
ಅಂಕೋಲಾ: ತಾಲೂಕಿನ ಬಬ್ರುವಾಡಾ ಗ್ರಾಮದ ಖಾಸಗಿ ವ್ಯಕ್ತಿಗೆ ಸೇರಿದ ಗದ್ದೆ ಪ್ರದೇಶದ ಬಾವಿಯೊಂದರಲ್ಲಿ ಆಕಸ್ಮಿಕವಾಗಿ ನಾಗರ ಹಾವೊಂದು ಬಿದ್ದು ಕುಟುಂಬಸ್ಥರು ಮತ್ತು ಅಕ್ಕ ಪಕ್ಕದ ಮನೆಯವರಲ್ಲಿ ಆತಂಕ ಮೂಡಿಸಿತ್ತು. ನೆಲ ಮಟ್ಟದ ಬಾವಿ ಹಾಗೂ ಅಲ್ಪ ನೀರಿರುವುದನ್ನು ಮನಗಂಡ ಮನೆಯವರು ಹನುಮಟ್ಟದ ಸತೀಶ್ ನಾಯ್ಕ ಇವರ ನೆರವಿನಿಂದ ಹಾವನ್ನು ಮೇಲಿತ್ತಲು ಯೋಜನೆ ರೂಪಿಸಿ , ಉರಗ ಸಂರಕ್ಷಕ ಅವರ್ಸಾದ ಮಹೇಶ ನಾಯ್ಕ ಅವರಿಗೆ ಕರೆ ಮಾಡಿ , ಹಾವಿನ ಸಂರಕ್ಷಣೆಗೆ ಬರುವಂತೆ ವಿನಂತಿಸಿದ್ದರು. ಸ್ಥಳಕ್ಕೆ ಬಂದ ಮಹೇಶ ನಾಯ್ಕ , ಸ್ಥಳೀಯರ ಸಹಕಾರದಲ್ಲಿ ಪ್ಲಾಸ್ಟಿಕ್ ಬಾಕ್ಸ್ ಮೂಲಕ ಹಾವನ್ನು ಬಾವಿಯಿಂದ ಮೇಲೆತ್ತಿ ಸ್ಥಳೀಯರ ಆತಂಕ ದೂರ ಮಾಡಿದರು.
ಕೃಷ್ಣ ನಾಯ್ಕ ಬಬ್ರುವಾಡ , ಹಾಗೂ ಕುಟುಂಬ ಸದಸ್ಯರಿದ್ದರು. ಬಿಸಿಲಿನ ಬೇಗೆ ,ಸಂತಾನ ವೃದ್ಧಿ , ನೀರು ಮತ್ತು ಆಹಾರ ಅರಸಿ ಹಾವುಗಳು ಬಿಲ ಬಿಟ್ಟು ಹೊರಬರುತ್ತಿದ್ದು ಸಾರ್ವಜನಿಕರು ಅನಗತ್ಯ ಆತಂಕ ಪಡದೇ , ಅರಣ್ಯ ಇಲಾಖೆ ಇಲ್ಲವೇ ತಮಗೆ ಕರೆ ಮಾಡಿ, ರೈತ ಮಿತ್ರ ಹಾವುಗಳ ಸಂರಕ್ಷಣೆಗೆ ಎಲ್ಲರೂ ಮುಂದಾಗ ಬೆಂಕೇoದು ಮಹೇಶ ನಾಯ್ಕ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಮಹೇಶ ನಾಯ್ಕ ಅವರು ಬಾವಿಯಿಂದ ಮೇಲೆತ್ತಿದ ಹಾವು ಮಹೇಶ ನಾಯ್ಕ ಅವರ ತ ಸೇವಾ ಅನುಭವ ಮತ್ತು ಚಾಕಚಕ್ಯತೆಯಿಂದ ನಿಧಾನವಾಗಿ ಚೀಲ ಸೇರಿದ್ದು , ಉರಗ ಸಂರಕ್ಷಕ ಮಹೇಶ ನಾಯ್ಕರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ಸೂಚಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ