Focus News
Trending

ಅಂಕೋಲಾ ತಾಲೂಕಾ ಆರೋಗ್ಯಾಧಿಕಾರಿಯಾಗಿ ಡಾ. ಜಗದೀಶ ನಾಯ್ಕ ವರ್ಗಾವಣೆ ಮಾಡಿ ಸರ್ಕಾರ ಆದೇಶ

ಗೋಕರ್ಣ ಪಿಎಚ್ ಇಂದ ಅಂಕೋಲಾಕ್ಕೆ ವರ್ಗವಣೆ. ಟಿ.ಹೆಚ್ ಓ ಹುದ್ದೆಯಲ್ಲಿದ್ದ ನಿತಿನ್ ಹೊಸ್ಮೋಲಕರ ಮರಳಿ ಹಾರವಾಡ ಪಿ. ಎಚ್. ಸಿ.ಗೆ ಅಂಕೋಲಾ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ರಾಜ್ಯದ ಬೇರೆ ಬೇರೆ ಪ್ರದೇಶಗಳ ಆರೋಗ್ಯ ಇಲಾಖೆಯ ಜಿಲ್ಲಾ ಕಾರ್ಯಕ್ರಮ ಅಧಿಕಾರಿ, ತಾಲೂಕು ವೈದ್ಯಾಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ಪಟ್ಟಿಯ ಕ್ರಮಾಂಕ 3 ರಲ್ಲಿರುವ,ಹಾಲಿ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಜಗದೀಶ ಡಿ ನಾಯ್ಕ ಇವರನ್ನು ಅಂಕೋಲಾ ತಾಲೂಕು ಆರೋಗ್ಯಾಧಿಕಾರಿ (ಖಾಲಿ ಇದ್ದ ಸ್ಥಾನಕ್ಕೆ) ಹುದ್ದೆಗೆ ವರ್ಗಾಯಿಸಲಾಗಿದೆ.

ಡಾ.ಜಗದೀಶ ನಾಯ್ಕ ಅವರು ಗ್ರಾಮೀಣ ಭಾಗವಾದ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ ಜನಾನುರಾಗಿಯಾಗಿದ್ದರು.ಅವರು ಈಗ ಅಂಕೋಲಾದ ಟಿ ಎಚ್ ಓ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ,ಕರೋನ ಮತ್ತಿತರ ಸಂದರ್ಭಗಳಲ್ಲಿ ಉತ್ತಮ ಸೇವೆ ಸಲ್ಲಿಸಿ, ಅಂಕೋಲಾದಲ್ಲಿ ಟಿ.ಎಚ್ ಓ ಆಗಿ ಕರ್ತವ್ಯ ನಿರ್ವಹಿಸಿ ಜನರಿಗೆ ಪರಿಚಿತರಾಗಿದ್ದ ಡಾ. ನಿತೀನ್ ಹೋಸ್ಮೇಲಕರ ಅವರು, ಈ ಹಿಂದಿನ ತಮ್ಮ ಮೂಲ ಸ್ಥಾನಕ್ಕೆ ಮರಳುವಂತಾಗಿದ್ದು, ಹಾರವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಸೇವೆ ಮುಂದುವರಿಸಬೇಕಿದೆ. ಈ ಹಿಂದೆ 2002ರಲ್ಲಿ ಹಟ್ಟಿಕೇರಿ, 2004 ರಲ್ಲಿ ಬೆಳಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾಗಿ, ತದನಂತರ 2007 ರಿಂದ 2012 ವರೆಗೆ ಅಂಕೋಲಾ ತಾಲೂಕ್ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಯಾಗಿ, 2012 ರಿಂದ 2016ರ ವರೆಗೆ ಅಂಕೋಲಾ ತಾಲೂಕಾಸ್ಪತ್ರೆ ಹೆರಿಗೆ ,ಶಸ್ತ್ರಚಿಕಿತ್ಸೆ ಗೆ ಎಫ ಅರ್ ಯು ಸೆಂಟರ್ ನ ಅರವಳಿಕೆ ವೈದ್ಯರಾಗಿ ಅಂಕೋಲಾ ತಾಲೂಕಿನಲ್ಲಿ ಬೇರೆ ಬೇರೆ ಹಂತದ ಹುದ್ದೆ ನಿಭಾಯಿಸಿ ದೀರ್ಘಾವಧಿ ಸೇವಾ ಅನುಭವ ಹೊಂದಿದ್ದಾರೆ.

ನಂತರ 2016 ರಿಂದ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದ ಹ ವೈದ್ಯಾಧಿಕಾರಿಯಾಗಿ, ಹಾಗೂ ಬಂಕಿಕೊಡ್ಲ ಆಡಳಿತ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆ ಆದೇಶ ಜಾರಿಯಾಗುವಾಗ ಗೋಕರ್ಣ ಆಡಳಿತ ವೈದ್ಯಾಧಿಕಾರಿಯಾಗಿಯೇ ಸೇವೆ ಸಲ್ಲಿಸುತ್ತಿದ್ದು, ಇದೀಗ ಮತ್ತೆ ಅಂಕೋಲಾ ತಾಲೂಕಿಗೆ ವರ್ಗಾವಣೆಗೊಂಡು,ತಾಲೂಕ ಆರೋಗ್ಯ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಂಕೋಲಾದ ನೂತನ ಟಿ ಎಚ್ ಓ ಆಗಿ ಸೇವೆ ಸಲ್ಲಿಸಿರುವ ಡಾ ಜಗದೀಶ ನಾಯ್ಕ, ಈ ಭಾಗದ ಜನರಿಗೆ ಮತ್ತಷ್ಟು ಆರೋಗ್ಯ ಸೇವೆ ನೀಡುವಂತಾಗಲಿ ಎಂದು ತಾಲೂಕಿನ ಜನತೆ ಆಶಿಸುತ್ತಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button