ಮದುವೆಗೆಂದು ಮನೆಯಿಂದ ಬೈಕಿನಲ್ಲಿ ಹೊರಟವ, ಸಮುದ್ರಕ್ಕಿಳಿದು ದುರ್ಮರಣ: ವಾರದ ಬಳಿಕ ಶವವಾಗಿ ಪತ್ತೆ
ಕಾರವಾರ: ಇತ್ತೀಚೆಗೆ ಕುಂದಾಪುರದಲ್ಲಿ ಸ್ನೇಹಿತನೊಂದಿಗೆ ಸಮುದ್ರ ವಿಹಾರಕ್ಕೆ ತೆರಳಿ ಅಲ್ಲಿ ಸಮುದ್ರದ ಅಲೆಗೆ ಕೊಚ್ಚಿ ಹೋದ ಯುವಕನೋರ್ವ ವಾರದ ಬಳಿಕ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಡಲ ತೀರದಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾನೆ.
ತುಮಕೂರು ಜಿಲ್ಲೆಯ ತಿಪಟೂರಿನ ನಿವಾಸಿ ಯೋಗೀಶ್ ಟಿ ಆರ್ (23) ಎಂಬಾತನೇ ಮೃತ ದುರ್ದೈವಿ ಯುವಕನಾಗಿದ್ದಾನೆ.
ಕಳೆದ ಜೂನ್ 20 ರಂದು ಕುಂದಾಪುರದ ಬಿಜಾಡಿಯಲ್ಲಿರುವ ತನ್ನ ಸ್ನೇಹಿತ ವಿನಯ್ ಎಂಬುವವರ ಸಹೋದರಿಯ ವಿವಾಹ ಕಾರ್ಯಕ್ಕೆಂದು ಇನ್ನೊಬ್ಬ ಸ್ನೇಹಿತನೊಂದಿಗೆ ಬೈಕಿನಲ್ಲಿ ,ಒಂದು ದಿನ ಮುಂಚಿತವಾಗಿಯೇ ಬಂದು ಉಳಿದಿದ್ದ ಈತ, ಜೂ. 19 ರಂದು ಹತ್ತಿರದ ಬೀಚ್ ಗೆ ಗೆಳೆಯನೊಂದಿಗೆ ಸಂಜೆ ವಿಹಾರಕ್ಕೆ ತೆರಳಿದ್ದ ಎನ್ನಲಾಗಿದೆ. ಇವರಿಬ್ಬರೂ ನೀರಿಗಿಳಿದ ವೇಳೆ, ಆಕಸ್ಮಿಕ ಭಾರೀ ಅಲೆಯ ರಭಸಕ್ಕೆ ಯೋಗೀಶ್ ಸಮುದ್ರ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ ಎನ್ನಲಾಗಿತ್ತು.
ಈ ವೇಳೆ ಜೊತೆಗಿದ್ದ ಸಂದೀಪ್ ಎಂಬಾತ ತನ್ನ ಗೆಳೆಯ ಯೋಗೀಶ್ ನನ್ನು ರಕ್ಷಿಸಲು ಪ್ರಯತ್ನಿಸಿದ್ದರೂ, ಈ ವೇಳೆ ಆತ ಸಹ ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋಗುವ ಅಪಾಯವನ್ನು ಅರಿತ ಅಲ್ಲಿದ್ದ ಸ್ಥಳೀಯರು ಸಂದೀಪ್‌ನನ್ನು ರಕ್ಷಿಸಿದ್ದರು. ಆದರೆ ಯೋಗೀಶ್ ಮಾತ್ರ ಸಮುದ್ರದ ನೀರಲ್ಲಿ ಬಹು ದೂರ ಕೊಚ್ಚಿಕೊಂಡು ಹೋಗಿ ಕಣ್ಮರೆಯಾಗಿದ್ದ. ಈ ಕುರಿತು ಕುಂದಾಪುರ ಠಾಣೆಯಲ್ಲಿ ಮೃತನ ತಂದೆ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿತ್ತು. ಅದಾಗಿ ಒಂದು ವಾರದ ಬಳಿಕ ಜೂ 25 ರಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಡಲ ತೀರದಲ್ಲಿ ಆತ ಮೃತದೇಹವಾಗಿ ಪತ್ತೆಯಾಗಿಯಾಗಿದ್ದಾನೆ ಎನ್ನಲಾಗಿದೆ,ಮನೆ ಮಗನಂತೂ ಬದುಕುಳಿದಿರುವ ಸಾಧ್ಯತೆ ಕಡಿಮೆ ಇದೆ.
ಕೊನೆ ಪಕ್ಷ ಆತನ ಮೃತದೇಹವನ್ನಾದರೂ ಹುಡುಕಿ ಕೊಡಿ ಎಂದು ಉಡುಪಿಯ ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳಲ್ಲಿ ಮೃತನ ಕುಟುಂಬಸ್ಥರು ಬೇಡಿಕೊಂಡಿದ್ದು,ಅಲ್ಲಿ ಅವರಿಗೆ ಸೂಕ್ತ ಸ್ವಂದನೆ ದೊರೆಯದೇ,ಕೊನೆಗೆ ತಾವೇ ಸ್ವಲ್ಪ ಹಣ ಖರ್ಚು ಮಾಡಿ,ಸ್ಥಳೀಯ ಮೀನುಗಾರರ ಮತ್ತಿತರರ ಸಹಕಾರ ಪಡೆದು,ಸಮುದ್ರದಲ್ಲಿ ಶೋಧಕಾರ್ಯ ನಡೆಸಿದ್ದರಾದರೂ,ಯಾವುದೇ ಪ್ರಯೋಜನವಾಗಿರಲಿಲ್ಲ.ಇದರಿಂದ ಯೋಗೇಶ್ ಕುಟುಂಬದವರು ನಿರಾಶರಾಗಿದ್ದರು ಎನ್ನಲಾಗಿದೆ. ಈಗ ದೂರದ ಕಾರವಾರ ಕಡಲು ತೀರದಲ್ಲಿ ಶವ ಒಂದು ಪತ್ತೆಯಾಗಿದ್ದು,ಆತನ ಕುಟುಂಬಸ್ಥರು ಕಾರವಾರಕ್ಕೆ ಬಂದ ನಂತರವಷ್ಟೇ, ಈ ಕುರಿತಂತೆ ಹೆಚ್ಚಿನ ಮತ್ತು ನಿಖರ ಮಾಹಿತಿ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅoಕೋಲಾ