Big News
Trending

ರಕ್ಷಣೆಗೆ ತೆರಳಿದ ಉರಗ ರಕ್ಷಕನ ಮೇಲೆ ಎರಗಿದ ಬೃಹತ್ ಕಾಳಿಂಗ ಸರ್ಪ: ದಿಕ್ಕಾಪಾಲಾಗಿ ಓಡಿದ ಸಾರ್ವಜನಿಕರು

ಮನೆಯ ಸ್ನಾನಗ್ರಹದ ಮೇಲ್ಛಾವಣಿಯಲ್ಲಿ ಕಾಳಿಂಗ ಅಡಗಿಕೊಂಡಿತ್ತು. ಮನೆಯವರು ಬೃಹತ್ ಗಾತ್ರದ ಹಾವನ್ನು ನೋಡಿ ಕಂಗಾಲಾಗಿದ್ದರು. ಉರಗ ರಕ್ಷಕ ಕೂಡಾ ಕೆಲ ಆತಂಕಕಾಗಿ ಕ್ಷಣಗಳನ್ನು ಎದುರಿಸಬೇಕಾಯ್ತು.

ಶಿರಸಿ: ಕಾಳಿಂಗ ಸರ್ಪದ ರಕ್ಷಣೆಗೆ ಉರಗ ರಕ್ಷಕ ತೆರಳಿದ್ದು, ಈ ವೇಳೆ ಉರಗ ರಕ್ಷಕನ ಮೇಲೆಯೇ ಬೃಹತ್ ಹಾವು ಎರಗಿದ್ದು, ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಘಟನೆ ಶಿರಸಿ ತಾಲೂಕಿನ ರಾಗಿಹೊಸಳ್ಳಿಯಲ್ಲಿ ನಡೆದಿದೆ. ಮನೆಯ ಸ್ನಾನಗ್ರಹದ ಮೇಲ್ಛಾವಣಿಯಲ್ಲಿ ಕಾಳಿಂಗ ಅಡಗಿಕೊಂಡಿತ್ತು. ಮನೆಯವರು ಬೃಹತ್ ಗಾತ್ರದ ಹಾವನ್ನು ನೋಡಿ ಕಂಗಾಲಾಗಿದ್ದರು. ಒಂದುವರೆ ತಾಸಿಗೂ ಅಧಿಕ ಕಾಲ ಹಾವು ಅಲ್ಲೆ ಇದ್ದು, ಇದನ್ನು ನೋಡಿದ ಮನೆಯರು ಗಾಬರಿಗೊಂಡು, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಅರಣ್ಯಾಧಿಕಾರಿಗಳ ಕರೆಯ ಮೇರೆಗೆ ಉರಗ, ಸಂರಕ್ಷಕ ಪವನ್ ನಾಯ್ಕ ಸ್ಥಳಕ್ಕೆ ತೆರಳಿದ್ದರು. ಹಾವು ಎತ್ತರದಲ್ಲಿದ್ದಿದ್ದರಿಂದ ಸ್ನೇಕ್ ರೆಸ್ಕ್ಯೂ ಸ್ಟಿಕ್ ಮೂಲಕ ಪವನ್ ಹಾವನ್ನು ಕೆಳಗಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಇದು ಕಾಳಿಂಗ ಸರ್ಪವೆಂಬುದು ತಿಳಿದಿದ್ದು, ಕ್ಷಣಮಾತ್ರದಲ್ಲಿ ಕಾಳಿಂಗ ಪವನ್ ನಾಯ್ಕ ಅವರ ಮೇಲೆ ಎರಗಿದೆ.

ಈ ವೇಳೆ ಸ್ಥಳದಲ್ಲಿದ್ದವರು ಚಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಬೃಹತ್ ಕಾಳಿಂಗ ಸರ್ಪ ಮೇಲೆರಗಿದ ವೇಳೆ, ತಕ್ಷಣವೇ ಹಿಂದೆ ಸರಿದಿದ್ದರಿಂದಾಗಿ ಉರಗ ರಕ್ಷಕ ಪವನ್ ನಾಯ್ಕ ಹಾವಿನಿಂದ ಬಚಾವಾಗಿದ್ದಾರೆ.ನಂತರ ಕಾಳಿಂಗವನ್ನ ಹಿಡಿದು ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button