ಜಿಲ್ಲಾ ಪೊಲೀಸರು ಹೇಳಿದ್ದೇನು?
ಇಂಥ ಸುದ್ದಿಯನ್ನು ನಂಬಬೇಡಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯೂ JMB ಉಗ್ರರ ಅಡಗುತಾಣವಾಯ್ತು, ಶಾಂತಿಯ ನಗರಿ ಶಿರಸಿ JMB ಉಗ್ರರು ಕರಿನೆರಳು? ಹೀಗೆ ಇಂಥ ಹಲವು ಸುದ್ದಿಗಳು ಇಂದು ಎಲ್ಲೆಡೆ ಹರಿದಾಡುತ್ತಿದ್ದವು. ಈಗ ಇದು ಇದು ಸುಳ್ಳು ಸುದ್ದಿಯಾಗಿದೆ ಎಂಬುದು ಬಹಿರಂಗವಾಗಿದೆ.
ಶಿರಸಿ ನಗರದಲ್ಲಿ ವಾರದ ಹಿಂದೆ ಶೋಧ ಕಾರ್ಯ ನಡೆಸಿರುವ ಎಸ್ಐಎಸ್ಡಿ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆಯು ಕೆಲವರನ್ನು ವಶಕ್ಕೆ ಪಡೆದು ವಿಚಾರಿಸಿ ಬಿಡುಗಡೆ ಮಾಡಿದೆ. ಬನವಾಸಿಯ ಯುವಕನೊಬ್ಬನಿಂದ ಒಂಬತ್ತು ಸಿಮ್ ವಶಪಡಿಸಿಕೊಳ್ಳಲಾಗಿದ್ದು, ಇದನ್ನು ಉಗ್ರ ಸಂಘಟನೆಗೆ ಬಳಸಿಕೊಳ್ಳಲಾಗಿತ್ತು ಎಂಬೆಲ್ಲ ಸುದ್ದಿ ಎಲ್ಲೆಡೆ ಹರಿದಾಡಿದ್ದವು.
ಇದು ಸುಳ್ಳು ಸುದ್ದಿ. ಈ ತರಹದ ಯಾವುದೇ ಮಾಹಿತಿಗಳಿದ್ದಲ್ಲಿ ಜಿಲ್ಲಾ ಪೋಲೀಸ್ ಕಛೇರಿಯ ಪತ್ರಿಕಾ ಪ್ರಕಟಣೆ ಮೂಲಕ ನೀಡಲಾಗುವುದು. ಈ ರೀತಿಯ ಸುಳ್ಳು ವದಂತಿ ಸೃಷ್ಟಿಸಿ ಹರಿಬಿಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೋಲೀಸ್ ಕಛೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆ ನೀಡಿ ಮಾಹಿತಿ ನೀಡಿದ್ದಾರೆ.
ಬ್ಯೂರೋ ರಿಪೋರ್ಟ್ , ವಿಸ್ಮಯ ನ್ಯೂಸ್
- ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ಕೇಣಿಯಲ್ಲಿ ಸರ್ವಋತು ಆಳ ಸಮುದ್ರ ಗ್ರೀನ್ಫೀಲ್ಡ್ ಬಂದರಿನ ಅಭಿವೃದ್ಧಿ
- ವಿದ್ಯಾರ್ಥಿ ಸಂಸತ್ ಉದ್ಘಾಟನೆ ಹಾಗೂ ಬರಹ ಪಠ್ಯ ವಿತರಣೆ
- ಕಲಿಕಾ ಸಾಮಗ್ರಿ ವಿತರಣೆ ನೆಪದಲ್ಲಿ ನೆರವು ನೀಡುವುದು ಬೇಡವೇ ಬೇಡ : JSW ಕಂಪನಿ ವಿರುದ್ಧ ಮತ್ತೆ ಸ್ಥಳೀಯ ಮೀನುಗಾರರ ಆಕ್ರೋಶ
- ವಿವೇಕನಗರ ವಿಕಾಸ ಸಂಘದಿಂದ ‘ಮಾಸದ ಕಾರ್ಯಕ್ರಮ
- ಅಂಕೋಲಾ ರೂರಲ್ ರೋಟರಿ ಕ್ಲಬ್ ಅಧ್ಯಕ್ಷರಾಗಿ ಪುಷ್ಪಲತಾ ನಾಯಕ, ಕಾರ್ಯದಶಿಯಾಗಿಸದಾನಂದ ಆಯ್ಕೆ