ಭಾರೀ ಮಳೆಯಿಂದಾಗಿ ಜಲಪ್ರವಾಹ : ಲೆಕ್ಕವಿಲ್ಲದಷ್ಟು ಮನೆಗಳಿಗೆ ನುಗ್ಗಿದ ನೀರುಉಕ್ಕಿಹರಿಯುತ್ತಿರುವ ನದಿ, ಅಪಾರ ಹಾನಿ
ಕುಮಟಾ: ಕಳೆದ ಹಲವು ವರ್ಷಗಳಿಂದ ಕಾಣದ ಧಾರಾಕಾರವಾದ ಮಳೆಯನ್ನು ಈ ಬಾರಿ ಉತ್ತರ ಕನ್ನಡ ಜನತೆಯು ಕಾಣುತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕಿನಲ್ಲಿಯೂ ಮಳೆರಾಯನ ಪ್ರಭಾವ ತಟ್ಟಿದೆ. ನೀರಿನ ಭರ ಉಂಟಾದಾಗ ಯಾವಾಗ ಮಳೆ ಸುರಿಯುತ್ತದೋ ಎನ್ನುತ್ತಿದ್ದಂತಹ ಸಾರ್ವಜನಿಕರು ವರುಣನ ಆರ್ಭಟಕ್ಕೆ ಮಳೆ ನಿಂತರೆ ಸಾಕೆಂದು ದೇವರಲ್ಲಿ ಬೇಡಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ.
ಹೌದು ಈ ಭಾರಿಯ ಮಳೆಗೆ ಸಾರ್ವಜನಿಕರು ಕಂಗಾಲಾಗಿರುವುದoತು ನಿಜ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಉತ್ತರ ಕನ್ನಡ ಜಿಲ್ಲೆಯು ಸಂಪೂರ್ಣವಾಗಿ ನೀರಿನಿಂದ ತುಂಬಿಕೊoಡಿದೆ, ಕುಮಟಾ ತಾಲೂಕಿನ ದೀವಗಿ ಗ್ರಾ.ಪಂ ವ್ಯಾಪ್ತಿಯ ಕೆಳಗಿನಕೇರಿ, ತಂಡ್ರಕುಳಿ, ಜಡ್ಡಿಮೂಲೆಯಲ್ಲಿ ನೆರೆಯ ನೀರು ಮನೆಗಳಿಗೆ ನುಗ್ಗಿ ಗ್ರಾಮಸ್ಥರು ಖಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಮಂಗಳವಾರ ಮುಂಜಾನೆ 2 ಗಂಟೆಗೆ ಅಘನಾಶಿನಿ ನದಿಯ ನೀರಿನ ಮಟ್ಟ ಹೆಚ್ಚಾಗಿ ಜನವಾಸ್ತವ್ಯದ ಕಡೆ ಹರಿಯಲಾರಂಭಿಸಿದೆ. ಈ ನಡುವೆ ನಿದ್ರೆಯ ಮಂಪರಿನಲ್ಲಿದ್ದ ಜನರಿಗೆ ಏಕಾಏಕಿ ತುಂಬಿದ ನೀರು ನೆರೆಯ ಭಯವನ್ನು ಉಂಟುಮಾಡಿದೆ. ತಕ್ಷಣ ಎಚ್ಚೆತ್ತುಕೊಂಡ ಗ್ರಾಮಸ್ಥರು ಕೂಡಲೇ ತಮ್ಮ ಅಗತ್ಯ ಸಾಮಾನು ಸಾಮಗ್ರಿಗಳ ಜೊತೆಗೆ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದರು. ಅದಾಗಲೇ ನೀರು, ಸಂಪರ್ಕ ರಸ್ತೆಯ ಮೂಲಕ ಹಾದು ಹೋಗಿರುವುದರಿಂದ ರಸ್ತೆಯಲ್ಲಿ ನೀರಿನ ಸೆಳೆತ ಹೆಚ್ಚಾಗಿತ್ತು.
ಈ ವೇಳೆ ಒಂದೆಡೆಯಿoದ ಇನ್ನೊಂದೆಡೆಗೆ ಸಾಗಲು ಕಷ್ಟಸಾಧ್ಯವಾದ ಕಾರಣ ಹಗ್ಗವನ್ನು ಕಟ್ಟಿ ಆ ಮೂಲಕ ರಸ್ತೆ ದಾಟಲು ಸಹಕಾರ ಮಾಡಲಾಯಿತು. ಈ ವೇಳೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಜನರಿಗೆ ರಸ್ತೆ ದಾಟಲು ನೆರವಾದರು. ಜೊತೆಗೆ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದರು. ಈ ವೇಳೆ ಸ್ಥಳೀಯರಾದ ಗಜು ನಾಯ್ಕ ಮಾತನಾಡಿ ಬಹಳ ವರ್ಷಗಳ ಕಾಲದಿಂದಲೂ ಇಲ್ಲಿ ನೆರೆಯ ಸಮಸ್ಯೆ ಹೊಸತಲ್ಲ.
ಇತ್ತೀಚಿನ ವರ್ಷಗಳಲ್ಲಿ ಸಣ್ಣ ಸಣ್ಣ ಮಳೆಗೂ ನೆರೆಯ ಅನುಭವ ಆಗುತ್ತಿದೆ. ನೀರು ಹರಿದು ಹೋಗುವ ಜಾಗಗಳಲ್ಲಿ ಮಣ್ಣು ತುಂಬಿದ್ದರಿoದ ಸರಾಗವಾಗಿ ನೀರು ಹರಿದುಹೋಗದೆ ಅಲ್ಲಿಯೇ ತುಂಬಿ ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತದೆ. ಇದರಿಂದಾಗಿ ಜನ ಸಂಕಷ್ಟಕೀಡಾಗುತ್ತಿದ್ದಾರೆ. ಗ್ರಾ.ಪಂ ಹಾಗೂ ಸಂಭoದಿಸಿದ ಜನಪ್ರತಿನಿಧಿಗಳು,ಅಧಿಕಾರಿಗಳು ನೆರೆ ಸಂತ್ರಸ್ತರಿಗೆ ಸ್ಪಂದಿಸುವ ಕಾರ್ಯ ಮಾಡಬೇಕು ಎಂದರು.
ಇನ್ನೊರ್ವ ಸ್ಥಳೀಯರಾದ ದೇವೆಂದ್ರ ಅಂಬಿಗ ಮಾತನಾಡಿ, ಪ್ರತಿ ವರ್ಷವೂ ಕೂಡ ನೆರೆ ಬಂದಾಗ ನಮಗೆ ಸಮಸ್ಯೆ ತಪ್ಪಿದಲ್ಲ. ಏಕಾಏಕಿ ನೀರು ತುಂಬಿದ ಪರಿಣಾಮ ಮನೆಯಲ್ಲಿರು ಸದಸ್ಯರನ್ನು ಸ್ಥಳಾಂತರಿಸಲು ಕಷ್ಟವಾಗುತ್ತದೆ. 160ರಿಂದ 180 ಕುಟುಂಬಬಸ್ಥರು ವಾಸಿಸುವ ಈ ಸ್ಥಳದಲ್ಲಿ ನೆರೆ ಬಂದ ಸಮಯ ಎಲ್ಲರೂ ಬೇರೆಡೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ನೀರು ಹರಿದು ಹೋಗುವ ಜಾಗಗಳಲ್ಲಿ ಮಣ್ಣು ತುಂಬಿದ್ದರಿAದ ನೀರು ಹರಿದುಹೋಗದೆ ಅಲ್ಲಿಯೇ ತುಂಬಿ ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತದೆ. ಈ ಕುರಿತು ಸಂಬoದಪಟ್ಟಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದರು.
ಇನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಳಜಿ ಕೇಂದ್ರ ತೆರೆಯಲಾಗಿದ್ದು, 28 ಕುಟುಂಬದ 108 ಜನ ಆಶ್ರಯ ಪಡೆದಿದ್ದಾರೆ. ಬೆಳಿಗ್ಗೆ ಚಹ ತಿಂಡಿ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದ್ದು ಸಂತ್ರಸ್ತರು ನೆರೆ ಕಡಿಮೆಯಾಗುವವರೆಗೆ ಖಾಳಜಿ ಕೇಂದ್ರದಲ್ಲಿ ತಂಗಲಿದ್ದಾರೆ.
ವಿಸ್ಮಯ ನ್ಯೂಸ್, ನಾಗೇಶ ದೀವಗಿ, ಕುಮಟಾ