ಹೊನ್ನಾವರ; ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಬಗ್ಗೆ ಟೀಕಿಸುವ ಬಿಜೆಪಿಗರೆ ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯು ಬಿಟ್ಟಿ ಯೋಜನೆಯಾ? ಎಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಪುಷ್ಪಾ ನಾಯ್ಕ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೇಸ್ ಸರ್ಕಾರ ನುಡಿದಂತೆ ನಡೆದಿದ್ದು, ಚುನಾವಣೆ ಪೂರ್ವ ಐದು ಗ್ಯಾರಂಟಿ ಯೊಜನೆ ಘೋಷಣೆ ಮಾಡಿತ್ತು. ಅದನ್ನು ಅನುಷ್ಠಾನ ಮಾಡಿದೆ. ರಾಜ್ಯದಲ್ಲಿ ಸಾರಿಗೆ ಬಸ್ ಮೂಲಕ ಸಂಚರಿಸುವ ಮಹಿಳೆಯರಿಗೆ ಉಚಿತ ಪ್ರಯಾಣದ ಬಗ್ಗೆ ಬಿಜೆಪಿ ಪಕ್ಷದವರು ಈ ಹಿಂದಿನಿಂದಲೂ ಟೀಕೆ ಮಾಡುತ್ತಾ ಬಂದಿದ್ದಾರೆ.
ಬಿಜೆಪಿ ಪಕ್ಷ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ಮಾಜಿ ಜಿ.ಪಂ. ಸದಸ್ಯೆ ಶ್ರೀಕಲಾ ಶಾಸ್ತ್ರಿಯವರು ಒರ್ವ ಮಹಿಳೆಯಾಗಿಯು ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆ ಬಗ್ಗೆ ಟೀಕೆ ಮಾಡಿದ್ದಾರೆ. ಅವರು ಇತ್ತೀಚಿನ ವರ್ಷದಲ್ಲಿ ಸಾರಿಗೆ ಬಸ್ ಪ್ರಯಾಣ ಮಾಡಿದಂತೆ ಇಲ್ಲ. ಈ ಬಗ್ಗೆ ಸ್ಥಳಿಯರನ್ನು ವಿಚಾರಿಸಿದಾಗ ಅವರು ಕಾರು ಮೂಲಕ ಪ್ರಯಾಣದ ಬಗ್ಗೆ ಮಾಹಿತಿ ನೀಡಿದರು. ಅದಕ್ಕಾಗಿಯೇ ಅದರಿಗೆ ಇದರಿಂದ ಆಗುವ ಉಪಯೋಗ ಅರಿವಾಗಿಲ್ಲ. ಪ್ರತಿನಿತ್ಯ ಗ್ರಾಮೀಣ ಭಾಗದಿಂದ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಕೆಲಸಕ್ಕೆ ಎಂದು ಪಟ್ಟಣಕ್ಕೆ ಆಗಮಿಸುತ್ತಾರೆ. ಇವರೆಲ್ಲ ಕನಿಷ್ಠ ವೇತನಕ್ಕೆ ದುಡಿಯುವರೆ ಆಗಿದ್ದು, ಅವರು ಪ್ರತಿದಿನ ಮೂವತ್ತರಿಂದ ನೂರು ರೂಪಾಯಿವರೆಗೂ ಬಸ್ ಚಾರ್ಜ್ ಖರ್ಚು ಮಾಡುತ್ತಿದ್ದರು. ಈ ಹಣ ತಿಂಗಳಿಗೆ ಲೆಕ್ಕ ಹಾಕಿದರೆ ಅವರಿಗೆ ದೊಡ್ಡ ಪ್ರಮಾಣದ ಉಳಿತಾಯವಾಗುತ್ತದೆ. ಸಾವಿರಾರು ಸಂಖ್ಯೆಯ ವಿದ್ಯಾರ್ಥಿನಿಯರು ಬಸ್ ಪಾಸ ಹಣ ಉಳಿತಾಯವಾಗಲಿದೆ.
ಇನ್ನು ಶಕ್ತಿ ಯೋಜನೆಯು ಬಡ ಮಧ್ಯಮ ವರ್ಗಕ್ಕೆ ಅನೂಕೂಲವಾಗಲು ತಂದಿದ್ದು, ಎಲ್ಲರಿಗೂ ಬ್ಯಾಂಕಗೆ ಹಣ ವರ್ಗಾವಣೆಯಾಗುತ್ತಿದೆ. ಯಾವ ಮಹಿಳೆಯರಿಗೆ ಹಣ ಜಮಾ ಆಗುವುದಿಲ್ಲವೋ, ಈ ಬಗ್ಗೆ ಹಿಂದೆಯೇ ಆಶಾ ಕಾರ್ಯಕರ್ತೆಯರು ಮಾಹಿತಿ ನೀಡುವ ಮೂಲಕ ಸಮಸ್ಯೆ ಬಗೆಹರಿಸಿದ್ದಾರೆ. ಆರಂಭದ ಕೆಲ ತಿಂಗಳಿನಲ್ಲಿ ಗೊಂದಲ ಇತ್ತಾದರೂ ಈಗ ಸಮಸ್ಯೆ ಬಗೆಹರಿದಿದೆ. ಆದ್ಯಾಗೂ ನೈಜ ಫಲಾನುಭವಿ ಈ ಯೋಜನೆಯಿಂದ ಇದುವರೆಗೂ ವಂಚಿತರಾದರೆ ಆಶಾ, ಅಂಗನವಾಡಿ, ಕಾರ್ಯಕರ್ತರು ಅಥವಾ ಕಾಂಗ್ರೇಸ್ ಕಾರ್ಯಕರ್ತರ ಗಮನಕ್ಕೆ ತನ್ನಿ ಸಮಸ್ಯೆ ಬಗೆಹರಿಸುತ್ತೇವೆ. ಅರ್ಜಿ ಹಾಕಿಯೂ ಹಣ ಜಮಾ ಆಗದೆ ಇದ್ದರೆ ಅವರ ಯಾವ ಖಾತೆಗೆ ಹಣ ಜಮಾ ಆಗುತ್ತಿದೆ ಎನ್ನುವ ಮಾಹಿತಿಯನ್ನು ನೀಡಲು ಸಿದ್ದರಿದ್ದೇವೆ.
ಇನ್ನು ವಿದ್ಯುತ್ ಬಿಲ್ ಹೆಚ್ಚಳದ ಕುರಿತು ನೀವು ಈಗ ಎಚ್ಚರವಾಗಿದ್ದೀರಿ ನಿಮ್ಮ ಪಕ್ಷ ಅಧಿಕಾರದ ಕೊನೆಯ ಹಂತದಲ್ಲಿ ಏರಿಸಿ ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದರೆ ಯಾರು ನಂಬುದಿಲ್ಲ. ಅದು ಅಲ್ಲದೇ ಕಚ್ಚಾತೈಲ ಬೆಲೆ ಕಡಿಮೆ ಇದ್ದಾಗಲೂ ಕೇಂದ್ರ ಸರ್ಕಾರ ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆ ಮಾಡಿರಲಿಲ್ಲ ಆಗ ಯಾಕೆ ಪ್ರಶ್ನೆ ಮಾಡಿಲ್ಲ. ಆಗ ಬಡ ಜನರ ಕಷ್ಟದ ಅರಿವು ನಿಮಗೆ ಅಗಿರಲಿಲ್ಲವಾ? ಗೃಹಜ್ಯೋತಿ ಅರ್ಜಿ ಹಾಕಿದರು ನಿಮ್ಮ ಮನೆಯ ವಿದ್ಯುತ್ ಬಿಲ್ 2000 ಹೆಚ್ಚು ಬರುತ್ತಿದೆ ಎನ್ನುತ್ತೀರಿ ಈ ಹಿಂದೆಯು ಇಷ್ಟೆ ಬರುತ್ತಿತ್ತು ಅಂದರೆ ಎರಡು ವಿದ್ಯುತ್ ಬಿಲ್ ಮಧ್ಯಮದ ಮೂಲಕ ಪ್ರದರ್ಶಿಸಿದರೆ ಉತ್ತರ ನೀಡಲು ಸಂಭದಿಸಿದ ಇಲಾಖೆ ಹಾಗೂ ಕಾಂಗ್ರೇಸ್ ಪಕ್ಷ ಸಿದ್ದವಿದೆ. ರಾಜ್ಯದ ಹೆಚ್ಚಿನ ಮನೆಯಲ್ಲಿಯೂ ಗೃಹಜ್ಯೋತಿಯ ಉಪಯೋಗ ಪಡೆಯುತ್ತಿದ್ದಾರೆ. ಆದ್ಯಾಗೂ ನೀವು ಹೇಳುವಂತೆ ಗ್ಯಾರಂಟಿ ಯೋಜನೆ ಬೇಡವಾಗಿದ್ದಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಸೌಲಭ್ಯ ಹಿಂಪಡೆಯಲು ಅವಕಾಶವಿದೆ. ಅದನ್ನು ಮಾಡಿದರೆ ಸರ್ಕಾರಕ್ಕೆ ಹೊರೆಯು ಕಡಿಮೆ ಆಗಲಿದ್ದು ಹೆಚ್ಚಿನ ಹಣ ಇತರೆ ಅಭಿವೃದ್ದಿ ಕಾರ್ಯಗಳಿಗೆ ಅನೂಕೂಲವಾಗಲಿದೆ ಎಂದು ತಿರುಗೇಟು ನೀಡಿದರು.
ಬಿಜೆಪಿ ನಾಯಕರು ಕಾಂಗ್ರೇಸ್ ಸರ್ಕಾರ ಬಿಟ್ಟಿ ಭಾಗ್ಯ ನೀಡುತ್ತಿದೆ ಎನ್ನುತ್ತಾರೆ. ಕೇಂದ್ರದ ಬಿಜೆಪಿ ಸರ್ಕಾರ ಕಿಸಾನ್ ಸಮ್ಮಾನ್ ಹಣ ಉಚಿತವಾಗಿ ರೈತ ಕುಟುಂಬಕ್ಕೆ ನೀಡುತ್ತಿಲ್ಲವೇ? ಇದು ರೈತರಿಗೆ ಸಹಾಯಧನವಾದರೆ, ಕಾಂಗ್ರೇಸ್ ಪಂಚ ಗ್ಯಾರಂಟಿಯು ಮಹಿಳೆಯರು ಹಾಗೂ ಬಡ ಮಧ್ಯಮ ವರ್ಗದವರಿಗೆ ಸಹಾಯಧನ ರೀತಿಯಾದ ಯೋಜನೆಯಾಗಿಲ್ಲವೇ ಎಂದು ಪ್ರಶ್ನಿಸಿದರು.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ