ಅಂಕೋಲಾ : ತಾಲೂಕಿನ ಹಾಗೂ ಸುತ್ತಮುತ್ತಲ ಇತರೆಡೆ ಜನ ಮಾನಸದಲ್ಲಿ ತಮ್ಮ ಬಹುಮುಖಿ ವ್ಯಕ್ತಿತ್ವ ದ ಪ್ರಕಾಶ ಕುಂಜಿ ಅಕಾಲಿಕವಾಗಿ ವಿಧಿವಶರಾಗಿದ್ದಾರೆ. ಇವರ ನಿಧನದ ವಾರ್ತೆ ಕೇವಲ ಆವರ ಕುಟುಂಬ ವಲ್ಲದೆ ಅಂಕೋಲೆಯೇ ಶೋಕದಲ್ಲಿರುವಂತೆ ಮಾಡಿದೆ..
ದೈಹಿಕ ಶಿಕ್ಷಕ ರಾಗಿ ಹಲವು ಕ್ರೀಡಾ ಪ್ರತಿಭೆಯನ್ನು ಜಿಲ್ಲೆಗೂ ನಾಡಿಗೂ ಪರಿಚಯಿಸಿದ ಪ್ರೋತ್ಸಾಹಿಸಿದ ಒಬ್ಬ ಉತ್ತಮ ಶಿಕ್ಷಕರಾಗಿದ್ದ
ಅವರದು ಬಹುಮುಖ ವ್ಯಕ್ತಿತ್ವ ಒಬ್ಬ ಸಮಾಜ ಸೇವಕ. ಸಾಹಿತ್ಯ ಪ್ರೀತಿಯ ಸಹೃದಯಿ ಇಂದಿಗೂ ಕ ಸಾ ಪ ಕರ್ನಾಟಕ ಸಂಘ ದಿನಕರ ಪ್ರತಿಷ್ಠಾನದ ಒಬ್ವ ಸಕ್ರೀಯ ಕಾರ್ಯಕರ್ತ ಕೂಡ.
ರಂಗ ಕಲಾವಿದರಾಗಿ ವಿಷ್ಣು ನಾಯ್ಕರ ರಾಘವೇಂದ್ರ ಪ್ರಕಾಶನ ದ ರಂಗ ಬಳಗದ ಕಲಾವಿದರಾಗಿಯೂ ಗಮನ ಸೆಳೆದಿದ್ದರು. ಜೋಡಿ ಹಕ್ಕಿ ಸಿನಿಮಾ ಡಲ್ಲಿಯೇ ಇವರು ಮತ್ತು ಇವರ ಮಗಳು ನಿಧಿ ಅಭಿನಯಿಸಿದ್ದರು. ಶಿಕ್ಷಕ ವೃತ್ತಿಗೆ ಮಾದರಿಯಾದ ಕುಂಜೀ 3 ದಶಕದ ಕಾಲ ಕೆನರಾ ವೆಲ್ಫೇರ್ ಟ್ರಸ್ಟ್ ನ ಶಿರಸಿ ವ್ಯಾಪ್ತಿಯ ಜನತಾ ವಿದ್ಯಾಲಯ , ಬಳಿಕ 2003 ರಿಂದ ಅಂಕೋಲಾದ ಪೀ ಎಂ ಹೈ ಸ್ಕೂಲ್ ನ ದೈಹಿಕ ಶಿಕ್ಷಕ ರಾಗಿ ಬಂದು ಇಲ್ಲಿಯೇ ಸೇವಾ ನಿವೃತ್ತ ರಾದರು ಕೂಡ ಇಂದಿಗೂ ಆ ಸಂಸ್ಥೆಗೆ ತಮ್ಮ ಬಿಡುವಿನ ವೇಳೆಯಲ್ಲಿ ಗೌರವ ಸೇವೆ ಸಲ್ಲಿಸುತ್ತಿದ್ದರು ಎಂಬುದು ಇನ್ನು ಇತಿಹಾಸ.
ಆವರ ನಿವೃತ್ತಿಯ ನಂತರ ಅವರ ಅಭಿಮಾನಿ ಗಳೆಲ್ಲ ಸೇರಿ ಅರ್ಪಿಸಿದ “ನೇಸರ ” ಕೃತಿಯಲ್ಲಿ ಆವರ ಬದುಕಿನ ಪೂರ್ಣ ಪಾಠ ಇದೇ.
ಕಳೆದ ಕೆಲವು ವರ್ಷದ ಹಿಂದೆ ಇವರ ಪತ್ನಿಯೂ ನಿಧನ ಹೊಂದಿದ್ದರು.ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದದರು. ಕಸಾಪ ಸದಸ್ಯ, ದಿನಕರ ವೇದಿಕೆ ಸದಸ್ಯ, ಪಿ ಎಮ್ ಹೈಸ್ಕೂಲನಲ್ಲಿ ಕೆಲವು ಕಾಲ ಸೇವೆ. ಬಾಳೆಗುಳಿಯ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ತರಬೇತುದಾರರಾಗಿ 1987 ರಿಂದ ಕೆಲವು ವರ್ಷ ಕೆಲಸ ಮಾಡಿದ್ದಾರೆ. ಕೋಕೋ, ವಾಲಿಬಾಲ್, ಕಬಡ್ಡಿ, ಕ್ರಿಕೆಟ್ ಕೋಚ್ ಆಗಿ, ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಪತ್ನಿ ತೀರಿಕೊಂಡಿದ್ದರು. ಪುತ್ರಿ ಜೋಡಿಹಕ್ಕಿ ಸಿನೆಮಾದಲ್ಲಿ ಅಭಿನಯಿಸಿದ್ದರು.ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದದರು. ಕಸಾಪ ಸದಸ್ಯ, ದಿನಕರ ವೇದಿಕೆ ಸದಸ್ಯ, ಪಿ ಎಮ್ ಹೈಸ್ಕೂಲನಲ್ಲಿ ಕೆಲವು ಕಾಲ ಸೇವೆ. ಬಾಳೆಗುಳಿಯ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ತರಬೇತುದಾರರಾಗಿ 1987 ರಿಂದ ಕೆಲವು ವರ್ಷ ಕೆಲಸ ಮಾಡಿದ್ದಾರೆ.
ಕೋಕೋ, ವಾಲಿಬಾಲ್, ಕಬಡ್ಡಿ, ಕ್ರಿಕೆಟ್ ಕೋಚ್ ಆಗಿ, ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಪತ್ನಿ ತೀರಿಕೊಂಡಿದ್ದರು. ಪುತ್ರಿ ಜೋಡಿಹಕ್ಕಿ ಸಿನೆಮಾದಲ್ಲಿ ಅಭಿನಯಿಸಿದ್ದರು.ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದದರು. ಕಸಾಪ ಸದಸ್ಯ, ದಿನಕರ ವೇದಿಕೆ ಸದಸ್ಯ, ಪಿ ಎಮ್ ಹೈಸ್ಕೂಲನಲ್ಲಿ ಕೆಲವು ಕಾಲ ಸೇವೆ. ಬಾಳೆಗುಳಿಯ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ತರಬೇತುದಾರರಾಗಿ 1987 ರಿಂದ ಕೆಲವು ವರ್ಷ ಕೆಲಸ ಮಾಡಿದ್ದಾರೆ. ಕೋಕೋ, ವಾಲಿಬಾಲ್, ಕಬಡ್ಡಿ, ಕ್ರಿಕೆಟ್ ಕೋಚ್ ಆಗಿ, ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಪತ್ನಿ ತೀರಿಕೊಂಡಿದ್ದರು. ಪುತ್ರಿ ಜೋಡಿಹಕ್ಕಿ ಸಿನೆಮಾದಲ್ಲಿ ಅಭಿನಯಿಸಿದ್ದರು. ಬಾಳೆಗುಳಿಯ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ತರಬೇತುದಾರರಾಗಿ 1987 ರಿಂದ ಕೆಲವು ವರ್ಷ ಕೆಲಸ ಮಾಡಿದ್ದರು. ಕೋಕೋ, ವಾಲಿಬಾಲ್, ಕಬಡ್ಡಿ, ಕ್ರಿಕೆಟ್ ಕೋಚ್ ಆಗಿ, ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ತಾಲೂಕಿನ ಸಾಂಸ್ಕೃತಿಕ , ಧಾರ್ಮಿಕ ,ಸಾಮಾಜಿಕ ಮತ್ತಿತರ ರಂಗದ ನೂರಾರು ಕಾರ್ಯಕ್ರಮಗಳಲ್ಲಿ ಸಂಘಟನೆಗೆ ವಿಶೇಷ ಬೆನ್ನೆಲುಬಾಗಿ ನಿಲ್ಲುತ್ತಿದ್ದ ಇವರು ,ಪ್ರತಿದಿನ ಬೆಳಿಗ್ಗೆ ಜೈ ಹಿಂದ್ ಹೈ ಸ್ಕೂಲ್ ಮೈದಾನದ ಪಕ್ಕದ ರಸ್ತೆ ಅಂಚಿಗೆ ನಿಂತುಕೊಂಡೇ ದಿನಪತ್ರಿಕೆ ಓದಿ ಮುಗಿಸಿ ,ದೈನಂದಿನ ಇತರ ಕಾರ್ಯಗಳನ್ನು ಮಾಡುತ್ತಿದ್ದರು. ಪ್ರತಿಷ್ಠಿತ ಅಂಕೋಲಾ ಅರ್ಬನ್ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಇವರು ಈ ಬಾರಿ ಮತ್ತೆ ಚುನಾವಣೆ ಎದುರಿಸಲು ಸಿದ್ದರಾಗುತ್ತಿದ್ದರು. ಅಜ್ಜಿ ಕಟ್ಟ ರಸ್ತೆಗೆ ಹೊಂದಿಕೊಂಡಿರುವ ಇವರ ಮನೆಯಲ್ಲಿ ಡಿ 19 ರ ಗುರುವಾರ ,ಆರೋಗ್ಯದಲ್ಲಿ ಹಠಾತ್ ಸಮಸ್ಯೆ ಉಲ್ಬಣಸಿ ಮನೆಯಲ್ಲಿ ಕುಸಿದು ಬಿದ್ದು ಕೆಲ ಹೊತ್ತಿನ ಬಳಿಕ ಅದು ಸಂಬಧಿಗಳ ಮತ್ತು ಸ್ಥಳೀಯರ ಗಮನಕ್ಕೆ ಬಂದಿದೆ ಎನ್ನಲಾಗಿದ್ದು ,ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ .
ಮಗಳು ಕೇರಳದಲ್ಲಿ ವಾಸವಾಗಿದ್ದು ಅವರು ಬಂದ ನಂತರವಷ್ಟೇ ಮೃತರ ಅಂತ್ಯಕ್ರಿಯೆ ಡಿ 20 ರಂದು ಇಲ್ಲವೇ 21 ರಂದು ನೆರವೇರಿಸುವ ಬಗ್ಗೆ ತಿಳಿದುಬರಬೇಕಿದೆ. ಇವರ ಅಕಾಲಿಕ ನಿಧನಕ್ಕೆ ಶಾಸಕ ಸತೀಶ ಸೈಲ್ , ಜಿಲ್ಲಾ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ , ಅಂಕೋಲಾ ಆರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ ನಾರ್ವೇಕರ ಹಾಗೂ ಮತ್ತಿತರ ನಿರ್ದೇಶಕರು , ಬಂಡೀ ಬಾಜಾರ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸೇರಿದಂತೆ ತಾಲೂಕಿನ ವಿವಿಧ ಸಂಘ ಸಂಸ್ಥೆಗಳು , ಶಾಲಾ ಕಾಲೇಜುಗಳ ಮುಖ್ಯಸ್ಥರು ,ಶಿಕ್ಷಕ ವೃಂದ ,ವಿದ್ಯಾರ್ಥಿ ಬಳಗ , ವಿವಿಧ ಸಮಾಜದ ಗಣ್ಯರು ,ನಿವೃತ್ತ ಶಿಕ್ಷಕರು ಮತ್ತು ಗೆಳೆಯರ ಬಳಗ ಹಾಗೂ ಹಾಲಿ ಹಾಗು ಮಾಜಿ ಜನಪ್ರತಿನಿಧಿಗಳೇವಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ನೂರಾರು ಜನ ಪ್ರಮುಖರು ಪ್ರಕಾಶ್ ಕುಂಜಿ ಮನೆಯದುರು ಜಮಾಯಿಸಿ ಕಂಬನಿ ಮಿಡಿಯುತ್ತಿರುವುದು ಕಂಡುಬಂದಿದೆ. ಚೈತನ್ಯದ ಚಿಲುಮೆಯಾಗಿ ಎಲ್ಲರಿಗೂ ಸ್ಪೂರ್ತಿಯಂತಿದ್ದ ಪ್ರಕಾಶ ಭೌತಿಕವಾಗಿ ಅಂಕೋಲೆಯಿಂದ ಮರೆಯಾದರೂ ,ಅವರ ವ್ಯಕ್ತಿತ್ವ ಹಲವು ಅಂಕೋಲಿಗರ ಮನದಲ್ಲಿ ಮರೆಯದ ಪ್ರಕಾಶವಾಗಿ ಅಚ್ಚೊತ್ತಿದಂತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ