Focus News
Trending

ಹಿರೇಗುತ್ತಿಯ ಮಹಾತ್ಮಾಗಾಂಧೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪಾಲಕರ ಸಭೆ

ಕುಮಟಾ: “ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡಬೇಕು” ಎಂಬ ಮಾತಿನಂತೆ ಉತ್ತಮ ಶಿಕ್ಷಣದ ತಳಹದಿಯಲ್ಲಿ ಅತ್ಯುತ್ತಮ ಶಿಕ್ಷಣವನ್ನು ನೀಡುವ ದೃಷ್ಠಿಯಿಂದ ಶ್ರೀ ಮಹಾತ್ಮ್ಮಾಗಾಂಧೀ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಾತ್ಮಗಾಂಧೀ ಆಂಗ್ಲ ಮಾಧ್ಯಮ ಶಾಲೆಯು ಅತ್ಯುತ್ತಮ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆಯುತ್ತಿದೆ.

ಇಂತಹ ಶಿಕ್ಷಣಕ್ಕೆ ಸಾಕ್ಷಿಯಾದಂತೆ ದಿನಾಂಕ 15-03-2022 ರಂದು ಪಾಲಕರ ಸಭೆಯನ್ನು ಮಕ್ಕಳ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭ ಮಾಡಲಾಯಿತು. ಪಾಲಕರ ಸಭೆಯಲ್ಲಿ ಎಲ್ಲಾ ಪಾಲಕರು ಹಾಜರಿದ್ದು ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ, ಮೆಡಲ್‌ಗಳನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ. ಹೊನ್ನಪ್ಪ ನಾಯಕರವರು ಮಾತನಾಡಿ “ವಿದ್ಯಾರ್ಥಿಗಳಿಗೆ ಒಂದು ನಿರ್ದೀಷ್ಟ ಗುರಿ ಇರಬೇಕು ಆ ಗುರಿಯ ಸಫಲತೆಯಲ್ಲಿ ಅವಿರತ ಪ್ರಯತ್ನ ಮುಖ್ಯ” ಎಂದರು. ಹಾಗೂ ವಿದ್ಯಾರ್ಥಿಗಳಿಗೆ ಶಾಲೆಯ ಸೌಲಭ್ಯಗಳು ಮುಂದಿನ ಶಿಕ್ಷಣಕ್ಕೆ ಶಾಲೆಯ ಅಭಿವೃಧ್ಧಿಯ ಕಾರ್ಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಶಾಂತಿಕಾoಬ ಹೈಸ್ಕೂಲ್ ಹೆಗಡೆ ಅಧ್ಯಕ್ಷರಾದ ಶ್ರೀ ರಾಮನಾಥ ಧೀರು ಶಾನಭಾಗರವರು ಮಾತನಾಡಿ “ಹಿರೇಗುತ್ತಿಯ ಮಹಾತ್ಮಾಗಾಂಧೀ ಆಂಗ್ಲ ಮಾಧ್ಯಮ ಶಾಲೆಯ ಬಾಲ ವಿದ್ಯಾರ್ಥಿ ಪ್ರತಿಭೆಗಳ ಶಿಸ್ತು,ಶಾಲೆಯ ವಾತಾವರಣ ಅತ್ಯಂತ ಅಚ್ಚುಕಟ್ಟಾಗಿದ್ದು ಮಕ್ಕಳ ಕಲಿಕೆಗೆ ಪೂರಕವಾಗಿದೆ. ಬಾಲಕ-ಪಾಲಕ-ಶಿಕ್ಷಕ ಕಾಯಾ-ವಾಚಾ-ಮನಸ್ಸಾ ತೊಡಗಿಕೊಂಡಾಗ ಶೈಕ್ಷಣಿಕ ಪ್ರಗತಿ ಸಾಧ್ಯ” ಎಂದರು.

ಕಾರ್ಯಕ್ರಮದಲ್ಲಿ ಮಹಾತ್ಮ್ಮಾಗಾಂಧೀ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಶ್ರೀಕಾಂತ ನಾಯಕ, ಪಾಲಕರ ಪ್ರತಿನಿಧಿ ಪ್ರವೀಣ ನಾಯಕ ಹಿಲ್ಲೂರು, ನೇತ್ರಾವತಿ ಆಚಾರಿ ಹಾಗೂ ಸೆಕೆಂಡರಿ ಹೈಸ್ಕೂಲ್ ಶಿಕ್ಷಕರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಸುಮನ ಫರ್ನಾಂಡೀಸ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಜಯಶ್ರೀ ಪಟಗಾರ ಪ್ರಶಸ್ತಿ ವಿಜೇತರ ಯಾದಿ ವಾಚಿಸಿದರು. ಶಿಕ್ಷಕಿ ತನುಜಾ ಹರಿಕಂತ್ರ ಸಹಕರಿಸಿದರು. ವಸಂತಬಾಯಿ ಎಮ್ ವಂದಿಸಿದರು. ಒಟ್ಟಿನಲ್ಲಿ ಮಹಾತ್ಮಾಗಾಂಧಿ ಆಂಗ್ಲಮಾಧ್ಯಮ ಶಾಲೆಯ ಈ ಒಂದು ದಿನದ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು.

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button