
ಕುಮಟಾ: ಮುಂಗಾರು ಮಳೆ ಆರಂಭವಾಗುತ್ತಿದ್ದ ಹಾಗೆ ಹಾವುಗಳ ಕಾಟ ಜೋರಾಗಿದೆ. ಮಳೆಗಾಲ ಆರಂಭವಾದಾಗ ಹಾವುಗಳು ಮರಿ ಇಡುತ್ತವೆ. ಅಲ್ಲದೆ, ಬೆಚ್ಚನೆಯ ಜಾಗವನ್ನು ಅರಸಿ ಬರುವುದರಿಂದ ಮನೆ ಸಮೀಪದ ಸಂದಿಗೊoದಿಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಹೌದು, ಕುಮಟಾ ತಾಲೂಕಿನ ಕತಗಾಲಿನ ಉಪ್ಪಿನಪಟ್ಟಣದಲ್ಲಿ 12 ಅಡಿ ಉದ್ದದ ಬೃಹತ್ ಹಾವೊಂದು ಕಾಣಿಸಿಕೊಂಡಿತ್ತು.
ರಸ್ತೆ, ಚರಂಡಿಯಲ್ಲಿ ಓಡಾಡುತ್ತಿದ್ದ ಕಾಳಿಂಗ ಸರ್ಪ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿತ್ತು. ಅರಣ್ಯ ಇಲಾಖೆಯ ಬೀಟ್ ಫೋರೆಸ್ಟರ್ ಭರತ್ ಅವರಿಗೆ ವಿಷಯ ತಿಳಿಸುತ್ತಿದ್ದಂತೆ ಉರಗ ತಜ್ಞ ಪವನ್ ನಾಯ್ಕ ಅವರನ್ನು ಸ್ಥಳಕ್ಕೆ ಕರೆಯಿಸಿದರು. ಕಾರ್ಯಾರಣೆ ನಡೆಸಿ, 12 ಅಡಿಯ ಹಾವನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು.
ವಿಸ್ಮಯ ನ್ಯೂಸ್, ಕುಮಟಾ