸ್ಸು ಪ್ರಫುಲ್ಲವಾಗಿರುವುದಲ್ಲದೆ ನಮ್ಮ ಸದಾ ಆರೋಗ್ಯವಾಗಿರಬಹುದು, ಪತಂಜಲಿಯ ಅಷ್ಟಾಂಗ ಯೋಗ ಮಾರ್ಗದ ಬಗ್ಗೆ ವಿವರವಾಗಿ ತಿಳಿಸಿದರು ದಿನನಿತ್ಯ ಯೋಗಾಭ್ಯಾಸದಿಂದ ಮನಸ್ಸು ಅರಳಿ ಆತ್ಮಶಕ್ತಿಯ ಜಾಗೃತಿ ಆಗುವುದು ಹಾಗೂ ದೈಹಿಕವಾಗಿ ಸಮರ್ಥರಾಗಿ ಜೀವನ ನಡೆಸಲು ಅನುಕೂಲಕರವಾಗುವುದೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಯೋಗಪಟು ಮಹೇಂದ್ರ ಗಣಪತಿ ಗೌಡರವರು ಮಾತನಾಡಿ, ಬಾಲ್ಯದಲ್ಲಿ ನನಗಿರುವ ಯೋಗದ ಬಗ್ಗೆ ಇರುವ ಆಸಕ್ತಿಯನ್ನು ಗುರುತಿಸಿದ ಗುರುಗಳು ನನಗೆ ಯೋಗ ತರಬೇತಿಯನ್ನು ನೀಡಿ ಈಗ ನಾನು ರಾಷ್ಟ ಮಟ್ಟದಲ್ಲಿ ವಿಜೇತನಾಗಿ, ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದೇನೆ, ನೀವು ಯೋಗ ಅಭ್ಯಾಸ ಮಾಡಿ, ಅಲ್ಲದೆ ನಿಮಗೆ ಕಲಿಸಿದ ಗುರುಗಳನ್ನು ಯಾವತ್ತೂ ಮರೆಯಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಪ್ರಾಂಶುಪಾಲೆ ಅರ್ಚನಾ ಭಟ್ ಪ್ರಸ್ತುತ ದಿನಗಳಲ್ಲಿ ಯೋಗದ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವರನ್ನೂ ಸ್ವಾಗತಿಸಿದರು. ಕನ್ನಡ ಉಪನ್ಯಾಸಕರಾದ ಶ್ರೀಧರ ಹೆಚ್. ಆರ್. ಮಾತನಾಡಿ ದಿನನಿತ್ಯ ಯೋಗಾಸನ ಮಾಡುವುದರಿಂದ ನಮ್ಮ ದೈಹಿಕ ಮತ್ತು ಬೌದ್ಧಿಕ ಸಾಮರ್ಥ ಹೆಚ್ಚುವುದಲ್ಲದೆ ಸದಾ ಆರೋಗ್ಯದಿಂದ ಲವಲವಿಕೆಯಿಂದ ಇರಲು ಸಾಧ್ಯ ಎಂದರು. ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ನಾಯಕ ಮತ್ತು ನಾಗರತ್ನ ನಾಯ್ಕ ಸೂರ್ಯ ನಮಸ್ಕಾರ, ಪ್ರಾಣಾಯಾಮ ಅಲ್ಲದೇ ಕುಳಿತು, ನಿಂತು ಮತ್ತು ಮಲಗಿ ಮಾಡಬಹುದಾದ ಯೋಗಾಸನದ ವಿವಿಧ ಆಸನಗಳನ್ನು ಪ್ರಾತ್ಯಕ್ಷಿಕೆ ಮೂಲಕ ಮಾಡಿ ತೋರಿಸಿದರು.

ಹಿರಿಯ ಶಿಕ್ಷಕರಾದ ಎಂ. ಜಿ. ಹಿರೇಕುಡಿ, ಲೀನಾ ಎಂ. ಗೊನೇಹಳ್ಳಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಯೋಗಾಸನ ಮಾಡಿ 10ನೇ ಅಂತರರಾಷ್ಷ್ರೀಯ ಯೋಗ ದಿನಾಚರಣೆಗೆ ಹೆಚ್ಚಿನ ಮೆರುಗು ನೀಡಿದರು.

ವಿಸ್ಮಯ ನ್ಯೂಸ್, ಕುಮಟಾ

Back to top button